Site icon Vistara News

Rashmika Mandanna: ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ ಬ್ಯಾಕ್‌ಲೆಸ್‌ ಬ್ಲೌಸ್‌ನೊಂದಿಗೆ ರಶ್ಮಿಕಾ ರ್‍ಯಾಂಪ್‌ ವಾಕ್‌

Rashmika Mandanna ramp at Lakme Fashion Week

ಬೆಂಗಳೂರು: ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ (Rashmika Mandanna) ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ (Lakme Fashion Week 2023) ರ್‍ಯಾಂಪ್‌ ವಾಕ್‌ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ ಜೆಜೆ ವಲಯಯಾ ಅವರಿಗೆ ಶೋಸ್ಟಾಪರ್ ಆಗಿ ಕಾಣಿಸಿಕೊಂಡರು. ಬ್ಯಾಕ್‌ಲೆಸ್‌ ಬ್ಲೌಸ್‌ನೊಂದಿಗೆ, ಬಿಗಿಯಾದ ಬನ್‌ ಕಟ್ಟಿ, ಸಖತ್‌ ಮಿಂಚಿದ್ದಾರೆ. ರಶ್ಮಿಕಾ ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ಫೋಟೊವನ್ನು ಶೇರ್‌ ಮಾಡಿ ಸಂತಸ ಹೊರಹಾಕಿದ್ದಾರೆ.

ಹೈ-ನೆಕ್ ಕಾರ್ಸೆಟ್ ಬ್ಲೌಸ್ ಮತ್ತು ರೇಷ್ಮೆ ಸೀರೆಯನ್ನು ನಟಿ ಧರಿಸಿದ್ದರು. ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ ಹಲವು ನಟಿಯರು ಮಿಂಚಿದ್ದರು. ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಆಯೋಜಿಸಲಾಗಿರುವ ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ ಫ್ಯಾಷನ್ ಮಾಡೆಲ್‌ಗಳ ಜತೆಗೆ ಬಾಲಿವುಡ್ ನಟಿಯರೂ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದರು.

ರಶ್ಮಿಕಾ ಮಂದಣ್ಣ , ಅಥಿಯಾ ಶೆಟ್ಟಿ (Athiya Shetty), ತಾಪ್ಸಿ ಪನ್ನು (Taapsee Pannu), ಶನಯಾ ಕಪೂರ್ (Shanaya Kapoor), ಅಂಶುಲಾ ಕಪೂರ್ (Anshula Kapoor) ವಿಭಿನ್ನ ಉಡುಗೆಗಳಲ್ಲಿ ಫ್ಯಾಷನ್ ವೀಕ್‌ನ ರ‍್ಯಾಂಪ್ ಅನ್ನು ಅಲಂಕರಿಸಿದ್ದಾರೆ.

ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣ ನನ್ನ ಕ್ರಶ್‌ ಎಂದ ಭಾರತ ತಂಡದ ಯುವ ಆಟಗಾರ

ರಶ್ಮಿಕಾ ಮಂದಣ್ಣ ʻವಾರಿಸುʼ ಸಿನಿಮಾ ಮೂಲಕ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ವಂಶಿ ಪೈಡಿಪಲ್ಲಿ ನಿರ್ದೇಶನದ ಈ ಚಿತ್ರದಲ್ಲಿ ದಳಪತಿ ವಿಜಯ್ ಎದುರು ಜೋಡಿಯಾಗಿದ್ದರು. ಸದ್ಯ ಪುಷ್ಪ-2ದಲ್ಲಿ ಬ್ಯುಸಿಯಾಗಿದ್ದಾರೆ. ಮುಂಬರುವ ಆಕ್ಷನ್ ಡ್ರಾಮಾ ಅನಿಮಲ್‌ನಲ್ಲಿ ಅವರು ಜನಪ್ರಿಯ ಸ್ಟಾರ್ ರಣಬೀರ್ ಕಪೂರ್ ಅವರೊಂದಿಗೆ ಪರದೆಯನ್ನು ಹಂಚಿಕೊಳ್ಳುತ್ತಿದ್ದಾರೆ.


Exit mobile version