Site icon Vistara News

Rashmika Mandanna: ʻಡಿಸೆಂಬರ್‌ ನನಗೆ ಸಿಕ್ಕಾಪಟ್ಟೆ ಲಕ್ಕಿʼ ಎಂದ ರಶ್ಮಿಕಾ!

Rashmika Mandanna with Ranbir Kapoor

ಬೆಂಗಳೂರು: ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ (Rashmika Mandanna) ಬಾಲಿವುಡ್‌ನಲ್ಲಿ ಅತ್ಯಂತ ಬೇಡಿಕೆ ಇರುವ ನಟಿ. ರಶ್ಮಿಕಾ ಮಂದಣ್ಣ ಮತ್ತು ರಣಬೀರ್ ಕಪೂರ್ ಒಟ್ಟಿಗೆ ನಟಿಸಿರುವ ಬಹು ನಿರೀಕ್ಷಿತ ಚಿತ್ರ ಅನಿಮಲ್ ಡಿಸೆಂಬರ್ 1 ರಂದು ಥಿಯೇಟರ್‌ಗೆ ಲಗ್ಗೆ ಇಡಲಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರದಲ್ಲಿ ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪುಷ್ಪ: ದಿ ರೈಸ್ ಚಿತ್ರದ ಮೂಲಕ ಖ್ಯಾತಿ ಪಡೆದ ರಶ್ಮಿಕಾ ಬಾಲಿವುಡ್‌ನಲ್ಲಿಯೂ ಸೈ ಎನಿಸಿಕೊಂಡರು. ʻಗುಡ್‌ಬೈʼ ಮತ್ತು ʻಮಿಷನ್ ಮಜ್ನುʼ ನಂತಹ ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿದರು. ಈಗ, ನಟಿ ರಣಬೀರ್ ಕಪೂರ್ ಅವರ ಮುಂಬರುವ ಯೋಜನೆಗೆ ಸಜ್ಜಾಗುತ್ತಿದ್ದಾರೆ. ಅಷ್ಟೇ ಅಲ್ಲದೇ ʻಡಿಸೆಂಬರ್ ನನ್ನ ಅದೃಷ್ಟದ ತಿಂಗಳುʼʼಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಡಿಸೆಂಬರ್ ನನ್ನ ಅದೃಷ್ಟದ ತಿಂಗಳು ಎಂದ ರಶ್ಮಿಕಾ

ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಚಿತ್ರ ಅನಿಮಲ್, ಡಿಸೆಂಬರ್‌ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಈ ಬಗ್ಗೆ ನಟಿ ರಶ್ಮಿಕಾ ಮಾತನಾಡಿ ʻʻಚಿತ್ರ ಡಿಸೆಂಬರ್‌ನಲ್ಲಿ ಬಿಡುಗಡೆಯ ಬಗ್ಗೆ ಥ್ರಿಲ್ ಆಗಿದ್ದೇನೆ. ಡಿಸೆಂಬರ್ ತಿಂಗಳು ನನಗೆ ಯಾವಾಗಲೂ ಅದೃಷ್ಟವಾಗಿದೆ. ಕಿರಿಕ್ ಪಾರ್ಟಿಯಿಂದ ಪ್ರಾರಂಭವಾಗಿ ಪುಷ್ಪ, ಚಮಕ್ ಮತ್ತು ಅಂಜನಿ ಪುತ್ರದವರೆಗೆ, ಈ ತಿಂಗಳಲ್ಲಿ ಬಿಡುಗಡೆಯಾದ ನನ್ನ ಎಲ್ಲಾ ಚಿತ್ರಗಳಿಗೆ ನಾನು ಅಪಾರ ಪ್ರೀತಿಯನ್ನು ಪಡೆದಿದ್ದೇನೆ. ಅನಿಮಲ್‌ ಕೂಡ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ನನ್ನ 5ನೇ ಚಿತ್ರ. ನಾನ ಥ್ರಿಲ್ ಆಗಿದ್ದೇನೆʼʼಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Rashmika Mandanna: ವಿಜಯ್ ದೇವರಕೊಂಡ ಶರ್ಟ್‌ ಧರಿಸಿ ಬಂದ್ರಾ ರಶ್ಮಿಕಾ?

ನನ್ನದು ವಿಭಿನ್ನ ಪಾತ್ರ

ಚಿತ್ರದ ಪೋಸ್ಟರ್‌ನಲ್ಲಿ, ರಣಬೀರ್ ಕಪೂರ್ ಸಂಪೂರ್ಣವಾಗಿ ವಿಭಿನ್ನ ವ್ಯಕ್ತಿತ್ವದಲ್ಲಿ ಕಾಣಿಸಿಕೊಂಡರೆ, ಮತ್ತೊಂದೆಡೆ, ರಶ್ಮಿಕಾ ತನ್ನ ಪಾತ್ರದ ಬಗ್ಗೆ ಹೇಳಿದ್ದು ಹೀಗೆ. “ಸಿನಿಮಾ ಮತ್ತು ನನ್ನ ಪಾತ್ರದ ಬಗ್ಗೆ ಪ್ರೇಕ್ಷಕರು ಏನು ಹೇಳುತ್ತಾರೆಂದು ನೋಡಲು ನಾನು ಕುತೂಹಲದಿಂದ ಕಾಯುತ್ತಿದ್ದೇನೆ. ಇದರಲ್ಲಿ ನನ್ನದು ವಿಭಿನ್ನವಾದ ಪಾತ್ರ. ನಾನು ಹಿಂದೆಂದೂ ಊಹಿಸಿರಲಿಲ್ಲ. ಹಾಗಾಗಿ ಅಭಿಮಾನಿಗಳು ಮತ್ತು ವಿಮರ್ಶಕರು ಇದರ ಬಗ್ಗೆ ಏನು ಹೇಳುತ್ತಾರೆಂದು ನೋಡಲು ನಾನು ತುಂಬಾ ಉತ್ಸುಕನಾಗಿದ್ದೇನೆʼʼಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Sunny Deol: ಒಂದೇ ದಿನ ರಿಲೀಸ್‌ ಆಗಲಿದೆ ಗದರ್‌ 2, ಅನಿಮಲ್‌ ಸಿನಿಮಾ : ಸನ್ನಿ ಡಿಯೋಲ್ ಪೋಸ್ಟರ್‌ ಔಟ್‌!

ರಶ್ಮಿಕಾ ಅವರ ಕೈಯಲ್ಲಿ ಹಲವಾರು ಸಿನಿಮಾಗಳಿವೆ. ಈಗಾಗಲೇ ಪುಷ್ಪ 2 ಚಿತ್ರೀಕರಣ ಶುರು ಮಾಡಿದೆ. ಅನಿಮಲ್‌ ಚಿತ್ರದಲ್ಲಿ ಬಾಬಿ ಡಿಯೋಲ್, ಅನಿಲ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ಮಿಂಚಲಿದ್ದಾರೆ. ʻಅರ್ಜುನ್​ ರೆಡ್ಡಿ’ ಸಿನಿಮಾ ಖ್ಯಾತಿಯ ಸಂದೀಪ್​ ರೆಡ್ಡಿ ವಂಗ ಅವರು ‘ಅನಿಮಲ್​’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.ತಮಿಳು, ಮಲಯಾಳಂ, ತೆಲುಗು ಮತ್ತು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ʻಅನಿಮಲ್ʼ ಸಿನಿಮಾ ಬಿಡುಗಡೆಯಾಗಲಿದೆ.. ಮುರಾದ್ ಖೇತಾನಿಯ ಸಿನಿ 1 ಸ್ಟುಡಿಯೋಸ್ ಮತ್ತು ಪ್ರಣಯ್ ರೆಡ್ಡಿ ವಂಗಾ ಅವರ ಭದ್ರಕಾಳಿ ಪಿಕ್ಚರ್ಸ್‌ ನಿರ್ಮಿಸಿದೆ.

Exit mobile version