Site icon Vistara News

Rashmika Mandanna: ಕೊರಿಯನ್ ನಟ ಜಂಗ್ ಇಲ್ ವೂ ಮತ್ತು ಥಾಯ್ ತಾರೆ ಗಲ್ಫ್ ಕನಾವುತ್ ಜತೆ ರಶ್ಮಿಕಾ

Rashmika Mandanna meets Korean actor Jung Il Woo and Thai star Gulf Kanawut

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮಿಲನ್ ಫ್ಯಾಶನ್ ವೀಕ್ 2023ರಲ್ಲಿ (Milan Fashion Week 2023) ಭಾಗವಹಿಸಿದ್ದಾರೆ. ಪ್ರಪಂಚದಾದ್ಯಂತದ ಕೆಲವು ಪ್ರಮುಖ ಬ್ರ್ಯಾಂಡ್‌ ರಾಯಭಾರಿಗಳ ಜತೆಗೆ ಅವರು ಹೋದಲ್ಲೆಲ್ಲ ಹೃದಯಗಳನ್ನು ಗೆಲ್ಲುತ್ತಿದ್ದಾರೆ. ಒನಿಟ್ಸುಕಾ ಟೈಗರ್‌ (Onitsuka Tiger) ಕಲೆಕ್ಷನ್ ಬಿಡುಗಡೆಗೆ ನಟಿ ಭಾಗವಹಿಸಿದ್ದರು. ಕೊರಿಯನ್ ನಟ ಜಂಗ್ ಇಲ್ ವೂ (Korean actor Jung Il Woo) ಮತ್ತು ಥೈಲ್ಯಾಂಡ್ ನಟ ಗಲ್ಫ್ ಕನಾವುತ್ (Thai star Gulf Kanawut) ಜತೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.

ಇದೀಗ ರಶ್ಮಿಕಾ ಮಂದಣ್ಣ (Rashmika Mandanna) ಇನ್‌ಸ್ಟಾ ಸ್ಟೋರಿಯಲ್ಲಿ ಕೊರಿಯನ್ ನಟ ಜಂಗ್ ಇಲ್ ವೂ ಮತ್ತು ಥೈಲ್ಯಾಂಡ್ ನಟ ಗಲ್ಫ್ ಕನಾವುತ್ ಜತೆ ಇರುವ ಫೋಟೊ ಹಂಚಿಕೊಂಡಿದ್ದಾರೆ. ನಟಿ ಬ್ರ್ಯಾಂಡ್‌ನ ಸಂಪೂರ್ಣ ಬಿಳಿ ಉಡುಪನ್ನು ಧರಿಸಿದ್ದರು ಮತ್ತು ಜಂಗ್ ಇಲ್ ವೂ ಪಕ್ಕದಲ್ಲಿ ಕುಳಿತಿದ್ದರು. ರಶ್ಮಿಕಾ ಮಂದಣ್ಣ ಮಿಲನ್ ಫ್ಯಾಷನ್ ವೀಕ್‌ನಲ್ಲಿ ಭಾಗವಹಿಸಿದ್ದು ಇದೇ ಮೊದಲ ಬಾರಿ.

ಇದನ್ನೂ ಓದಿ: Rashmika Mandanna : ಪ್ರೇಮಿಗಳ ದಿನದಂದು ಪ್ರೇಮಿಯೊಂದಿಗಿನ ವಿಡಿಯೊ ಪೋಸ್ಟ್ ಮಾಡಿ ಶುಭ ಹಾರೈಸಿದ ರಶ್ಮಿಕಾ!

Rashmika Mandanna

ರಶ್ಮಿಕಾ ಮಂದಣ್ಣ ಅವರು ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ʻಮಿಷನ್ ಮಜ್ನುದಲ್ಲಿʼ ಕೊನೆಯದಾಗಿ ಕಾಣಿಸಿಕೊಂಡರು. ಅವರು ಮುಂದೆ ರಣಬೀರ್ ಕಪೂರ್ ಜತೆ ʻಅನಿಮಲ್ʼ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂದೀಪ್ ರೆಡ್ಡಿ ವಂಗಾ ಅವರ ನಿರ್ದೇಶನದ ಈ ಚಿತ್ರವು ಆಗಸ್ಟ್ 2023ರ ಬಿಡುಗಡೆಗೆ ಸಿದ್ಧವಾಗಿದೆ.

Exit mobile version