ಬೆಂಗಳೂರು: ರಣಬೀರ್ ಕಪೂರ್ (Ranbir Kapoor) ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ಅವರ ಬಹುನಿರೀಕ್ಷಿತ ಚಿತ್ರ ಅನಿಮಲ್ ಸಿನಿಮಾ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಬೆಂಗಳೂರಿಗೆ ಅನಿಮಲ್ ಚಿತ್ರತಂಡ ಅನಿಮಲ್ ಪ್ರಚಾರದ ಭಾಗವಾಗಿ ಬಂದಿತ್ತು. ಈ ವೇಳೆ ರಶ್ಮಿಕಾ, ರಣಬೀರ್ ಅವರು ಕನ್ನಡದಲ್ಲಿಯೇ ಮಾತನಾಡಿದ್ದಾರೆ. ಈ ಸಿನಿಮಾದ ಕನ್ನಡ ಡಬ್ಬಿಂಗ್‌ಗೆ ರಶ್ಮಿಕಾ ಅವರೇ ವಾಯ್ಸ್ ನೀಡಿದ್ದಾರೆ.
ಮೊದಲಿಗೆ ರಶ್ಮಿಕಾ ಅವರು ಮಾತನಾಡಿ ʻʻಎಲ್ಲರಿಗೂ ನಮಸ್ಕಾರ. ತುಂಬಾನೆ ಸಮಯ ಆಯ್ತು ಇಲ್ಲಿಗೆ ಬಂದು. ನೀವೆಲ್ಲ ಚೆನ್ನಾಗಿದ್ದೀರಿ ಅಂದುಕೊಂಡಿದ್ದೇನೆʼʼ ಎಂದರು. ಇನ್ನು ರಣಬೀರ್ ಅವರು ಕೂಡ ಕನ್ನಡದಲ್ಲಿ ಮಾತನಾಡಿ ಸಿನಿಮಾ ನೋಡಿ ಎಂದು ಮನವಿ ಮಾಡಿಕೊಂಡರು.
ಇದನ್ನೂ ಓದಿ: Rashmika Mandanna: ವೈರಲ್ ಆಯ್ತು ರಶ್ಮಿಕಾಳ ಮತ್ತೊಂದು ಡೀಪ್‌ಫೇಕ್ ವಿಡಿಯೋ!
ಅನಿಮಲ್‌ಗೆ ತಮ್ಮದೇ ವಾಯ್ಸ್ ಕೊಟ್ಟ ರಶ್ಮಿಕಾ
ʻʻಈ ಸಿನಿಮಾದಲ್ಲಿ ಏನು ಮಾಡಿದ್ದೇನೆ. ಇದೆಲ್ಲ ಕ್ರೆಡಿಟ್ ನಿರ್ದೇಶಕ ಸಂದೀಪ್ ಅವರಿಗೆ ಸಲ್ಲುತ್ತದೆ. ಸಿಂಗಲ್ ಟೇಕ್ ತೆಗೆದುಕೊಳ್ಳದೇ ಹಲವು ದೃಶ್ಯಗಳನ್ನು ನಾವು ನಿಭಾಯಿಸಿದ್ದೆವುʼ ʼಎಂತಲೂ ಹೇಳಿಕೊಂಡರು.
ಸಿನಿಮಾದ ಪ್ರಿ ಬುಕ್ಕಿಂಗ್ ಶುರುವಾಗಿದ್ದು, ಈಗಾಗಲೇ 3.4 ಕೋಟಿ ರೂ. ಗಳಿಸಿದೆ ಎಂದು ವರದಿಯಾಗಿದೆ. ಪ್ರಿ ಬುಕ್ಕಿಂಗ್ ಬಗ್ಗೆ ಚಿತ್ರತಂಡ ಘೋಷಿಸಿದ 24 ಗಂಟೆಗಳಲ್ಲಿ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸೇರಿದಂತೆ 3.4 ಕೋಟಿ ರೂ. ಮೌಲ್ಯದ ಟಿಕೆಟ್‌ಗಳನ್ನು ಪ್ರೆಕ್ಷಕರು ಬುಕ್ ಮಾಡಿದ್ದಾರೆ ಎಂದು ವರದಿಯಾಗಿದೆ.
ತೆಲುಗು ಆವೃತ್ತಿಯ ಪ್ರಿ ಬುಕ್ಕಿಂಗ್ ತಮಿಳು ಆವೃತ್ತಿಗಿಂತ ಹೆಚ್ಚಿದೆ. ಕಳೆದ ವರ್ಷ ಬಿಡುಗಡೆಯಾದ ಬ್ರಹ್ಮಾಸ್ತ್ರ ಸಿನಿಮಾಗಿಂತ ಈ ಸಿನಿಮಾ ಮೂಲಕ ಮತ್ತೆ ರಣಬೀರ್ ಬಾಕ್ಸ್ ಆಫೀಸ್‌ನಲ್ಲಿ ಕೊಳ್ಳೆ ಹೊಡೆಯುತ್ತಾರೆ ಎಂದು ವರದಿಯಾಗಿದೆ.
‘ಅನಿಮಲ್’, ಡಿಸೆಂಬರ್ 1 ರಂದು ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ. ಇದೀಗ ಸಿನಿಮಾಗೆ ʻಎʼ ಸರ್ಟಿಫಿಕೇಟ್ ದೊರಕಿದೆ. ಇದರ ರನ್‌ಟೈಮ್ ಕೂಡ 3 ಗಂಟೆಗಳಿಗಿಂತ ಹೆಚ್ಚು ಎಂದು ತಿಳಿದುಬಂದಿದೆ. ಸಂದೀಪ್ ರೆಡ್ಡಿ ವಂಗಾ ಅವರ ನಿರ್ದೇಶನದ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ.