ಬೆಂಗಳೂರು: ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ(Vijay Deverakonda) ಲಿವ್ಇನ್ ರಿಲೇಷನ್ಶಿಪ್ನಲ್ಲಿದ್ದಾರೆ ಎಂದು ಅವರ ಫ್ಯಾನ್ಸ್ ಅದೆಷ್ಟೋ ಸಾಕ್ಷಿಗಳೊಂದಿಗೆ ಆಗಾಗ ಪ್ರೂವ್ ಮಾಡುತ್ತಲೇ ಇರುತ್ತಾರೆ. ಇದೀಗ ಮತ್ತೆ ಈ ಜೋಡಿಯ ಸುದ್ದಿ ಮುನ್ನೆಲೆಗೆ ಬಂದಿದೆ. ರಶ್ಮಿಕಾ ಇತ್ತೀಚಿಗೆ ಇನ್ಸ್ಟಾಗ್ರಾಮ್ನಲ್ಲಿ ಫೋಟೊವೊಂದನ್ನು ಶೇರ್ ಮಾಡಿಕೊಂಡಿದ್ದರು. ಅವರು ಈ ಫೋಟೊವನ್ನು ಹೈದರಾಬಾದ್ನಲ್ಲಿರುವ ವಿಜಯ್ ಅವರ ಅಪಾರ್ಟ್ಮೆಂಟ್ ಟೆರೇಸ್ನಲ್ಲಿ ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ವಿಜಯ್ ಅವರ ಇತ್ತೀಚಿನ ಚಿತ್ರದಲ್ಲಿ ರಶ್ಮಿಕಾ ಅವರ ಚಿತ್ರಕ್ಕೆ ಹೋಲುವ ರೀತಿ ಫೋಟೊವೊಂದು ಪೋಸ್ಟ್ ಮಾಡಿದ್ದಾರೆ. ಇಬ್ಬರ ಫೋಟೊದಲ್ಲಿ ನೋಡುವಾಗ ಬ್ಯಾಕ್ರೌಂಡ್ ಹಾಗೂ ಟೆರೇಸ್ನಲ್ಲಿಯ ಕೆಲವೊಂದು ದೃಶ್ಯ ಮ್ಯಾಚ್ ಆಗುವಂತಿದೆ. ಇದೀಗ ನೆಟ್ಟಿಗರು ಮತ್ತೊಮ್ಮೆ ಈ ಜೋಡಿಯನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಇಬ್ಬರೂ ಒಟ್ಟಿಗೆ ಇದ್ದಾರೆ ಎಂದು ಊಹಿಸಲು ಶುರು ಮಾಡಿದ್ದಾರೆ. ಒಬ್ಬ ಅಭಿಮಾನಿ, “ಕನಿಷ್ಠ ಅಂದರೂ 3- 4 ವರ್ಷಗಳಿಂದ ಇವರು ಒಟ್ಟಿಗೆ ಇದ್ದಾರೆʼʼ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ʻʻಈಗಾಗಲೇ ಈ ಜೋಡಿಯ ನಿಶ್ಚಿತಾರ್ಥ ಆಗಿದೆʼʼ ಎಂದು ಪ್ರತಿಕ್ರಿಯಿಸಿದ್ದಾರೆ.
ಕೆಲವು ದಿನಗಳ ಹಿಂದೆ ʼಖುಷಿʼ ಸಿನಿಮಾದ ಕಾರ್ಯಕ್ರಮದಲ್ಲಿ ವಿಜಯ್ ಅವರು ಮದುವೆ ಬಗ್ಗೆ ಪ್ರಸ್ತಾಪಿಸಿದ್ದರು. ”ಮದುವೆ ಆಗುವ ಯೋಚನೆ ಇದೆ. ನನಗೆ ಯಾವಾಗ ಸೂಕ್ತ ಎನಿಸುತ್ತದೆಯೋ ಆಗ ಮದುವೆ ಆಗುತ್ತೇನೆ. ಬಹಳ ಸರಳವಾಗಿ, ಅದ್ಧೂರಿತನ ಇಲ್ಲದೆ, ಯಾರನ್ನೂ ಆಹ್ವಾನಿಸದೆ ಮದುವೆ ಆಗುತ್ತೀನಿ. ಬುದ್ಧಿವಂತೆಯಾಗಿರುವ, ನನ್ನ ಆಸಕ್ತಿಗಳಿಗೆ, ಹವ್ಯಾಸಗಳಿಗೆ ಬೆಂಬಲ ನೀಡುವ ಹುಡುಗಿಯನ್ನು ಹುಡುಕಬೇಕೆಂದಿದ್ದೇನೆ. ಆದರೆ ಸದ್ಯಕ್ಕೆ ನನ್ನ ವೃತ್ತಿಯ ಮೇಲೆ ಗಮನ ಹರಿಸುತ್ತಿದ್ದೇನೆ. ಮುಂದೊಂದು ದಿನ ಸಿನಿಮಾ ನಿರ್ದೇಶನವನ್ನೂ ಮಾಡುವ ಆಲೋಚನೆಯೂ ಇದೆ” ಎಂದು ಹೇಳಿಕೊಂಡಿದ್ದರು.
ಇದನ್ನೂ ಓದಿ: Rashmika Mandanna: ಸಹಾಯಕನ ಮದುವೆಯಲ್ಲಿ ರಶ್ಮಿಕಾ; ದಂಪತಿ ಕಾಲಿಗೆ ಬಿದ್ದ ಕೂಡಲೇ ಮುಜುಗರಕ್ಕೆ ಒಳಗಾದ ನಟಿ!
ವದಂತಿಗಳು ಪ್ರಾರಂಭವಾದದ್ದು ಹೇಗೆ?
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮೊದಲ ಬಾರಿಗೆ ಪರಶುರಾಮ್ ನಿರ್ದೇಶನದ 2018ರ ʻಗೀತ ಗೋವಿಂದಂʼ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಚಲನಚಿತ್ರ ಸೂಪರ್ ಸಕ್ಸೆಸ್ ಕಂಡಿತು. 2019ರಲ್ಲಿ, ರಶ್ಮಿಕಾ ಮತ್ತು ವಿಜಯ್ ಮತ್ತೆ ʻಡಿಯರ್ ಕಾಮ್ರೇಡ್ʼ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಈ ಸಿನಿಮಾ ಹಿಟ್ ಆಗಿದ್ದು, ಮತ್ತೊಮ್ಮೆ ಇವರಿಬ್ಬರ ಕೆಮಿಸ್ಟ್ರಿ ಟಾಕ್ ಆಫ್ ದಿ ಟೌನ್ ಆಯಿತು. 2019ರ ಆರಂಭದಲ್ಲಿ, ರಶ್ಮಿಕಾ ಮತ್ತು ವಿಜಯ್ ಡೇಟಿಂಗ್ ವದಂತಿಗಳು ಹೊರಹೊಮ್ಮಲು ಶುರುವಾದವು. ಹಲವಾರು ಪಾರ್ಟಿಗಳಲ್ಲಿ ಮತ್ತು ಪ್ರಶಸ್ತಿ ಸಮಾರಂಭಗಳಲ್ಲಿ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಾಗ ಊಹಾಪೋಹಗಳು ಶುರುವಾದವು. ಆದಾಗ್ಯೂ, ಇಬ್ಬರೂ ವದಂತಿಗಳು ಶುರುವಾದಂತೆ ತಮ್ಮಿಬರ ಮಧ್ಯೆ ಏನೂ ಇಲ್ಲ. ಇಬ್ಬರು ಸ್ನೇಹಿತರು ಎಂದು ಸಮರ್ಥಿಸಿಕೊಂಡರು.
ಇದನ್ನೂ ಓದಿ: Rashmika Mandanna: ಧನುಷ್ ಜತೆ ರಶ್ಮಿಕಾ ರೊಮ್ಯಾನ್ಸ್!
ರಶ್ಮಿಕಾ ಅವರು ರಣಬೀರ್ ಕಪೂರ್ ಜತೆ ʼಅನಿಮಲ್ʼ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ʻಅರ್ಜುನ್ ರೆಡ್ಡಿ’ ಸಿನಿಮಾ ಖ್ಯಾತಿಯ ಸಂದೀಪ್ ರೆಡ್ಡಿ ವಂಗ ಅವರು ‘ಅನಿಮಲ್’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ತಮಿಳು, ಮಲಯಾಳಂ, ತೆಲುಗು ಮತ್ತು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ʻಅನಿಮಲ್ʼ ಸಿನಿಮಾ ಬಿಡುಗಡೆಯಾಗಲಿದೆ.. ಮುರಾದ್ ಖೇತಾನಿಯ ಸಿನಿ 1 ಸ್ಟುಡಿಯೋಸ್ ಮತ್ತು ಪ್ರಣಯ್ ರೆಡ್ಡಿ ವಂಗಾ ಅವರ ಭದ್ರಕಾಳಿ ಪಿಕ್ಚರ್ಸ್ ನಿರ್ಮಿಸಿದೆ.