ಬೆಂಗಳೂರು: ರಶ್ಮಿಕಾ ಮಂದಣ್ಣ (Rashmika Mandanna) ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಹೊಸ ಸಂದರ್ಶನವೊಂದರಲ್ಲಿ ನಟಿ ಪ್ರತಿಯೊಬ್ಬರ ಪಾದಗಳನ್ನು ಗೌರವದಿಂದ ಸ್ಪರ್ಶಿಸುವ ಅಭ್ಯಾಸವಿದೆ ಎಂದು ತನ್ನ ವ್ಯಕ್ತಿತ್ವದ ಕುರಿತು ಹೇಳಿಕೊಂಡಿದ್ದಾರೆ. ನಟಿ ಹೀಗೆ ಹೇಳಿದ್ಯಾಕೆ ಎಂಬುದರ ಮಾಹಿತಿ ಇಲ್ಲಿದೆ.
ಪುಷ್ಪ ಚಿತ್ರದ ಕೆಲಸಕ್ಕಾಗಿ ಪ್ರಶಂಸೆ ಪಡೆದ ರಶ್ಮಿಕಾ ಮಂದಣ್ಣ ಅವರು ಪ್ರತಿದಿನ ತಮ್ಮ ಮನೆ ಸಹಾಯಕರ ಪಾದಗಳನ್ನು ಸ್ಪರ್ಶಿಸುತ್ತಾರೆ ಎಂದು ಬಹಿರಂಗಪಡಿಸಿದ್ದಾರೆ. ಜನರ ನಡುವೆ ತಾರತಮ್ಯ ಮಾಡಲು ಬಯಸುವುದಿಲ್ಲ ಎಂತಲೂ ಅವರು ಹೇಳಿದರು. “ನನಗೆ ಸಣ್ಣ ವಿಷಯಗಳು ಮುಖ್ಯ. ಪ್ರತಿದಿನ ನನ್ನ ಸ್ನೇಹಿತರನ್ನು ಭೇಟಿಯಾಗುತ್ತೇನೆ. ಸಾಕು ಪ್ರಾಣಿಗಳ ಜತೆ ಸಮಯ ಕಳೆಯುತ್ತೇನೆ. ಮನೆಗೆ ಹಿಂತಿರುಗಿ, ನಾನು ಪ್ರತಿಯೊಬ್ಬರ ಪಾದಗಳನ್ನು ಗೌರವದಿಂದ ಸ್ಪರ್ಶಿಸುವ ಅಭ್ಯಾಸವನ್ನು ಹೊಂದಿದ್ದೇನೆ. ನಾನು ನಮ್ಮ ಮನೆ ಕೆಲಸದವಳ ಪಾದವನ್ನೂ ಸ್ಪರ್ಶಿಸುತ್ತೇನೆ. ಏಕೆಂದರೆ ನಾನು ಭಿನ್ನಾಭಿಪ್ರಾಯವನ್ನು ಬಯಸುವುದಿಲ್ಲ, ನಾನು ಎಲ್ಲರನ್ನು ಗೌರವಿಸುತ್ತೇನೆ. ನನಗೆ ಯಾರಾದರೂ ಏನೇ ಹೇಳಿದರೂ ಡೈರಿಯಲ್ಲಿ ಬರೆದಿಡುತ್ತೇನೆ. ನಾನು ಎಲ್ಲರನ್ನೂ ಸಮಾನವಾಗಿ ನೋಡಲು ಬಯಸುತ್ತೇನೆʼʼಎಂದು ಬಜಾರ್ ಇಂಡಿಯಾಕ್ಕೆ ಹೇಳಿದರು.
ಇದನ್ನೂ ಓದಿ: Rashmika Mandanna: ಮೊದಲ ಬಾರಿಗೆ ರಕ್ಷಿತ್ ಶೆಟ್ಟಿಯವರ ʻಕಿರಿಕ್ ಪಾರ್ಟಿʼ ಕುರಿತು ಬಾಯ್ಬಿಟ್ಟ ರಶ್ಮಿಕಾ ಮಂದಣ್ಣ
ಮಿಷನ್ ಮಜ್ನು ಚಿತ್ರದಲ್ಲಿ ರಶ್ಮಿಕಾ ಕೊನೆಯದಾಗಿ ಕಾಣಿಸಿಕೊಂಡರು. ಸಿದ್ಧಾರ್ಥ್ ಮಲ್ಹೋತ್ರಾ ಜತೆ ನಟಿ ಮೊದಲು ಕಾಣಿಸಿಕೊಂಡ ಸಿನಿಮಾವಿದು. ರಣಬೀರ್ ಕಪೂರ್ ಅಭಿನಯದ ʻಅನಿಮಲ್ʼ ಚಿತ್ರದ ಬಿಡುಗಡೆಗಾಗಿ ರಶ್ಮಿಕಾ ಕಾಯುತ್ತಿದ್ದಾರೆ. ಇದನ್ನು ಸಂದೀಪ್ ವಂಗಾ ನಿರ್ದೇಶಿಸಿದ್ದಾರೆ. ಪುಷ್ಪ 2 ಚಿತ್ರದಲ್ಲಿ ಅಲ್ಲು ಅರ್ಜುನ್ ಎದುರು ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ. ನಿತಿನ್ ಮತ್ತು ವೆಂಕಿ ಕುಡುಮುಲ ಅವರೊಂದಿಗೆ ಹೊಸ ಚಿತ್ರದಲ್ಲಿಯೂ ನಟಿ ಕಾಣಿಸಿಕೊಳ್ಳುತ್ತಿದ್ದಾರೆ.