ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ (Rashmika Mandanna) ದಕ್ಷಿಣ ಮತ್ತು ಬಾಲಿವುಡ್‌ನ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು.’ನ್ಯಾಷನಲ್ ಕ್ರಶ್’ ಎಂದೂ ಕರೆಯಲ್ಪಡುವ ರಶ್ಮಿಕಾ ಆಗಾಗ ತಮ್ಮ ಸ್ಟೈಲಿಶ್ ಉಡುಪುಗಳಿಂದ ಸುದ್ದಿಯಾಗುತ್ತಲೇ ಇರುತ್ತಾರೆ. ರಶ್ಮಿಕಾ ಮಂದಣ್ಣ ಅವರು ಜೀ ಸಿನಿಮಾ ಅವಾರ್ಡ್ ಫಂಕ್ಷನ್ಗೆ ತೆರಳಿದ್ದರು. ಅವರು ಕಪ್ಪು ಉಡುಗೆಯಲ್ಲಿ ಸಖತ್ ಬೋಲ್ಡ್ ಲುಕ್ನಲ್ಲಿ ಮಿಂಚಿದ್ದಾರೆ. ಇದೀಗ ನಟಿ ನೆಟಿಜನ್‌ಗಳಿಂದ ಟ್ರೋಲ್‌ಗೆ ಗುರಿಯಾಗಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಜೀ ಸಿನಿಮಾ ಅವಾರ್ಡ್ ಫಂಕ್ಷನ್ಗೆ ತೆರಳಿದ್ದರು. ಅವರು ಕಪ್ಪುಡುಗೆಯಲ್ಲಿ ಸಖತ್ ಬೋಲ್ಡ್ ಲುಕ್ನಲ್ಲಿ ಮಿಂಚಿದ್ದಾರೆ. ರಶ್ಮಿಕಾ ವಿಡಿಯೊ ವೈರಲ್ ಆಗುತ್ತಿದ್ದಂತೆ ಅವರ ಉಡುಪನ್ನು ಉರ್ಫಿ ಜಾವೇದ್‌ಗೆ ಹೋಲಿಸಿದ್ದಾರೆ. ಒಬ್ಬರು ಕಾಮೆಂಟ್‌ನಲ್ಲಿ, “ಉರ್ಫಿ 2” ಎಂದು ಬರೆದರೆ, ಮತ್ತೊಬ್ಬರು “ಅದು ಎಂದೆಂದಿಗೂ ಸಂಪೂರ್ಣವಾಗಿ ಭಯಾನಕ ಉಡುಗೆಯಾಗಿದೆʼʼಎಂದಿದ್ದಾರೆ. ‘ದೇಹ ಕಾಣುವ ರೀತಿಯಲ್ಲಿ ಏಕೆ ಬಟ್ಟೆ ಹಾಕಿ ಬರಬೇಕು’ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: Rashmika Mandanna: ನೆಲ ಒರೆಸುವ ಬಟ್ಟೆ ಹಾಗಿದೆ ಎಂದ ನೆಟ್ಟಿಗರು: ರಶ್ಮಿಕಾ ಧರಿಸಿದ ಟಾಪ್ ಬೆಲೆ ಎಷ್ಟು?
ಇದನ್ನೂ ಓದಿ: Rashmika Mandanna: 5 ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ್ದಾರಾ ರಶ್ಮಿಕಾ? ಟ್ವಿಟರ್‌ನಲ್ಲಿ ನಟಿ ಹೇಳಿದ್ದೇನು?
ರಶ್ಮಿಕಾ ಮಂದಣ್ಣ ʻವಾರಿಸುʼ ಸಿನಿಮಾ ಮೂಲಕ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ವಂಶಿ ಪೈಡಿಪಲ್ಲಿ ನಿರ್ದೇಶನದ ಈ ಚಿತ್ರದಲ್ಲಿ ದಳಪತಿ ವಿಜಯ್ ಎದುರು ಜೋಡಿಯಾಗಿದ್ದರು. ಸದ್ಯ ಪುಷ್ಪ-2ದಲ್ಲಿ ಬ್ಯುಸಿಯಾಗಿದ್ದಾರೆ. ಮುಂಬರುವ ಆಕ್ಷನ್ ಡ್ರಾಮಾ ಅನಿಮಲ್‌ನಲ್ಲಿ ಅವರು ಜನಪ್ರಿಯ ಸ್ಟಾರ್ ರಣಬೀರ್ ಕಪೂರ್ ಅವರೊಂದಿಗೆ ಪರದೆಯನ್ನು ಹಂಚಿಕೊಳ್ಳುತ್ತಿದ್ದಾರೆ.