ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಇತ್ತೀಚೆಗೆ ತಮ್ಮ ಮ್ಯಾನೇಜರ್ನನ್ನು ಕೆಲಸದಿಂದ ಕಿತ್ತು ಹಾಕಿದ್ದರು. ಅವನು ರಶ್ಮಿಕಾಗೆ 80 ಲಕ್ಷ ರೂ. ವಂಚಿಸಿದ್ದ. ಆ ವಿಷಯ ತಿಳಿಯುತ್ತಿದ್ದಂತೆಯೇ ರಶ್ಮಿಕಾ ಆತನನ್ನು ಕೆಲಸದಿಂದ ವಜಾ ಮಾಡಿದರು ಎಂದು ವರದಿಯಾಗಿತ್ತು. ಆದರೆ ಇದೀಗ ಈ ಸುದ್ದಿ ಸುಳ್ಳು, ಕೆಲಸ ಕಿತ್ತು ಹಾಕಿದ್ದು ವಂಚನೆಗಾಗಿ ಅಲ್ಲ ಎಂದು ಹೇಳಲಾಗುತ್ತಿದೆ.
ಸದ್ಯ ರಶ್ಮಿಕಾ ಮಂದಣ್ಣ ತಮ್ಮ ಮುಂಬರುವ ಸಿನಿಮಾಗಳ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ನಡುವೆ ಆಕೆಯ ಮ್ಯಾನೇಜರ್ ಆಕೆಯ ಹಣವನ್ನು ಲಪಟಾಯಿಸಿ 80 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ವರದಿಯಾಗಿತ್ತು. ಆದರೆ, ನಟಿಯ ಆಪ್ತ ಮೂಲಗಳು ಈಗ ವರದಿಗಳನ್ನು ತಳ್ಳಿಹಾಕಿವೆ. ರಶ್ಮಿಕಾ ಮತ್ತು ಅವರ ಮ್ಯಾನೇಜರ್ ಸೌಹಾರ್ದಯುತವಾಗಿ ಬೇರ್ಪಟ್ಟಿದ್ದಾರೆ ಎನ್ನಲಾಗಿದೆ. “ರಶ್ಮಿಕಾ ಮಂದಣ್ಣ ಅವರ ಮ್ಯಾನೇಜರ್ನ್ನು ಹಣಕ್ಕಾಗಿ ವಂಚಿಸಿದ್ದಾರೆ ಎಂಬ ಕಾರಣಕ್ಕಾಗಿ ವಜಾ ಮಾಡಿದ್ದಾರೆ ಎಂಬ ಸುದ್ದಿ ಸುಳ್ಳು. ತಮ್ಮ ವೈಯಕ್ತಿಕ ಕಾರಣಗಳಿಂದಾಗಿ ಮ್ಯಾನೇಜರ್ ಮತ್ತು ರಶ್ಮಿಕಾ ಸೌಹಾರ್ದಯುತವಾಗಿ ಬೇರೆಯಾಗಲು ನಿರ್ಧರಿಸಿದ್ದಾರೆʼʼ ಎಂದು ಆಪ್ತ ಮೂಲಗಳು ತಿಳಿಸಿವೆ
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ಕಡೆ ಹೆಚ್ಚು ಗಮನ ಹರಿಸಿದ್ದಾರೆ. ಇನ್ನುಳಿದಂತೆ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತೆಲುಗಿನ ‘ಪುಷ್ಪ- 2’ ಹಾಗೂ ಹಿಂದಿಯ ‘ಅನಿಮಲ್’ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ‘ರೈನ್ಬೋ’ ಎನ್ನುವ ಮಹಿಳಾ ಪ್ರಧಾನ ಚಿತ್ರದಲ್ಲೂ ನಟಿಸುತ್ತಿದ್ದಾರೆ. ‘ಭೀಷ್ಮ’ ಕಾಂಬಿನೇಷನ್ನಲ್ಲಿ ಮತ್ತೆ ನಿತಿನ್ ಜೋಡಿಯಾಗಿ ಒಂದು ಸಿನಿಮಾ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: Rashmika Mandanna: ಮ್ಯಾನೇಜರ್ನನ್ನು ಕೆಲಸದಿಂದ ಕಿತ್ತೆಸೆದ ರಶ್ಮಿಕಾ ಮಂದಣ್ಣ! ಏನಿದು ವಿಷಯ?
ಅವರು ರಣಬೀರ್ ಕಪೂರ್ ಜತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಶ್ರೀನಿವಾಸ್ ಬೆಲ್ಲಂಕೊಂಡ ʻಛತ್ರಪತಿʼ ಚಿತ್ರದಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ. ಈ ಚಿತ್ರವನ್ನು ವಿವಿ ವಿನಾಯಕ್ ನಿರ್ದೇಶಿಸಲಿದ್ದಾರೆ ಮತ್ತು ಎಸ್ಎಸ್ ರಾಜಮೌಳಿ ಅವರ ತಂದೆ ಮತ್ತು ಹಿರಿಯ ಬರಹಗಾರ ವಿ ವಿಜಯೇಂದ್ರ ಪ್ರಸಾದ್ ಬರೆದಿದ್ದಾರೆ. ಚಿತ್ರದಲ್ಲಿ ನುಶ್ರತ್ ಭರುಚ ಕೂಡ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.