Site icon Vistara News

Raveena Tandon: ರವೀನಾ ಟಂಡನ್​ ಪುತ್ರಿ 18ನೇ ವಯಸ್ಸಿಗೇ ಪದವೀಧರೆ!; ಫೋಟೊಗಳು ಇಲ್ಲಿವೆ

Raveena Tandons Daughter Rasha

ಬಾಲಿವುಡ್ ನಟಿ ರವೀನಾ ಟಂಡನ್ (Raveena Tandon) ಅವರ ಪುತ್ರಿ ರಾಶಾ ಥಡಾನಿ (Rasha Thadani) ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಿಂದ ಪದವಿ ಪಡೆದಿದ್ದಾರೆ. ರಾಶಾ ಥಡಾನಿ ಅವರು ಗ್ರ್ಯಾಜುಯೇಷನ್​ ದಿನದ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ರವೀನಾ ಟಂಡನ್ ತಮ್ಮ ಮಗಳ ಪದವಿ ದಿನಗಳ ಚಿತ್ರದೊಂದಿಗೆ ಬಾಲ್ಯದ ಹಳೆಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡ ರವೀನಾ ಸರಳವಾಗಿ ʻʻಸಮಯ ತುಂಬ ಬೇಗ ಕಳೆಯುತ್ತದೆ ಎಂಬುದು ನಿಜʼʼಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಮಗಳ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ರವೀನಾ ಟಂಡನ್​ ಅವರು 1995ರಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದಿದ್ದರು. 2004ರಲ್ಲಿ ಅನಿಲ್​ ಥಡಾನಿ ಜತೆ ರವೀನಾ ಮದುವೆ ಆದರು. ಈ ದಂಪತಿಗೆ 2005ರಲ್ಲಿ ರಾಶಾ ಜನಿಸಿದರು. ಈಗ ರಾಶಾಗೆ 18 ವರ್ಷ ವಯಸ್ಸು.

ಈ ವರ್ಷ ಪದವಿ ಪಡೆದ ಸೆಲೆಬ್ರಿಟಿ ಕಿಡ್ ರಾಶಾ ಥಡಾನಿ ಮಾತ್ರವಲ್ಲ . ಮಾಧುರಿ ದೀಕ್ಷಿತ್ ಮತ್ತು ಡಾ ಶ್ರೀರಾಮ್ ನೆನೆ ಅವರ ಕಿರಿಯ ಮಗ ರಯಾನ್ ನೆನೆ ಕೂಡ ಅಮೆರಿಕನ್ ಸ್ಕೂಲ್ ಆಫ್ ಬಾಂಬೆ (ASB)ಯಿಂದ ಪದವಿ ಪಡೆದಿದ್ದಾರೆ.

ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್​ನ್ಯಾಷನಲ್​ ಸ್ಕೂಲ್​ನಿಂದ ಪದವಿ ಪಡೆದ ರಾಶಾ ಥಡಾನಿ ಅವರಿಗೆ ರವೀನಾ ಫ್ಯಾನ್ಸ್‌ ಸೇರಿದಂತೆ ಸೆಲೆಬ್ರಿಟಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

Exit mobile version