Site icon Vistara News

Rashmika Mandanna: ʻದಿಯಾʼ ಹೀರೊ ಜತೆ ರಶ್ಮಿಕಾ ಮಂದಣ್ಣ ರೊಮ್ಹಾನ್ಸ್‌!

Rashmika Mandanna and Dheekshith Shetty

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ (Rashmika Mandanna) ‘ದಿ ಗರ್ಲ್‌ಫ್ರೆಂಡ್’ ಎಂಬ ರೋಮಾಂಚಕ ಪ್ರೇಮಕಥೆಯಲ್ಲಿ ನಾಯಕಿಯಾಗಿ ನಟಿಸಲು ಸಿದ್ಧರಾಗಿದ್ದಾರೆ. ಏಳು ವರ್ಷಗಳ ವೃತ್ತಿಜೀವನದಲ್ಲಿ ಇದು ನಟಿಯ 24ನೇ ಚಿತ್ರವಾಗಿದೆ. ‘ದಿ ಗರ್ಲ್‌ಫ್ರೆಂಡ್’ ರಶ್ಮಿಕಾ ಅವರ ಸೋಲೊ ಸಿನಿಮಾ ಎನ್ನಲಾಗಿದೆ. ಚಿತ್ರವನ್ನು ರಾಹುಲ್ ರವೀಂದ್ರನ್ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾಗೆ ಕನ್ನಡದ ‘ದಿಯಾ’ ಚಿತ್ರದಲ್ಲಿ ನಟಿಸಿ ಗೆದ್ದಿದ್ದ ನಟ ದೀಕ್ಷಿತ್ ಶೆಟ್ಟಿ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದಾರೆ. ಇತ್ತೀಚೆಗೆ ತೆಲುಗಿನ ‘ದಸರಾ’ ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ ನಟ ನಾನಿ ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ರಶ್ಮಿಕಾ ಮಂದಣ್ಣ ‘ಅನಿಮಲ್’ ಸಿನಿಮಾ ಸಕ್ಸೆಸ್‌ ಅಲ್ಲಿ ತೇಲುತ್ತಿದ್ದಾರೆ. ರಶ್ಮಿಕಾ ಬೋಲ್ಡ್ ದೃಶ್ಯಗಳಲ್ಲಿ ನಟಿಸಿರುವ ಬಗ್ಗೆಯೂ ಚರ್ಚೆ ಆಗುತ್ತಿದೆ. ಇದೀಗ ರಶ್ಮಿಕಾ ‘ದಿ ಗರ್ಲ್‌ಫ್ರೆಂಡ್’ ಎನ್ನುವ ಮಹಿಳಾ ಪ್ರಧಾನ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಗೀತಾ ಆರ್ಟ್ಸ್ ಬ್ಯಾನರ್‌ನಲ್ಲಿ ಅಲ್ಲು ಅರವಿಂದ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಬರಹಗಾರ ರಾಹುಲ್ ರವೀಂದ್ರನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ದೀಕ್ಷಿತ್ ಶೆಟ್ಟಿ ಅವರು ಕನ್ನಡದಲ್ಲಿ ‘ಬ್ಲಿಂಕ್’, ‘ಕೆಟಿಎಂ’, ‘ಶೀಘ್ರವೇಮ ಕಲ್ಯಾಣ ಪ್ರಾಪ್ತಿರಸ್ತು’, ‘ಸ್ಟ್ರಾಬೆರಿ’ ಹಾಗೂ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಚಿತ್ರಗಳಲ್ಲಿ ದೀಕ್ಷಿತ್ ನಟಿಸುತ್ತಿದ್ದಾರೆ. 15 ದಿನಗಳ ಹಿಂದೆಯಷ್ಟೆ ‘ದಿ ಗರ್ಲ್‌ಫ್ರೆಂಡ್’ ಸಿನಿಮಾ ಮುಹೂರ್ತ ನೆರವೇರಿತ್ತು. ಇದೀಗ ಸಿನಿಮಾ ಚಿತ್ರೀಕರಣ ಸಹ ಆರಂಭವಾಗಿದೆ. ಮೊದಲ ದಿನ ದೀಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಇಬ್ಬರೂ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ.

ಇದನ್ನೂ ಓದಿ: Rashmika Mandanna: ನೀರಿನಲ್ಲಿ ಮುಳುಗಿದ ರಶ್ಮಿಕಾ; ‘ದಿ ಗರ್ಲ್‌ಫ್ರೆಂಡ್’ ಫಸ್ಟ್‌ ಲುಕ್‌ ಔಟ್‌!

ಗೀತಾ ಆರ್ಟ್ಸ್ ಅವರ 51ನೇ ಸಿನಿಮಾವಿದು. ರಶ್ಮಿಕಾ ಮಂದಣ್ಣ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಅವರು, ‘ರೇನ್ಬೋ, ‘ಡಿ 51’, ‘ಛಾವಾ’, ‘ಪುಷ್ಪ: ದಿ ರೂಲ್’, ಮತ್ತು ರವಿತೇಜಾ ಅವರೊಂದಿಗೆ ಹೆಸರಿಡದ ಚಿತ್ರದಲ್ಲಿ ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಶೀಘ್ರದಲ್ಲೇ ಚಿತ್ರಕ್ಕಾಗಿ ಮತ್ತೆ ಒಂದಾಗುತ್ತಾರೆ ಎಂದು ವದಂತಿಗಳಿವೆ.

Exit mobile version