ಮುಂಬಯಿ: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಆಗಾಗ ತಮ್ಮ ಬೋಲ್ಡ್ ಲುಕ್ನಿಂದಲೇ ಸಖತ್ ಸುದ್ದಿಯಾಗುತ್ತಿರುತ್ತಾರೆ. ಇತ್ತೀಚಿಗೆ ಇಂಗ್ಲಿಷ್ ಪತ್ರಿಕೆಯೊಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ರಶ್ಮಿಕಾ ರೆಡ್ ಕಲರ್ ಡ್ರೆಸ್ನಲ್ಲಿ ಮಿಂಚಿದ್ದರು. ವಿಭಿನ್ನ ಶೈಲಿಯ ರೆಡ್ ಡ್ರೆಸ್ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಅವರ ಈ ಫೋಟೊಗಳು ಎಲ್ಲರ ಗಮನ ಸೆಳೆಯುತ್ತಿವೆ.
ರಶ್ಮಿಕಾ ಡ್ರೆಸ್‌ನೋಡಿದ ಫೋಟೋಗ್ರಾಫರ್‌ಗಳು ತಮ್ಮೊಂದಿಗೆ ಫೋಟೊ ತೆಗೆಸಿಕೊಳ್ಳುವಂತೆ ಕೇಳಿಕೊಂಡಿದ್ದರು. ಇದಕ್ಕೆ ಒಪ್ಪಿದ ಅವರು ಫೋಟ್ರೋಗ್ರಾಫರ್‌ಗಳೊಂದಿಗೆ ಕುಳಿತು ಫೋಟೊಗೆ ಪೋಸ್ ನೀಡಿದ್ದರು. ಈ ಸಂದರ್ಭದಲ್ಲಿ ಈ ಡ್ರೆಸ್‌ನ ಕಾರಣಕ್ಕೇ ಮುಜುಗರಕ್ಕೆ ಒಳಗಾಗಬೇಕಾಯಿತು. ಇದರ ಫೋಟೊ, ವಿಡಿಯೊಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಈ ಹಿಂದೆ ಕೂಡ ಕರಣ್ ಜೋಹರ್ ಬರ್ತಡೇ ಪಾರ್ಟಿಯಲ್ಲೂ ಕೂಡ ತಮ್ಮ ವಿಭಿನ್ನ ಡ್ರೆಸ್ ಕಾರಣಕ್ಕಾಗಿಯೇ ರಶ್ಮಿಕಾ ಟ್ರೋಲ್ ಆಗಿದ್ದರು. ಆಗಲೂ ಕೂಡ ಕ್ಯಾಮರಾಗೆ ಫೋಸ್ ಕೊಡುವಾಗ ಮುಂಜುಗರಕ್ಕೆ ಒಳಗಾದ ಘಟನೆ ನಡೆದಿತ್ತು.
ತೆಲುಗಿನಲ್ಲಿ ಗೀತಾ ಗೊವಿಂದಂ ಚಿತ್ರದ ಮೂಲಕ ಖ್ಯಾತಿ ಗಳಿಸಿದ ರಶ್ಮಿಕಾ ನಂತರ ಡಿಯರ್ ಕಾಮ್ರೆಡ್, ಸರಿ ಲೇರು ನಿಕೇವರು ಚಿತ್ರಗಳಲ್ಲಿ ಸ್ಟಾರ್ ನಟರ ಜೊತೆ ನಟಿಸುವ ಮೂಲಕ ಹೆಚ್ಚು ಪ್ರಖ್ಯಾತಿ ಗಳಿಸಿದ್ದರು. ಸದ್ಯಕ್ಕೆ ಬಾಲಿವುಡ್ನ ಮಿಷನ್ ಮಜ್ನು ಚಿತ್ರದಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ಅವರೊಂದಿಗೆ ನಟಿಸುತ್ತಿದ್ದಾರೆ. ಇದಾದ ಬಳಿಕ ರಣಬೀರ್ ಕಪೂರ್ ಹಾಗೂ ಅಮಿತಾಭ್ ಬಚ್ಚನ್ ಸಿನಿಮಾಗಳಲ್ಲಿ ನಟಿಸುವುದು ಫಿಕ್ಸ್ ಆಗಿದೆ.
ಇದನ್ನು ಓದಿ| Rashmika Mandanna | ಹೊಸ ಪೋಟೊ ಹಂಚಿಕೊಂಡ ರಶ್ಮಿಕಾ: ಸಖತ್ ಹಾಟ್ ಅಂದ್ರು ಫ್ಯಾನ್ಸ್