Site icon Vistara News

Rashmika Mandanna | ಕನ್ನಡದ ನಟಿಮಣಿಯರಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡ ರಶ್ಮಿಕಾ ಮಂದಣ್ಣ!

Rashmika Mandanna

ಬೆಂಗಳೂರು : ಪ್ರತಿ ವರ್ಷದಂತೆ ಈ ವರ್ಷವೂ ಖಾಸಗಿ ಮಾಧ್ಯಮವೊಂದು ನವೆಂಬರ್‌ ತಿಂಗಳಲ್ಲಿ ಅತೀ ಹೆಚ್ಚು ಬಾರಿ ಸುದ್ದಿಯಲ್ಲಿದ್ದ ಕನ್ನಡದ ನಟಿಮಣಿಯರ ಪಟ್ಟಿ ರಿಲೀಸ್ ಮಾಡಿದೆ. ಇದೀಗ ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ (Rashmika Mandanna) ಈ ವರ್ಷದ ನಂಬರ್ ಒನ್ ನಟಿಯಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಸ್ಯಾಂಡಲ್‌ವುಡ್‌ ನಟಿ ಮೋಹಕ ತಾರೆ ರಮ್ಯಾ, ರಚಿತಾ ರಾಮ್‌ ಅವರನ್ನೇ ಮೀರಿಸಿ ಟ್ರೋಲಿಗರಿಗೆ ಕೆಲಸದ ಮೂಲಕ ಉತ್ತರ ಕೊಟ್ಟಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಯಾವಾಗಲೂ ಟ್ರೋಲಿಗೆ ಗುರಿಯಾಗುವ ನಟಿ ರಶ್ಮಿಕಾ ಮಂದಣ್ಣ ಫಿಮೇಲ್‌ ಸ್ಟಾರ್‌ ಪಟ್ಟಿಯಲ್ಲಿ, ಮೊದಲನೇ ಸ್ಥಾನ ಪಡೆದುಕೊಂಡಿದ್ದಾರೆ. ಎರಡನೇ ಸ್ಥಾನ ರಮ್ಯಾ, ಮೂರನೇ ಸ್ಥಾನ ರಚಿತಾ ರಾಮ್, ನಾಲ್ಕನೇ ಸ್ಥಾನ ರಾಧಿಕಾ ಪಂಡಿತ್, ಐದನೇ ಸ್ಥಾನ ಕೆಜಿಎಫ್ 2 ನಟಿ ಶ್ರೀನಿಧಿ ಶೆಟ್ಟಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ | Rashmika Mandanna| ಹ್ಯಾಕ್​ ಆಯ್ತಾ ರಶ್ಮಿಕಾ ಮಂದಣ್ಣ ಇನ್​ಸ್ಟಾಗ್ರಾಂ ಅಕೌಂಟ್​?-ಉಲ್ಟಾ ಅಕ್ಷರಗಳ ಗುಟ್ಟೇನು?

ಕೆಲ ದಿನಗಳಿಂದ ನಟಿ ರಶ್ಮಿಕಾ ಮಂದಣ್ಣ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್‌ ಮಾಡಲಾಗಿದೆ ಎನ್ನುವ ಸುದ್ದಿ ಹರಿದಾಡಿತ್ತು. ಈ ಬಗ್ಗೆ ರಶ್ಮಿಕಾ ಟ್ರೋಲ್‌ಗೆ ಒಳಗಾಗಿದ್ದರು. ರಶ್ಮಿಕಾ ಅವರು ʻಕಾಂತಾರʼ ಸಿನಿಮಾ ನೋಡಿಲ್ಲ, ಸಂದರ್ಶನದಲ್ಲಿ ತಮ್ಮ ಮೊದಲ ನಿರ್ಮಾಣ ಸಂಸ್ಥೆಯ ಹೆಸರು ಹೇಳಲಿಲ್ಲ ಎನ್ನುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅವರನ್ನು ಬ್ಯಾನ್ ಮಾಡುವ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು.

ರಶ್ಮಿಕಾ ಹಿಂದಿ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳಿನಲ್ಲಿ ವಿಜಯ್ ದಳಪತಿ ಜತೆ ಸಿನಿಮಾ ಮಾಡುತ್ತಿದ್ದಾರೆ. ತೆಲುಗಿನಲ್ಲಿ ಪುಷ್ಪ-2 ಸಿನಿಮಾದಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ. 

ಇದನ್ನೂ ಓದಿ | Rashmika Mandanna |ನನ್ನ ವೈಯಕ್ತಿಕ ವಿಚಾರಗಳು ಪ್ರಪಂಚಕ್ಕೆ ಬೇಕಾಗಿಲ್ಲ: ಬ್ಯಾನ್‌ ಬಗ್ಗೆ ರಶ್ಮಿಕಾ ಮಂದಣ್ಣ ರಿಯಾಕ್ಷನ್‌!

Exit mobile version