Site icon Vistara News

Rashmika Mandanna: ʻನನಗಿರುವ ಅಭ್ಯಾಸ ನಿಮಗೂ ಇದೆಯಾʼ? ರಶ್ಮಿಕಾ ಮಂದಣ್ಣ ಪ್ರಶ್ನೆಗೆ ನಿಮ್ಮ ಉತ್ತರವೇನು?

Rashmika Mandanna

ಬೆಂಗಳೂರು: ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ (Rashmika Mandanna) ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ನಟಿ ಹಂಚಿಕೊಂಡಿರುವ ಹೊಸ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಅವರು ಕೇಳಿದ ಪ್ರಶ್ನೆಗೆ ಅನೇಕರು ಉತ್ತರಿಸುವ ಪ್ರಯತ್ನ ಮಾಡಿದ್ದಾರೆ. ರಶ್ಮಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ಕೈಯಲ್ಲಿ ಸಿಹಿತಿಂಡಿ ಹಿಡಿದುಕೊಂಡು ಪೋಸ್‌ ನೀಡಿದ್ದಾರೆ.

ರಶ್ಮಿಕಾ ಫೋಟೊ ಶೇರ್‌ ಮಾಡಿ ʻʻಇದು ನನ್ನ ಚೀಟ್​ ಡೇ ದಿನ. ನಾನು ಊಟಕ್ಕೂ ಮೊದಲು ಸಿಹಿ ತಿಂಡಿಯನ್ನು ಆರ್ಡರ್ ಮಾಡುತ್ತೇನೆ. ನನ್ನ ಗೆಳೆಯರು ಇದನ್ನು ವಿಲಕ್ಷಣ ಎಂದು ಭಾವಿಸಿದ್ದಾರೆ. ಇದನ್ನು ನಾನೊಬ್ಬಳೇ ಮಾಡುತ್ತೇನಾ? ಅಥವಾ ನನ್ನಂತೆ ಇನ್ನೂ ಅನೇಕರಿದ್ದಾರೆಯೇ ಎಂಬುದು ನನಗೆ ಗೊತ್ತಾಗಬೇಕಿದೆ’ ಎಂದು ಫೋಟೊಗೆ ಕ್ಯಾಪ್ಷನ್‌ ನೀಡಿದ್ದಾರೆ.

ಇತ್ತೀಚೆಗಷ್ಟೇ ರಶ್ಮಿಕಾ ಮಂದಣ್ಣ ಅವರು ಹೈದರಾಬಾದ್ ರೆಸ್ಟೋರೆಂಟ್ ಒಂದರಲ್ಲಿ ಕಾಣಿಸಿಕೊಂಡು ಸುದ್ದಿ ಆಗಿದ್ದರು. ಅವರ ಜತೆ ವಿಜಯ್ ದೇವರಕೊಂಡ ಹಾಗೂ ಫ್ಯಾಮಿಲಿ ಕೂಡ ಇತ್ತು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿತ್ತು.

ಇದನ್ನೂ ಓದಿ: Rashmika Mandanna: ವಿಜಯ್‌ ದೇವರಕೊಂಡ ಜತೆ ರಶ್ಮಿಕಾ; ಸೀಕ್ರೆಟ್‌ ಡೇಟಿಂಗ್‌ ವಿಡಿಯೊ ವೈರಲ್‌!

ರಶ್ಮಿಕಾ ಪೋಸ್ಟ್‌

ರಶ್ಮಿಕಾ ಪ್ರಸ್ತುತ ಪುಷ್ಪ-2 ಚಿತ್ರದ ಸೀಕ್ವೆಲ್‌ನ ಚಿತ್ರೀಕರಣದಲ್ಲಿದ್ದಾರೆ. ಸುಕುಮಾರ್ ಬರೆದು ನಿರ್ದೇಶಿಸಿದ, ಪುಷ್ಪ 2: ದಿ ರೂಲ್‌ ಸಿನಿಮಾದಲ್ಲಿ ಅಲ್ಲು ಅರ್ಜುನ್ ನಾಯಕನಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಸಾಯಿ ಪಲ್ಲವಿ ಕೂಡ ನಟಿಸುವ ಸಾಧ್ಯತೆ ಇದೆ. ಪುಷ್ಪ 2 ಸಿನಿಮಾ ಬಿಡುಗಡೆಯ ದಿನಾಂಕವನ್ನು ಸಹ ಚಿತ್ರತಂಡ ಘೋಷಿಸಿಲ್ಲ. ಚಿತ್ರ ಡಿಸೆಂಬರ್ 2023 ರಲ್ಲಿ ಥಿಯೇಟರ್‌ಗಳಲ್ಲಿ ಬರುವ ಸಾಧ್ಯತೆಯಿದೆ ಎಂದು ಈ ಹಿಂದೆ ಹೇಳಲಾಗಿತ್ತು.

ರಶ್ಮಿಕಾ ಅವರು ರಣಬೀರ್ ಕಪೂರ್ ಜತೆ ಅನಿಮಲ್ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ. ರೆನ್ಬೋ ಸಿನಿಮಾ ಕೂಡ ಇವರ ಬತ್ತಳಿಕೆಯಲ್ಲಿದೆ.

Exit mobile version