Site icon Vistara News

Rashmika Mandanna: ‘ಎಕ್ಸ್ಟ್ರಾಡಿನರಿ ಮ್ಯಾನ್’ಗೆ ಶ್ರೀಲೀಲಾ ನಾಯಕಿ; ರಶ್ಮಿಕಾ ಔಟ್‌!

Nithiin Sreeleela starrer titled EXTRA Poster

ಬೆಂಗಳೂರು: ತೆಲುಗು ಚಿತ್ರರಂಗದ ನಟ ಹೀರೊ ನಿತಿನ್ 32ನೇ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ. ವಕ್ಕಂತಂ ವಂಶಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಎಕ್ಸ್ಟ್ರಾಡಿನರಿ ಮ್ಯಾನ್ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಫಸ್ಟ್ ಲುಕ್ ಪೋಸ್ಟರ್‌ ಒಂದು‌ ಫೋಟೊದಲ್ಲಿ ನಿತಿನ್ ಗಡ್ಡ, ಕೂದಲು ಬಿಟ್ಟು ರಗಡ್ ಆಗಿ ಕಾಣಿಸಿಕೊಂಡಿದರೆ, ಮತ್ತೊಂದು ಫೋಟೊದಲ್ಲಿ ಸ್ಟೈಲೀಶ್ ಆಗಿ ಮಿಂಚಿದ್ದಾರೆ. ಎರಡು ಶೇಡ್‌ನಲ್ಲಿ ನಾಯಕನನ್ನು ಪರಿಚಯ ಮಾಡಿಕೊಡಲಾಗಿದೆ. ಹಿಂದೆಂದೂ ಕಾಣದ ವಿಭಿನ್ನ ಪಾತ್ರದಲ್ಲಿ ನಿತಿನ್ (Nithiin) ನಟಿಸಿದ್ದಾರೆ. ಈ ಮೊದಲು ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ನಾಯಕಿಯಾಗಿ ನಟಿಸುತ್ತಿರುವುದಾಗಿ ಚಿತ್ರತಂಡ ತಿಳಿಸಿತ್ತು. ಡೇಟ್ಸ್ ಕಾರಣದಿಂದ ರಶ್ಮಿಕಾ ಚಿತ್ರದಿಂದ ಹೊರ ನಡೆದಿದ್ದು, ಆ ಜಾಗಕ್ಕೆ ಶ್ರೀಲೀಲಾ ಎಂಟ್ರಿಯಾಗಿದೆ.

ಎಂಟರ್ ಟೈನ್ಮೆಂಟ್ ಸಿನಿಮಾ ಇದಾಗಿದ್ದು, ಈಗಾಗಲೇ 60% ಶೂಟಿಂಗ್ ಕಂಪ್ಲೀಟ್ ಮಾಡಲಾಗಿದೆ. ಇನ್ನು, ನಿತಿನ್ ಗೆ ಜೋಡಿಯಾಗಿ ಮೋಸ್ಟ್ ಹ್ಯಾಪನಿಂಗ್ ನಟಿ ಶ್ರೀಲೀಲಾ ನಟಿಸುತ್ತಿದ್ದಾರೆ. ಈ ಮೊದಲು ಈ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿರುವುದಾಗಿ ಚಿತ್ರತಂಡ ತಿಳಿಸಿತ್ತು. ನಿತಿನ್- ರಶ್ಮಿಕಾ ನಟನೆಯ ‘ಭೀಷ್ಮ’ ಸಿನಿಮಾ ಹಿಟ್ ಆಗಿತ್ತು. ಹಾಗಾಗಿ ಅದೇ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಘೋಷಣೆ ಆಗಿತ್ತು. ಚಿತ್ರದಲ್ಲಿ ರಶ್ಮಿಕಾ ನಟಿಸುವುದು ಕನ್ಫರ್ಮ್ ಆಗಿತ್ತು. ಸಿನಿಮಾ ಮುಹೂರ್ತ ಸಮಾರಂಭದಲ್ಲೂ ರಶ್ಮಿಕಾ ಭಾಗಿ ಆಗಿದ್ದರು. ಡೇಟ್ಸ್ ಕಾರಣದಿಂದ ರಶ್ಮಿಕಾ ಚಿತ್ರದಿಂದ ಹೊರ ನಡೆದಿದ್ದು, ಆ ಜಾಗಕ್ಕೆ ಶ್ರೀಲೀಲಾ ಎಂಟ್ರಿಯಾಗಿದೆ.

ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣ-ನಿತಿನ್‌ ಹೊಸ ಸಿನಿಮಾಗೆ ಮೆಗಾ ಸ್ಟಾರ್​ ಚಿರಂಜೀವಿ ಚಾಲನೆ

ಸುಧಾಕರ್ ರೆಡ್ಡಿ ಹಾಗೂ ನಿಖಿತಾ ರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡಿರುವ ಎಕ್ಸ್ಟ್ರಾಡಿನರಿ ಮ್ಯಾನ್ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತಯಾರಾಗುತ್ತಿದೆ. ತೆಲುಗು, ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಮೂಡಿ ಬರುತ್ತಿದೆ. ಟೈಟಲ್ ಹಾಗೂ ಫಸ್ಟ್ ಲುಕ್ ಅನೌನ್ಸ್ ಮಾಡಿರುವ ಚಿತ್ರತಂಡ ಬಿಡುಗಡೆ ದಿನಾಂಕವನ್ನೂ ಸಹ ತಿಳಿಸಿದೆ. ಇದೇ ವರ್ಷಾಂತ್ಯಕ್ಕೆ ಅಂದರೆ ಡಿಸೆಂಬರ್ 23ಕ್ಕೆ ಎಕ್ಸ್ಟ್ರಾಡಿನರಿ ಮ್ಯಾನ್ ಸಿನಿಮಾ ತೆರೆಗೆ ಬರಲಿದೆ.

Exit mobile version