ಬೆಂಗಳೂರು : ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಿರರ್ ನೌ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಜೀವನ ಮತ್ತು ಸಿನಿಮಾ ಕುರಿತು ಹಲವು ವಿಚಾರಗಳ ಬಗ್ಗೆ ಹೇಳಿಕೊಂಡಿದ್ದಾರೆ. ಹಾಗೂ ಅಭಿಮಾನಿಗಳು ಶ್ರೀವಲ್ಲಿ, ನ್ಯಾಷನಲ್ ಕ್ರಶ್ ಮತ್ತು ಕ್ರಶ್ಮಿಕಾ ಎಂದು ನನ್ನನ್ನು ಕರೆಯುವುದು ತುಂಬಾ ಇಷ್ಟ ಎಂದಿದ್ದಾರೆ.
ಎಲ್ಲಾ ರೀತಿಯ ಸಿನಿಮಾ ಇಷ್ಟವೆಂದ ಕ್ರಶ್ಮಿಕಾ
ಕನ್ನಡದ ʻಕಿರಿಕ್ ಪಾರ್ಟಿʼ ಸಿನಿಮಾ ಮೂಲಕ ಖ್ಯಾತಿ ಪಡೆದ ರಶ್ಮಿಕಾಗೆ ಒಂದೇ ತರಹದ ಸಿನಿಮಾ ಮಾಡುವುದು ಇಷ್ಟವಿಲ್ಲ ಎಂದು ಹೇಳಿಕೊಂಡಿದ್ದಾರೆ. ʻʻವಿಭಿನ್ನ ಸಿನಿಮಾಗಳನ್ನು ಮಾಡಲು ಇಷ್ಟ. ಪಡುತ್ತೇನೆ. ಈಗ ಮುಂಬರುವ ಸಿನಿಮಾ ʻಗಾಡ್ ಫಾದರ್ʼ ಕೂಡ ಭಿನ್ನವಾಗಿದೆ. ಸಿನಿಮಾ ಕಟೆಂಟ್ ತುಂಬಾ ಮುಖ್ಯವಾಗಿರುತ್ತದೆʼʼ ಎಂದಿದ್ದಾರೆ.
ಅಮಿತಾಭ್‌ರಿಂದ ಸಾಕಷ್ಟು ಕಲಿತ್ತಿದ್ದೇನೆ
ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮಗಳಾಗಿ ರಶ್ಮಿಕಾ ಮಂದಣ್ಣ “ಗುಡ್ ಬೈʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಅಕ್ಟೋಬರ್ ೭ರಂದು ಚಿತ್ರಮಂದಿರಗಳಲ್ಲಿ ವಿಶ್ವಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ. ಗಾಡ್ ಫಾದರ್ ಚಿತ್ರದ ಬಗ್ಗೆ ಮಾತನಾಡಿ ʻʻಈ ಚಿತ್ರದಲ್ಲಿ ಅಮಿತಾಭ್ ಜತೆ ಹೇಗೆ ಪಾತ್ರ ನಿಭಾಯಿಸಲಿ ಎನ್ನುವ ಭಯ ಇತ್ತು. ಆದರೆ ಸೆಟ್‌ಗೆ ಹೋದಾಗ ನಾನು ಅಂದುಕೊಂಡಂತೆ ಇರಲಿಲ್ಲ. ಅಮಿತಾಭ್ ಸೆಟ್ ಅಲ್ಲಿ ಚಿಲ್ ಆಗಿರುತ್ತಿದ್ದರು. ಹಿರಿಯ ಆರ್ಟಿಸ್ಟ್ ಆದರೂ ಕಿರಿಯರಿಗೆ ಗೌರವ ನೀಡುತ್ತಿದ್ದರು. ಜೋಕ್‌ಗಳನ್ನು ಮಾಡುತ್ತಾ ಎಲ್ಲರನ್ನು ಸಂತೋಷದಿಂದ ಇರಿಸುತ್ತಿದ್ದರು. ಅವರಿಂದ ಸಾಕಷ್ಟು ಕಲಿತ್ತಿದ್ದೇನೆʼʼ ಎಂದರು. ಹಾಗೇ ʻʻಗಾಡ್ ಫಾದರ್ ಸಿನಿಮಾ ತುಂಬಾ ಭಾವನಾತ್ಮಕವಾದ ಸಿನಿಮಾ. ನಾನು ಕೂಡ ತುಂಬಾ ಎಮೋಷನಲ್ ವ್ಯಕ್ತಿ. ಈ ಸಿನಿಮಾ ನನಗೆ ಕನೆಕ್ಟ್ ಆಯಿತುʼ ಎಂದರು.
ಇದನ್ನೂ ಓದಿ | Rashmika Mandanna | ಆಸ್ಪತ್ರೆಗೆ ಭೇಟಿ ನೀಡಿದ ರಶ್ಮಿಕಾ: ವೈದ್ಯರು ಹೇಳಿದ್ದೇನು?
ಟ್ರೋಲ್ ವಿಚಾರಕ್ಕೆ ಒಬ್ಬಳೆ ಕೂತು ಅತ್ತಿದ್ದೇನೆ
ಈ ಹಿಂದೆ ʻಗೀತ ಗೋವಿಂದಂʼ ಸಿನಿಮಾದಲ್ಲಿ ಕಿಸ್ ವಿಚಾರಕ್ಕೆ ರಶ್ಮಿಕಾ ಮಂದಣ್ಣ ಸಾಕಷ್ಟು ಟ್ರೋಲ್‌ಗೆ ಗುರಿಯಾಗಿದ್ದರು. ಈ ಬಗ್ಗೆ ಮಾತನಾಡಿ ʻʻಮೊದ ಮೊದಲು ತುಂಬಾ ನನಗೆ ಬೇಸರವಾಗುತ್ತಿತ್ತು. ಒಬ್ಬಳೇ ಕೂತು ಅಳುತ್ತಿದ್ದೆ. ನನ್ನ ಪೋಷಕರಿಗೂ ಇದು ಕಷ್ಟವೆನಿಸುತ್ತಿತ್ತು. ಆ ಸಮಯದಲ್ಲಿ ನಾನು ಹೈದರಾಬಾದ್‌ನಲ್ಲಿದ್ದೆ. ಅಲ್ಲಿ ಅಷ್ಟಾಗಿ ನನಗೆ ಸ್ನೇಹಿತರಿರಲಿಲ್ಲ. ಒಬ್ಬಳೇ ಫೇಸ್ ಮಾಡಬೇಕಿತ್ತು. ಆದರೆ ಈಗ ಅದರಿಂದ ಆಚೆ ಬಂದಿದ್ದೇನೆ. ಆ ಘಟನೆ ನನ್ನನ್ನು ಇನ್ನಷ್ಟು ಗಟ್ಟಿಯಾಗಿಸಿದೆʼʼಎಂದರು.
ಸಿನಿರಂಗಕ್ಕೆ ಸಾಥ್ ಕೊಟ್ಟರು ತಂದೆ-ತಾಯಿ
ಸಿನಿರಂಗಕ್ಕೆ ನನ್ನ ತಂದೆ ತಾಯಿ ಕೂಡ ತುಂಬಾ ಸಾಥ್ ನೀಡಿದ್ದಾರೆ ಎಂದು ರಶ್ಮಿಕಾ ಹೇಳಿಕೊಂಡರು. ʻʻಮೊದಲೆಲ್ಲಾ ಶೂಟಿಂಗ್ ಸಮಯದಲ್ಲಿ ನನ್ನ ತಾಯಿ ನನ್ನ ಜತೆ ಬರುತ್ತಿದ್ದರು. ಆನಂತರ ಅಲ್ಲಿ ಟ್ರೀಟ್ ಮಾಡುವುದು ನೋಡಿ ಅವರಿಗೆ ಒಂದು ನಂಬಿಕೆ ಬಂತು. ನಂತರ ಸಿನಿಮಾ ಮಾಡು ಎಂದು ಸ್ವತಃ ಅವರೇ ಸಪೋರ್ಟ್ ಮಾಡಿದರು. ನಾನು ಈ ಹಂತಕ್ಕೆ ಇರುವುದು ಅವರ ಸಪೋರ್ಟ್‌ನಿಂದಾಗಿಯೇʼʼ ಎಂದರು.
ಶ್ರೀವಲ್ಲಿ ಅಂತ ಕರಿತಾರೆ ನನ್ನ!
ನಟ ಅಲ್ಲು ಅರ್ಜುನ್ ಜತೆ ಪುಷ್ಪ-1 ಸಿನಿಮಾದಲ್ಲಿ ನಟಿ ರಶ್ಮಿಕಾ ಶ್ರೀವಲ್ಲಿಯಾಗಿ ಗಮನ ಸೆಳೆದಿದ್ದರು. ಈ ಬಗ್ಗೆ ಖುಷಿ ಹಂಚಿಕೊಂಡ ರಶ್ಮಿಕಾ ಮಾತನಾಡಿ ʻʻಪುಷ್ಪ-1 ಸಿನಿಮಾ ನಂತರ ನನ್ನನ್ನು ಪ್ರೇಕ್ಷಕರು ಶ್ರೀವಲ್ಲಿ ಎಂತಲೇ ಗುರುತಿಸುತ್ತಿದ್ದರು. ನಾನು ಸಾಕಷ್ಟು ಬಾರಿ ಕಾರ್ಯಕ್ರಮಗಳಿಗೆ ಭೇಟಿ ಕೊಟ್ಟಾಗ ಸಾಮಿ ಸ್ಟೆಪ್ಸ್ ಹಾಕಿ ಎಂದು ಹೇಳುತ್ತಿದ್ದರು. ಆಗ ಸಿನಿಮಾ ಎಷ್ಟರ ಮಟ್ಟಿಗೆ ಜನರಿಗೆ ಇಷ್ಟವಾಗಿದೆ ಎಂದು ಸಂತೋಷವಾಗುತ್ತಿತ್ತು. ಪುಷ್ಪ-2 ತೆರೆ ಮೇಲೆ ಬರಲು ಕಾಯುತ್ತಿದ್ದೇನೆʼʼ ಎಂದರು.
ಹಲವು ಬಾರಿ ಆಡಿಷನ್‌ನಲ್ಲಿ ರೆಜೆಕ್ಟ್ ಆಗಿದ್ದರಂತೆ ರಶ್ಮಿಕಾ!
ತಮ್ಮ ವೈಯಕ್ತಿಕ ಜೀವನದ ಕುರಿತು ಸಾಕಷ್ಟು ವಿಚಾರಗಳನ್ನು ನಟಿ ಹಂಚಿಕೊಂಡಿದ್ದಾರೆ. ʻʻನಾನು ಹಲವು ಬಾರಿ ಆಡಿಷನ್‌ನಲ್ಲಿ ರೆಜೆಕ್ಟ್ ಕೂಡ ಆಗಿದ್ದೇನೆ. ಅದು ಹಲವರಿಗೆ ಗೊತ್ತಿಲ್ಲ. ಎಷ್ಟೋ ಬಾರಿ ನನ್ನ ನೋಡಿ ರೆಜೆಕ್ಟ್ ಕೂಡ ಮಾಡಿದ್ದಾರೆ. ಆದರೆ ಇವತ್ತು ನನ್ನ ಕನಸು ನನಸಾಗಿದೆʼʼ ಎಂದರು. ಬ್ರೇಕ್‌ಅಪ್ ಬಗ್ಗೆ ಮಾತನಾಡಿ ʻʻನೀವು ನಿಮ್ಮನ್ನು ಪ್ರೀತಿಸಿ. ಯಾರಿಗೂ ಯಾರನ್ನು ಕಂಟ್ರೋಲ್ ಮಾಡಬೇಡಿ. ಕಂಫರ್ಟೇಬಲ್ ಜೋನ್‌ನಲ್ಲಿ ಬದುಕಿ, ಹಾಗೇ ನಿಮ್ಮ ಮೇಲೆ ನಂಬಿಕೆ ಇರಲಿ. ಸತ್ಯದಿಂದ ಇರಿʼʼಎಂದು ಹೇಳಿದರು.
ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾದ ʻಕ್ರಶ್ಮಿಕಾ!ʼ
ರಶ್ಮಿಕಾ ಮಂದಣ್ಣ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದು, ತಮಿಳಿನ ʻವರಿಸುʼ ಚಿತ್ರದಲ್ಲಿ ದಳಪತಿ ವಿಜಯ್ ಜತೆ ನಾಯಕಿಯಾಗಿ ನಟಿಸಲಿದ್ದಾರೆ. ವಂಶಿ ಪೈಡಿಪಲ್ಲಿ ನಿರ್ದೇಶನದ ಈ ಚಿತ್ರಕ್ಕೆ, ರಾಷ್ಟ್ರ ಪ್ರಶಸ್ತಿ ವಿಜೇತ ದಿಲ್ ರಾಜು ಅವರು ವೆಂಕಟೇಶ್ವರ ಕ್ರಿಯೇಷನ್ಸ್‌ನ ಪ್ರತಿಷ್ಠಿತ ಬ್ಯಾನರ್ ಅಡಿಯಲ್ಲಿ ಚಿತ್ರಕ್ಕೆ ಬೆಂಬಲ ನೀಡುತ್ತಿದ್ದಾರೆ. ರಶ್ಮಿಕಾ ಬಾಲಿವುಡ್‌ನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ʻಮಿಷನ್ ಮಜ್ನುʼ ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ | Rashmika Mandanna | ಕ್ಯಾಮೆರಾ ಕಣ್ಣಿಗೆ ಬೋಲ್ಡ್ ಆಗಿ ಪೋಸ್ ಕೊಟ್ಟ ರಶ್ಮಿಕಾ: ಗರಂ ಆದ್ರು ಫ್ಯಾನ್ಸ್!