ಬೆಂಗಳೂರು : ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ನಟ ದಳಪತಿ ವಿಜಯ್ ಅಭಿನಯದ ‘ವಾರಿಸು’ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕರ್ನಾಟದಲ್ಲಿ ವಾರಿಸು ಸಿನಿಮಾ ಅಷ್ಟಾಗಿ ಪ್ರದರ್ಶನ ಕಾಣುತ್ತಿಲ್ಲ. ಸಂದರ್ಶನದಲ್ಲಿ ರಿಷಬ್ ಶೆಟ್ಟಿ ಅವರು ಕುರಿತು ಹೇಳಿಕೆಗೆ ನಟಿ ಟೀಕೆಗೆ ಒಳಗಾಗಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ ನಟಿ, ಟ್ರೋಲ್‌ಗಳ ಬಗ್ಗೆ ಮಾತನಾಡಿದ್ದಾರೆ.
ರಶ್ಮಿಕಾ ಮಂದಣ್ಣ ಮಾತನಾಡಿ ʻʻನನಗೆ ಮನರಂಜನೆ ನೀಡುವುದಷ್ಟೇ ಕೆಲಸ. ಜನರನ್ನು ರಂಜಿಸಲು ಸಿನಿಮಾ ಮಾಡುತ್ತೇವೆ. ನಾವು ಸೃಜನಶೀಲ ಕ್ಷೇತ್ರಕ್ಕೆ ಬರಲು ಇದು ಮುಖ್ಯ ಕಾರಣವಾಗಿದೆ. ಒಳ್ಳೆಯ ಸಿನಿಮಾ ಮಾಡಿದರೆ ಜನ ನಮ್ಮನ್ನು ಮೆಚ್ಚುತ್ತಾರೆ. ಅಷ್ಟೊಂದು ಚೆನ್ನಾಗಿಲ್ಲದ ಸಿನಿಮಾ ಮಾಡಿದರೆ ಜನ ಏನು ಮಾಡ್ತಿದೀರಾ? ಎಂದು ಪ್ರಶ್ನಿಸುತ್ತಾರೆ. ನಮ್ಮ ಜೀವನ ಒಂದೇ ಚಿತ್ರದಲ್ಲಿ ನಿಲ್ಲುವುದಿಲ್ಲ. ಇದು ಒಂದು ಪ್ರಯಾಣ,” ಎಂದು ಹೇಳಿದ್ದಾರೆ.
ಇದನ್ನೂ ಓದಿ | Rashmika Mandanna | ‘ಪುಷ್ಪ 2’ನಲ್ಲಿ ರಶ್ಮಿಕಾ ಬದಲು ಸಾಯಿ ಪಲ್ಲವಿ? ಏನಂತಾರೆ ರಶ್ಮಿಕಾ ಮಂದಣ್ಣ?
ʻʻಕೆಲಸದಲ್ಲಿ ಬರುವ ಮಾನಸಿಕ ಪರೀಕ್ಷೆಯನ್ನು ಎದುರಿಸಲು ಕಲಿತಿದ್ದೇನೆ. ಹತ್ತು ವರ್ಷಗಳ ಹಿಂದೆ, ಪಾಪರಾಜಿ ಮತ್ತು ಸಾಮಾಜಿಕ ಮಾಧ್ಯಮಗಳು ಇರಲಿಲ್ಲ. ಆಗ ಜನ ತಾರೆಯರನ್ನು ನೋಡಬೇಕೆಂದರೆ ಥಿಯೇಟರ್‌ಗಳಿಗೆ ಹೋಗುತ್ತಿದ್ದರು. ಮನೆಗಳಿಗೆ ಅಲ್ಲ. ಮತ್ತು ಈಗ, ನಾವು ಈ ಅಂಶವನ್ನು ನಿರ್ಲಕ್ಷಿಸುವಂತೆ ಇಲ್ಲ, ನಾವು ಅದನ್ನು ಪಕ್ಕಕ್ಕೆ ಇಡಲು ಸಾಧ್ಯವಿಲ್ಲ. ನಾವು ಅದನ್ನು ಒಪ್ಪಿಕೊಳ್ಳಬೇಕು ಮತ್ತು ಮುಂದುವರಿಯಬೇಕು, ”ಎಂದು ಹೇಳಿದರು.
‘ಜನರು ನಮ್ಮ ಕೆಲಸದ ಬದಲು ತಮ್ಮ ವೈಯಕ್ತಿಕ ಜೀವನದ ಗಾಸಿಪ್‌ಗಳ ಮೇಲೆ ಹೆಚ್ಚು ಗಮನಹರಿಸುತ್ತಾರೆ. ಜನರಿಗೆ ನಿಮ್ಮ ಬಗ್ಗೆ ಕುತೂಹಲವಿಲ್ಲದಿದ್ದರೆ, ಯಾರೂ ನಿಮ್ಮ ಬಗ್ಗೆ ಮಾತನಾಡುವುದಿಲ್ಲ. ಧನಾತ್ಮಕವಾಗಿರಲಿ, ನಕಾರಾತ್ಮಕವಾಗಿರಲಿ, ದಿನದ ಕೊನೆಯಲ್ಲಿ, ನೀವು ನನ್ನ ಬಗ್ಗೆ ಮಾತನಾಡಿದ್ದೀರಿ,” ಎಂದು ಹೇಳಿದರು.
ಇದನ್ನೂ ಓದಿ | Rashmika Mandanna | ಕರ್ನಾಟಕದಲ್ಲಿ ಸೋಲನುಭವಿಸಿದ ವಾರಿಸು: ರಶ್ಮಿಕಾ ಕಾರಣವಂತೆ