ಹೈದರಾಬಾದ್: ಕೊಡಗು ಮೂಲದ ಖ್ಯಾತ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಭಾರತದ ಕ್ರಷ್ ಎನಿಸಿಕೊಂಡವರು. ಕನ್ನಡದ ನಟ ರಕ್ಷಿತ್ ಶೆಟ್ಟಿ ಜತೆ ನಿಶ್ಚಿತಾರ್ಥ ಮಾಡಿಕೊಂಡು ಮುರಿದುಕೊಂಡಿರುವ ರಶ್ಮಿಕಾ ಇದೀಗ ಅಭಿಮಾನಿಯೊಬ್ಬರಿಗೆ ಪ್ರಪೋಸ್ ಮಾಡಿದ್ದಾರೆ! ಅವರು ಪ್ರಪೋಸ್ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ ಆಗಿದೆ.
ಇದನ್ನೂ ಓದಿ: Rashmika Mandanna | ಕನ್ನಡದಲ್ಲೇ ಸಂಕ್ರಾಂತಿ ವಿಶ್ ಮಾಡಿದ್ರೂ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ ಮಂದಣ್ಣ!
ರಶ್ಮಿಕಾ ಯಾವುದೋ ಕಾರ್ಯಕ್ರಮಕ್ಕೆ ಬಂದಿರುತ್ತಾರೆ. ಅಲ್ಲಿ ಅಭಿಮಾನಿಯೊಬ್ಬರು ರಶ್ಮಿಕಾ ಜತೆ ಸೆಲ್ಫೀ ತೆಗೆದುಕೊಳ್ಳುತ್ತಿರುತ್ತಾರೆ. ಈ ವೇಳೆ ಅಲ್ಲಿದ್ದ ಇನ್ನೊಬ್ಬ ಅಭಿಮಾನಿ ರಶ್ಮಿಕಾ ಬಳಿ, “ಮೇಡಂ, ತೆಲುಗುವಿನಲ್ಲಿ ಹುಡುಗಿಗೆ ಪ್ರಪೋಸ್ ಮಾಡುವುದು ಹೇಗೆ?” ಎಂದು ಕೇಳುತ್ತಾರೆ. ಅದಕ್ಕೆ ರಶ್ಮಿಕಾ, “ಹಾಯ್, ಹಾಗಾದರೆ ಯಾರೋ ಹುಡುಗಿ ಇದ್ದಾರೆ” ಎಂದಿದ್ದಾರೆ. ನಂತರ ತೆಲುಗಿನಲ್ಲಿ “ನಾನು ನಿನ್ನ ಪ್ರೀತಿಸುತ್ತೇನೆ” ಎಂದು ಹೇಳಿದ್ದಾರೆ. ಅದಕ್ಕೆ ಆ ಅಭಿಮಾನಿ “ಸೇಮ್ ಟು ಯು” ಎಂದು ಪ್ರತಿಕ್ರಿಯಿಸಿದ್ದಾರೆ. ಅಭಿಮಾನಿಯ ಈ ಕೀಟಲೆಯನ್ನು ಕಂಡು ರಶ್ಮಿಕಾ ನಗುತ್ತಾ ಕಾರ್ಯಕ್ರಮಕ್ಕೆ ತೆರಳಿದ್ದಾರೆ.
ಈ ವಿಡಿಯೊವನ್ನು ಟ್ರೋಲ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, ಲಕ್ಷಾಂತರ ಮಂದಿ ವಿಡಿಯೊ ವೀಕ್ಷಿಸಿದ್ದಾರೆ. ಅನೇಕರು ನಟ ವಿಜಯ್ ದೇವರಕೊಂಡ ಅವರನ್ನೂ ಎಳೆತಂದಿದ್ದು, “ನಿಮ್ಮ ಹುಡುಗಿ ಇಲ್ಲಿ ಯಾರಿಗೋ ಪ್ರಪೋಸ್ ಮಾಡುತ್ತಿದ್ದಾಳೆ ನೋಡಿ” ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Rashmika Mandanna | ನನಗೆ ಮನರಂಜನೆ ನೀಡುವುದಷ್ಟೇ ಕೆಲಸ: ರಶ್ಮಿಕಾ ಮಂದಣ್ಣ
ವಿಜಯ್ ಮತ್ತು ರಶ್ಮಿಕಾ ಪ್ರೀತಿಸುತ್ತಿದ್ದಾರೆ ಎನ್ನುವ ಸುದ್ದಿಗಳು ಹಲವು ತಿಂಗಳುಗಳಿಂದ ಹರಿದಾಡುತ್ತಿದೆ. ಇತ್ತೀಚೆಗೆ ವಿಜಯ್ ದೇವರಕೊಂಡ ತನ್ನ ಪೋಷಕರ ಜತೆ ದುಬೈ ಪ್ರವಾಸಕ್ಕೆ ಹೋಗಿದ್ದರು. ಆ ವೇಳೆ ರಶ್ಮಿಕಾ ಕೂಡ ವಿಜಯ್ ಕುಟುಂಬದ ಜತೆ ತೆರಳಿದ್ದಾಗಿ ವದಂತಿಗಳು ಹಬ್ಬಿದ್ದವು. ವಿಜಯ್ ತನ್ನ ಪೋಷಕರೊಂದಿಗಿರುವ ಫೋಟೋಗಳನ್ನು ಹಂಚಿಕೊಂಡಿದ್ದರು. ಆದರೆ ಅದೇ ಉಡುಗೆಯಲ್ಲಿ ಅವರು ರಶ್ಮಿಕಾ ಜತೆಗಿರುವ ಫೋಟೋವನ್ನು ಕೆಲವರು ಟ್ವೀಟ್ ಮಾಡಿದ್ದರು.