Site icon Vistara News

Rashmika Mandanna: ಶಾರುಖ್ ಖಾನ್ ಜತೆ ತೆರೆ ಹಂಚಿಕೊಳ್ತಿದ್ದಾರೆ `ನ್ಯಾಶನಲ್‌ ಕ್ರಶ್‌’ ರಶ್ಮಿಕಾ ಮಂದಣ್ಣ!

Rashmika Mandanna SRK

ಬೆಂಗಳೂರು: ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅಭಿನಯದ `ಜವಾನ್‌’ ಸಿನಿಮಾ ರಿಲೀಸ್‌ಗೆ ಅವರ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಜವಾನ್‌ಗಾಗಿ ಶಾರುಖ್‌ ಜತೆ ಸೌತ್ ಲೇಡಿ ಸೂಪರ್‌ಸ್ಟಾರ್ ನಯನತಾರಾ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಮತ್ತೊಮ್ಮೆ ‘ಕಿಂಗ್ ಆಫ್ ರೊಮ್ಯಾನ್ಸ್’ ಖ್ಯಾತಿಯ ಶಾರುಖ್‌ ಸೌತ್ ಇಂಡಸ್ಟ್ರಿಯ ಇನ್ನೊಬ್ಬ ಸುಂದರಿಯೊಂದಿಗೆ ತೆರೆಯನ್ನು ಹಂಚಿಕೊಳ್ಳಲಿದ್ದಾರೆ. ಅದು ಬೇರೆ ಯಾರೂ ಅಲ್ಲ ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ (Rashmika Mandanna). ಸಿನಿಮಾದಲ್ಲಿ ಅಲ್ಲದಿದ್ದರೂ, ರಶ್ಮಿಕಾ ಮತ್ತು ಶಾರುಖ್‌ ಜಾಹೀರಾತಿನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ, ಯಶ್ ರಾಜ್ ಫಿಲ್ಮ್ಸ್ (YRF) ಸ್ಟುಡಿಯೊದಲ್ಲಿ (Yash Raj Films (YRF) studios) ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡರು.

ವರದಿಗಳ ಪ್ರಕಾರ ಈಗಾಗಲೇ ಶಾರುಖ್‌ ಮತ್ತು ರಶ್ಮಿಕಾ ಜಾಹೀರಾತಿನ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದು, ಈಗಾಗಲೇ ಕೆಲವು ಚಿತ್ರಗಳು ವೈರಲ್‌ ಆಗಿವೆ ಎನ್ನಲಾಗಿತ್ತು. ಈ ಹಿಂದೆ ರಶ್ಮಿಕಾ ಮಂದಣ್ಣ ಅವರು ವಿಕ್ಕಿ ಕೌಶಲ್​ ಜತೆ ಒಂದು ಜಾಹೀರಾತಿನಲ್ಲಿ ನಟಿಸಿದ್ದರು. ಅದರ ಕಾನ್ಸೆಪ್ಟ್​ ಆಕ್ಷೇಪಾರ್ಹವಾಗಿದೆ ಎಂದು ನೆಟ್ಟಿಗರು ತಕರಾರು ತೆಗೆದಿದ್ದರು. ಈಗ ಶಾರುಖ್​ ಜತೆ ರಶ್ಮಿಕಾ ನಟಿಸಿದ ಜಾಹೀರಾತು ಹೇಗಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಕೆಲಸದ ಮುಂಭಾಗದಲ್ಲಿ, ಶಾರುಖ್‌ ಅವರ ಜವಾನ್‌ ಸಿನಿಮಾದ ಸಾಂಗ್‌ ಬಿಡುಗಡೆಯಾಗಿದೆ. ಜಿಂದಾ ಬಂದಾ ಎಂಬ ಹಾಡಿನಲ್ಲಿ ಶಾರುಖ್‌ ಸಖತ್‌ ಮಿಂಚಿದ್ದಾರೆ. ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ಮತ್ತು ಸನ್ಯಾ ಮಲ್ಹೋತ್ರಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ದೀಪಿಕಾ ಪಡುಕೋಣೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಸೆಪ್ಟೆಂಬರ್ 7ರಂದು ಥಿಯೇಟರ್‌ಗೆ ಬರಲಿದೆ. ಮತ್ತು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇದಲ್ಲದೆ, ಶಾರುಖ್‌ ಡಂಕಿ ಮತ್ತು ಟೈಗರ್ vs ಪಠಾಣ್‌ ಸೇರಿದಂತೆ ಹಲವಾರು ಯೋಜನೆಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ: Rashmika Mandanna: ವಿಜಯ್ ದೇವರಕೊಂಡ ಶರ್ಟ್‌ ಧರಿಸಿ ಬಂದ್ರಾ ರಶ್ಮಿಕಾ?

ಇದನ್ನೂ ಓದಿ: Kannada New Movie: ಜವಾರಿ ಭಾಷೆಯ `ಬಯಲುಸೀಮೆ’ ಸಿನಿಮಾ ಟ್ರೈಲರ್‌ ಬಿಡುಗಡೆ ಮಾಡಿದ ಜೂ.ರೆಬಲ್ ಸ್ಟಾರ್!

ರಶ್ಮಿಕಾ ಮಂದಣ್ಣ ಅವರಿಗೆ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಬಾಲಿವುಡ್​ನಲ್ಲೂ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ಅವರು ಅಲ್ಲಿನ ಸ್ಟಾರ್​ ಹೀರೋಗಳ ಜತೆ ತೆರೆ ಹಂಚಿಕೊಂಡಿದ್ದಾರೆ. ಅಮಿತಾಭ್​ ಬಚ್ಚನ್​ ಜತೆ ‘ಗುಡ್​ ಬೈ’ ಚಿತ್ರದಲ್ಲಿ ನಟಿಸುವ ಅವಕಾಶ ಅವರಿಗೆ ಸಿಕ್ಕಿತ್ತು. ‘ಮಿಷನ್​ ಮಜ್ನು’ ಚಿತ್ರದಲ್ಲಿ ಸಿದ್ದಾರ್ಥ್​ ಮಲ್ಹೋತ್ರಾಗೆ ಜೋಡಿಯಾಗಿದ್ದ ರಶ್ಮಿಕಾ ಅವರು, ‘ಅನಿಮಲ್​’ ಸಿನಿಮಾದಲ್ಲಿ ರಣಬೀರ್​ ಕಪೂರ್​ ಜತೆ ನಟಿಸಿದ್ದಾರೆ. ಆ ಸಿನಿಮಾ ಡಿಸೆಂಬರ್​ 1ರಂದು ಬಿಡುಗಡೆ ಆಗಲಿದೆ.

Exit mobile version