Site icon Vistara News

Rashmika Mandanna: ರಶ್ಮಿಕಾರನ್ನು ನೋಡಲು ಓಡೋಡಿ ಬಂದಳು ತಂಗಿ; ʻರೈನ್ಬೋʼ ಶೂಟಿಂಗ್‌ ಕ್ಷಣಗಳು ಹೇಗಿತ್ತು?

Rashmika Mandanna 'Rainbow' film wrapped

ಬೆಂಗಳೂರು: ಡ್ರೀಮ್ ವಾರಿಯರ್ ಪಿಕ್ಚರ್ಸ್‌ ಎರಡನೇ ತೆಲುಗು ಚಿತ್ರ ʻರೈನ್ಬೋʼ (‘Rainbow’ film) ಶೂಟಿಂಗ್‌ ಮೊದಲ ಶೆಡ್ಯೂಲ್ ಮುಗಿದಿದೆ. ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ತಮಿಳು-ತೆಲುಗು ದ್ವಿಭಾಷಾ ಚಿತ್ರ ಇದಾಗಿದ್ದು, ಶಾಂತರುಬನ್ ನಿರ್ದೇಶನ ಮಾಡಿದ್ದಾರೆ. ಚಿತ್ರೀಕರಣವು ಚುರುಕಾಗಿ ನಡೆದಿದ್ದು, ಮೊದಲ ಶೆಡ್ಯೂಲ್ ಮುಗಿದಿದೆ. ಈ ವೇಳೆ ನಟಿ ಹಲವಾರು ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಶೂಟಿಂಗ್ ನಡುವೆ ಅಕ್ಕನನ್ನು ನೋಡಲು ತಂಗಿ ಶಿಮನ್ ಓಡೋಡಿ ಬಂದಿದ್ದಾರೆ. ಈ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಹಂಚಿಕೊಂಡಿದ್ದಾರೆ.

ಚಿತ್ರಗಳನ್ನು ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ ಹೀಗೆ ಬರೆದಿದ್ದಾರೆ, “ಗೆಳೆಯರೇ ಕ್ಷಮಿಸಿ ನಾನು ಸ್ವಲ್ಪ ಸಮಯದವರೆಗೆ ಕಾಣೆಯಾಗಿದ್ದೆ. ನಾವು ಹೆಚ್ಚಾಗಿ ಯಾವುದೇ ನೆಟ್‌ವರ್ಕ್ ಇರದ ಪ್ರದೇಶಗಳಲ್ಲಿ ಶೂಟಿಂಗ್ ಮಾಡುತ್ತಿದ್ದೆವು. ಇದೀಗ ಮೊದಲ ಶೆಡ್ಯೂಲ್ ಮುಗಿದಿದೆ. ʻರೈನ್ಬೋʼ ಟೀಮ್‌ ಹಾರ್ಡ್‌ ವರ್ಕ್‌, ಅದ್ಭುತ.
ಮೊದಲನೇಯದು ಏಪ್ರಿಲ್‌ 29ರಂದು ಚಿತ್ರವನ್ನು ಪ್ಯಾಕ್ ಅಪ್ ಮಾಡುವ ಮೊದಲು ನಾನು ತೆಗೆದುಕೊಂಡ ಫೋಟೊಗಳಿವು. ಎರಡನೇಯದು ನಮ್ಮ ಟೀಂ, ಮನೆಗೆ ಕರೆದುಕೊಂಡು ಹೋಗಲು ಅಮ್ಮ, ನನ್ನ ತಂಗಿಯನ್ನು ಕರೆದುಕೊಂಡು ಬಂದಿದ್ದರು. ಶೂಟಿಂಗ್‌ ನೋಡಲು ನನ್ನ ಸಹೋದರಿ ಚೆನ್ನೈಗೆ ಬಂದಿದ್ದಳು. ಇವೆಲ್ಲ ಕಳೆದ ಕೆಲವು ದಿನಗಳ ಬಗ್ಗೆʼʼಎಂದು ಬರೆದುಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಪೋಸ್ಟ್‌

ಇದನ್ನೂ ಓದಿ: Rashmika Mandanna: ವಿಕ್ಕಿ ಕೌಶಲ್ ಜತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್‌: ಇಲ್ಲಿದೆ ಫುಲ್‌ ಡಿಟೇಲ್ಸ್‌!

ಸಿನಿಮಾದ ಮೊದಲ ಶೆಡ್ಯೂಲ್ ಶೂಟಿಂಗ್ ಚೆನ್ನೈ, ಕೊಡೈಕೆನಾಲ್ ಮತ್ತು ಮುನ್ನಾರ್‌ನಲ್ಲಿ ನಡೆದಿದೆ. ನಟ ದೇವ್ ಮೋಹನ್ ಜತೆಗಿನ ಸೆಲ್ಫಿ, ಶೂಟಿಂಗ್ ಸ್ಥಳದ ದೃಶ್ಯಗಳು, ತಾಯಿ ಮತ್ತು ಸಹೋದರಿಯೊಂದಿಗಿನ ಚಿತ್ರಗಳನ್ನು ರಶ್ಮಿಕಾ ಮಂದಣ್ಣ ಹಂಚಿಕೊಂಡಿದ್ದಾರೆ. ಈ ಚಿತ್ರ ,ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ರೊಮ್ಯಾಂಟಿಕ್ ಫ್ಯಾಂಟಸಿ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ. ಎಂದು ನಟ ದೇವ್ ಮೋಹನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ರಶ್ಮಿಕಾ ಮಂದಣ್ಣ ಮೊದಲು ಸಮಂತಾ ಆಯ್ಕೆಯಾಗಿದ್ದರು. ಡ್ರೀಮ್ ವಾರಿಯರ್ ಪಿಕ್ಚರ್ಸ್‌2021ರಲ್ಲೇ ಈ ಸಿನಿಮಾ ಅನೌನ್ಸ್ ಮಾಡಿ ಸಮಂತಾ ನಾಯಕಿ ಎಂದು ಬಹಿರಂಗ ಪಡಿಸಿದ್ದರು. ಆದರೀಗ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಹಿಂದಿ ಮತ್ತು ಕನ್ನಡದಲ್ಲಿ ಡಬ್ಬಿಂಗ್ ಆವೃತ್ತಿಯಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಯೋಜಿಸುತ್ತಿದ್ದಾರೆ ಎಂದು ವರದಿಯಾಗಿದೆ.

ರಶ್ಮಿಕಾ ಕೈಯಲ್ಲಿ, ಪುಷ್ಪ 2, ಅನಿಮಲ್, ʻರೈನ್ಬೋʼ , ನಿತಿನ್ ಜತೆಗಿನ ಹೊಸ ಸಿನಿಮಾ, ವಿಕ್ಕಿ ಕೌಶಲ್ ಜತೆ ‘ಛವಾ’ ಸಿನಿಮಾಗಳಿವೆ.

Exit mobile version