ಬೆಂಗಳೂರು: ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ರಶ್ಮಿಕಾ ಟಾಲಿವುಡ್ ಅಲ್ಲದೇ ಬಾಲಿವುಡ್ ಸಿನಿರಂಗದಲ್ಲಿಯೂ ಮಿಂಚಿದ್ದಾರೆ. ಅಮಿತಾಭ್ ಅವರ ಜತೆಯೂ ರಶ್ಮಿಕಾ ತೆರೆ ಹಂಚಿಕೊಂಡಿದ್ದು, ಇದೀಗ ಶಾಹಿದ್ ಕಪೂರ್ ಎದುರು ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಅನುಭವಿ ಅನೀಸ್ ಬಾಜ್ಮಿ ನಿರ್ದೇಶನದ ಹಾಗೂ ಏಕ್ತಾ ಕಪೂರ್ ಮತ್ತು ದಿಲ್ ರಾಜು ನಿರ್ಮಾಣದ ಹೊಸ ಸಿನಿಮಾಗೆ ರಶ್ಮಿಕಾ ಹಾಗೂ ಶಾಹಿದ್ ನಾಯಕ ನಾಯಕಿ ಎಂದು ವರದಿಯಾಗಿದೆ. ಮಾಧ್ಯಮವೊಂದರ ಮಾಹಿತಿ ಪ್ರಕಾರ “ರಶ್ಮಿಕಾ ಈ ಹೊಸ ಯೋಜನೆಗೆ ಮೊದಲೇ ಆಯ್ಕೆಯಾಗಿದ್ದರು. ಏಕ್ತಾ ಕಪೂರ್ ಮತ್ತು ದಿಲ್ ರಾಜು ಇಬ್ಬರೂ ರಶ್ಮಿಕಾ ಜತೆ ವಾರಿಸು ಸಿನಿಮಾದಲ್ಲಿ ಕೆಲಸವನ್ನು ಮಾಡಿದ್ದಾರೆ. ಇದಲ್ಲದೆ, ಶಾಹಿದ್ ಮತ್ತು ರಶ್ಮಿಕಾ ತೆರೆ ಮೇಲೆ ಚೆಂದವಾಗಿ ಕಾಣಿಸುತ್ತಾರೆ. ಆದ್ದರಿಂದ ರಶ್ಮಿಕಾ ಅವರನ್ನು ಚಿತ್ರತಂಡ ಆಯ್ಕೆ ಮಾಡಿದೆʼʼಎನ್ನಲಾಗಿದೆ.
ಕುತೂಹಲವೆಂದರೆ ಈ ಸಿನಿಮಾದಲ್ಲಿ ಶಾಹಿದ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ರಶ್ಮಿಕಾ ಮಂದಣ್ಣ ಟಾಲಿವುಡ್ನಲ್ಲಿ ಫೇಮಸ್ ಆದ ಬಳಿಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು. ರಣಬೀರ್ ಕಪೂರ್ ಜತೆ ‘ಅನಿಮಲ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಕ್ಕಿ ಕೌಶಲ್ ಜತೆ ಸಿನಿಮಾ ಮಾಡುತ್ತಿದ್ದಾರೆ. ಛತ್ರಪತಿ ಶಿವಾಜಿ ಸೊಸೆಯ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇದರ ಜತೆ ಮತ್ತೊಂದು ಸಿನಿಮಾ ಮಾತುಕತೆಯಲ್ಲಿ ರಶ್ಮಿಕಾ ಬ್ಯುಸಿ ಇದ್ದಾರೆ ಎಂದು ವರದಿ ಆಗಿದೆ.
ಇದನ್ನೂ ಓದಿ: Rashmika Mandanna: ʻನಾನ್‌ವೆಜ್ ತಿನ್ನಲ್ಲʼ ಎಂದು ಸಿಕ್ಕಿಹಾಕಿಕೊಂಡ ರಶ್ಮಿಕಾ; ನೆಟ್ಟಿಗರಿಂದ ತರಾಟೆ
ಶಾಹಿದ್ ಅವರು ಅಲಿ ಅಬ್ಬಾಸ್ ಜಾಫರ್ ಅವರ ʻಬ್ಲಡಿ ಡ್ಯಾಡಿʼ ಸೇರಿದಂತೆ ಹಲವಾರು ಯೋಜನೆಗಳನ್ನು ಹೊಂದಿದ್ದಾರೆ. ಚಿತ್ರ ಜೂನ್ 9ರಂದು ಜಿಯೋ ಸಿನಿಮಾದಲ್ಲಿ ಬಿಡುಗಡೆಯಾಗಲಿದೆ.
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ `ರೈನ್ಬೋ’ ಸಿನಿಮಾದ ಮೊದಲ ಶೆಡ್ಯೂಲ್ ಮುಗಿಸಿದ್ದಾರೆ. ಐಕಾನಿಕ್ ಜಪಾನೀಸ್ ಫ್ಯಾಶನ್ ಬ್ರ್ಯಾಂಡ್ ಒನಿಟ್ಸುಕಾ ಟೈಗರ್‌ಗೆ ರಾಯಭಾರಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ ವಿದೇಶಿ ಬ್ರ್ಯಾಂಡ್‍ಗೆ ಭಾರತದ ಮೊದಲ ರಾಯಭಾರಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ ತಮ್ಮ ಟ್ರೆಡಿಶನಲ್, ಇಂಡಿಯನ್ ಹಾಗೇ ವೆಸ್ಟರ್ನ್ ಲುಕ್‌ನಲ್ಲಿ ಆಗಾಗ ಕಾಣಿಸಿಕೊಂಡು ಸಖತ್ ಸುದ್ದಿಯಲ್ಲಿರುತ್ತಾರೆ. ಇದೀಗ ನಟಿ ‘ಫ್ರೀ ಫೈರ್ ಕೆಲ್ಲಿ’ (‘Free Fire Kelly’ ) ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲ್ಲಿ ‘ಗರೇನಾ ಫ್ರೀ ಫೈರ್’ (‘Garena Free Fire’) 37 ಪಾತ್ರಗಳಲ್ಲಿ ಒಂದಾಗಿದೆ.
ಐಕಾನಿಕ್ ಜಪಾನೀಸ್ ಫ್ಯಾಶನ್ ಬ್ರ್ಯಾಂಡ್ ಒನಿಟ್ಸುಕಾ ಟೈಗರ್‌ಗೆ ರಾಯಭಾರಿಯಾಗಿದ್ದಾರೆ. ʻʻಒನಿಟ್ಸುಕಾ ಟೈಗರ್ಸ್ ಸ್ಪ್ರಿಂಗ್-ಸಮ್ಮರ್ 23 ಸಂಗ್ರಹವನ್ನು ಪರಿಚಯಿಸಲು ತುಂಬಾ ಉತ್ಸುಕನಾಗಿದ್ದೇನೆ. ಈ ಡ್ರೆಸ್ ಅಪ್ ನನಗೆ ಇಷ್ಟ ಆಗಿದೆ. ಈ ಸಂಗ್ರಹಣೆಯು ಜಪಾನೀಸ್ ಮಿನಿಮಲಿಸಂನಿಂದ ಪ್ರೇರಿತವಾಗಿದೆ ಮತ್ತು ಕ್ರೀಡೆಯೊಂದಿಗೆ ಫ್ಯಾಷನ್ ಸಂಯೋಜಿಸುತ್ತದೆ ಎಂಬುದನ್ನು ನಾನು ಇಷ್ಟಪಡುತ್ತೇನೆʼʼ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.
ʻʻಫ್ರೀ ಫೈರ್ʼʼ (‘Free Fire Kelly’ ) ಎಂಬುದು ಬ್ಯಾಟಲ್ ರಾಯಲ್ ಆಟವಾಗಿದ್ದು, ಆಂಡ್ರಾಯ್ಡ್ ಮತ್ತು ಐಓಎಸ್‌ಗಾಗಿ ಗರೆನಾ ಅಭಿವೃದ್ಧಿಪಡಿಸಿದೆ. ಇದು 2019ರಲ್ಲಿ ಜಾಗತಿಕವಾಗಿ ಹೆಚ್ಚು ಡೌನ್‌ಲೋಡ್ ಮಾಡಿದ ಮೊಬೈಲ್ ಗೇಮ್ ಆಗಿ ಹೊರಹೊಮ್ಮಿದೆ.