ಬೆಂಗಳೂರು : ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಹೊಸ ಪೋಟೊ ಒಂದನ್ನು ಸೋಷಿಯಲ್ ಮೀಡಿಯಾ ಮೂಲಕ ಶೇರ್ ಮಾಡಿಕೊಂಡಿದ್ದಾರೆ.
ಸಾಕಷ್ಟು ಬಾರಿ ಹೊಸ ಬಗೆಯ ಪೋಸ್ಟ್, ವರ್ಕೌಟ್ ಇನ್ನಿತರ ಪೋಟೋಗಳನ್ನು ಶೇರ್ ಮಾಡುವ ನ್ಯಾಷನಲ್ ಕ್ರಶ್ ಇದೀಗ ಗುಲಾಬಿ ಬಣ್ಣದ ಸೀರೆಯಲ್ಲಿ ಸಖತ್ ಹಾಟ್ ಆಗಿ ಮಿಂಚುತ್ತಿದ್ದಾರೆ. ಪೋಸ್ಟ್ಗೆ ಅಭಿಮಾನಿಗಳು ಕಮೆಂಟ್ ಮಾಡುವುದರ ಮೂಲಕ ಸಂತಸ ವ್ಯಕ್ತ ಪಡಿಸುತ್ತಿದ್ದಾರೆ. ಫಿಟ್ನೆಸ್ಗೆ ಹೆಚ್ಚು ಒತ್ತು ಕೊಡುವ ರಶ್ಮಿಕಾ ಇತ್ತೀಚೆಗೆ ವಿಡಿಯೊ ಕೂಡ ಹಂಚಿಕೊಂಡಿದ್ದರು.
ಹೆಚ್ಚಾಗಿ ಕ್ಲಾಸಿ ಬಟ್ಟೆಗಳನ್ನೇ ಧರಿಸುವ ರಶ್ಮಿಕಾ, ಹಿಂದೆ ಫಿಲ್ಮ್ಫೇರ್ ಮ್ಯಾಗ್ಜಿನ್ನಲ್ಲೂ ಕ್ಲಾಸಿ ಲುಕ್ನೊಂದಿಗೆ ಪೋಸ್ ನೀಡಿದ್ದರು. ಸಕತ್ ಹಾಟ್ ಲುಕ್ನಲ್ಲಿ, ಫ್ರೀ ಹೇರ್ನೊಂದಿಗೆ ಆರೆಂಜ್ ಟಾಪ್ ಮತ್ತು ವೈಟ್ ಪ್ಯಾಂಟ್ ಮೂಲಕ ಕಾಣಿಸಿಕೊಂಡಿದ್ದರು. ಕರಣ್ ಜೋಹರ್ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಅವರ ಬಟ್ಟೆಯನ್ನು ಅಭಿಮಾನಿಗಳು ತುಂಬಾ ಇಷ್ಟಪಟ್ಟಿದ್ದರು.
ಇದನ್ನೂ ಓದಿ | Filmfareನಲ್ಲಿ ʼಕ್ರಶ್ಮಿಕಾʼ: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಟ್ ಲುಕ್
2016ರಲ್ಲಿ ತೆರೆ ಕಂಡ ಸಿನಿಮಾ ʻಕಿರಿಕ್ ಪಾರ್ಟಿʼ ಇಂದ ಸಿನಿ ಜರ್ನಿ ಶುರುವಾಗಿ, ನಂತರ ಟಾಲಿವುಡ್ನಲ್ಲಿ ಮಿಂಚಿದರು. ಪುಷ್ಪ, ಗೀತ ಗೋವಿಂದಂ, ಡಿಯರ್ ಕಾಮ್ರೇಡ್, ಹೀಗೆ ತೆಲುಗಿನಲ್ಲಿ ಸಾಲು ಸಾಲು ಚಿತ್ರಗಳಲ್ಲಿ ಕಾಣಿಸಿಕೊಂಡ ರಶ್ಮಿಕಾ ಬಾಲಿವುಡ್ಗೂ ಜಿಗಿದರು.
ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಜತೆ ʻಗುಡ್ಬೈʼನಲ್ಲಿ ಹಾಗೂ ಸಿದ್ಧಾರ್ಥ್ ಮಲ್ಹೋತ್ರ ಅಭಿನಯದ ʻಮಿಷನ್ ಮಜ್ನುʼ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಸದ್ಯ ಹನು ರಾಘವಪುಡಿ ನಿರ್ದೇಶನದ ಸೀತಾ ರಾಮಂ ಚಿತ್ರದಲ್ಲಿ ಆಫ್ರೀನ್ ಎಂಬ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರ ಆಗಸ್ಟ್ 5ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ, ದಳಪತಿ ವಿಜಯ್ ಅವರೊಂದಿಗೂ ಕೂಡ ಬಣ್ಣ ಹಚ್ಚಲಿದ್ದಾರೆ.
ಇದನ್ನೂ ಓದಿ | Sita Ramam Film | ದುಲ್ಖರ್ ಸಲ್ಮಾನ್ ಜತೆ ನಟಿಸಲಿದ್ದಾರೆ ಕ್ರಶ್ಮಿಕಾ