Site icon Vistara News

Actor Yash: ಡ್ರಾಮಾ ಬಿಡಪ್ಪ ಎಂದು ಯಶ್ ಕುರಿತು ಉಡಾಫೆ ಮಾತಾಡಿದ ರವಿತೇಜಗೆ ಫ್ಯಾನ್ಸ್‌ ಕ್ಲಾಸ್‌!

Ravi Teja calls Yash Lucky star

ಬೆಂಗಳೂರು: ತೆಲುಗಿನ ಮಾಸ್ ಮಹಾರಾಜ ರವಿ ತೇಜ (Ravi Teja) ನಟನೆಯ ಬಹುನಿರೀಕ್ಷಿತ ʻಟೈಗರ್ ನಾಗೇಶ್ವರ್ ರಾವ್ʼ ಸಿನಿಮಾ ಅಕ್ಟೋಬರ್ 22ರಂದು ವಿಶ್ವಾದ್ಯಂತ ತೆರೆ ಕಾಣುತ್ತಿದೆ. ಈಗಾಗಲೇ ಚಿತ್ರತಂಡ ಪ್ರಚಾರ ಕಾರ್ಯಗಳನ್ನು ಶುರು ಮಾಡಿದೆ. ಇತ್ತೀಚಿನ ಸಂವಾದದ ಸಂದರ್ಭದಲ್ಲಿ, ರವಿ ತೇಜ ಅವರಿಗೆ ರ‍್ಯಾಪಿಡ್ ಫೈಯರ್ ರೌಂಡ್‌ ಎದುರಾಯಿತು. ಈ ವೇಳೆ ರಾಕಿಂಗ್‌ ಸ್ಟಾರ್‌ ಯಶ್‌ (Actor Yash) ಬಗ್ಗೆಯೂ ಪ್ರಶ್ನೆಯನ್ನು ಕೇಳಲಾಗಿತ್ತು. ಆದರೆ ರವಿ ತೇಜ ಅವರು ಯಶ್‌ ಅವರ ಬಗ್ಗೆ ಉಡಾಫೆಯಾಗಿ ಉತ್ತರಿಸಿದ್ದಾರೆ ಎಂದು ಯಶ್‌ ಫ್ಯಾನ್ಸ್‌ ಆಕ್ರೋಶ್‌ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೇ ಸೋಷಿಯಲ್‌ ಮೀಡಿಯಾ ಮೂಲಕ ಯಶ್‌ ಫ್ಯಾನ್ಸ್‌ ರವಿ ತೇಜ ಅವರು ಈ ಕೂಡಲೇ ಯಶ್‌ ಅವರಿಗೆ ಕ್ಷಮೆ ಕೇಳಬೇಕು ಎಂದು ಕಮೆಂಟ್‌ ಮಾಡಿದ್ದಾರೆ.

ವಿವಾದವೇನು?

ಇತ್ತೀಚಿನ ಸಂವಾದದ ಸಂದರ್ಭದಲ್ಲಿ, ರವಿ ತೇಜ ಅವರಿಗೆ ರ‍್ಯಾಪಿಡ್ ಫೈಯರ್ ರೌಂಡ್‌ ಎದುರಾಯಿತು. ಕೆಲವು ನಟರಿಂದ ಏನೆಲ್ಲ ಗುಣಗಳು ನೀವು ಕದಿಯುತ್ತೀರಿ? ಎಂಬ ಪ್ರಶ್ನೆ ರವಿ ತೇಜ ಅವರಿಗೆ ಎದುರಾಯಿತು. ಮೊದಲಿಗೆ ರಾಮ್‌ಚರಣ್ ಹೆಸರು ಹೇಳಿದಾಗ ರಾಮ್‌ಚರಣ್ ʻಡ್ಯಾನ್ಸ್ ಸೂಪರ್ʼ ಎಂದು ರವಿ ತೇಜ ಹೇಳಿದ್ದಾರೆ. ಪ್ರಭಾಸ್ ಹೆಸರು ಬಂದಾಗ ಅವರ ʻಅಪಿಯರೆನ್ಸ್ʼ ಹಾಗೂ ಡಾರ್ಲಿಂಗ್ ಎಂದಿದ್ದಾರೆ. ಅದೇ ರೀತಿ ರಾಜಮೌಳಿ ಹೆಸರು ಬಂದಾಗ ಅವರ ʻವಿಷನ್ ಸೂಪರ್ʼ ಎಂದಿದ್ದಾರೆ. ಆದರೆ ಯಶ್ ವಿಚಾರ ಬಂದಾಗ ಅವರ ಹಾವ ಭಾವ ಬದಲಾಗಿತ್ತು. ರವಿ ತೇಜ ಅವರು ಯಶ್‌ ಬಗ್ಗೆ ಮಾತನಾಡಿ ʻʻನಾನು ಯಶ್‌ ಅವರ ಕೆಜಿಎಫ್‌ ಸಿನಿಮಾ ಮಾತ್ರ ನೋಡಿದ್ದೇನೆ. ʻಕೆಜಿಎಫ್‌’ ಸಿನಿಮಾ ಸಿಗುವುದಕ್ಕೆ ಯಶ್ ಬಹಳ ಲಕ್ಕಿʼʼಎಂದಿದ್ದಾರೆ. ರವಿ ತೇಜ ಅವರ ಈ ಉತ್ತರ ತುಂಬಾ ಉಡಾಫೆಯಾಗಿತ್ತು ಎಂದು ಯಶ್‌ ಫ್ಯಾನ್ಸ್‌ ಸೋಷಿಯಲ್‌ ಮೀಡಿಯಾ ಮೂಲಕ ಆಕ್ರೋಶ ಹೊರಹಾಕುತ್ತಿದ್ದಾರೆ.

ಇದನ್ನೂ ಓದಿ: Akshay Kumar: ಸಿನಿಮಾಗಳಲ್ಲಿ ನಾನು ಬಿಜೆಪಿ ಪರ ಪ್ರಚಾರ ಮಾಡುತ್ತಿಲ್ಲ ಎಂದ ಅಕ್ಷಯ್ ಕುಮಾರ್

ʻʻಕೆಜಿಎಫ್ ಯಶಸ್ಸು ಹಾಗೂ ಯಶ್‌ ಬಗ್ಗೆ ಎಷ್ಟು ಅಸೂಯೆ ಪಟ್ಟಿದ್ದಾರೆ! ಕೆಜಿಎಫ್ ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ ಬ್ರದರ್. ಅದು ಯಶ್ ಅವರ ಅಸಾಧಾರಣ ಸಮರ್ಪಣೆ ಮತ್ತು ಅವರ ಉತ್ಸಾಹವೇ ಸಿನಿಮಾವನ್ನು ಗೆಲ್ಲಿಸಿತುʼʼಎಂದು ಅಭಿಮಾನಿಯೊಬ್ಬರು ಟ್ವೀಟ್‌ ಮಾಡಿದ್ದಾರೆ.

ʻʻರವಿ ತೇಜ ಅವರ ಅಹಂಕಾರ, ಅವರ ಹಾವ ಭಾವ, ಧ್ವನಿ ಮಾಡ್ಯುಲೇಶನ್‌ಗಳನ್ನು ನೋಡಿ ನಾನು ಅಂದಕೊಂಡೆ.ನಿಮ್ಮ ಸಿನಿಮಾಗಳನ್ನು ಒಂದೂ ನೋಡದ ನಾನು ಅದೆಷ್ಟು ಲಕ್ಕಿ ಎಂದುʼʼ ಬರೆದುಕೊಂಡಿದ್ದಾರೆ.

ಕರ್ನಾಟಕದಲ್ಲಿ ಶಿವರಾಜಕುಮಾರ್ ಅವರ ಘೋಸ್ಟ್‌ ಸಿನಿಮಾ ಜತೆಗೆ ರವಿ ತೇಜ ಅವರ ʻಟೈಗರ್ ನಾಗೇಶ್ವರ್ ರಾವ್ ಚಿತ್ರ ಬಿಡುಗಡೆಯಾಗುತ್ತಿರುವ ಕಾರಣ, ಯಶ್ ಬಗ್ಗೆ ಅಗೌರವದ ಮಾತುಗಳನ್ನಾಡಿದ ರವಿ ತೇಜ ಸಿನಿಮಾವನ್ನು ಯಶ್‌ ಫ್ಯಾನ್ಸ್‌ ಬಹಿಷ್ಕಾರಕ್ಕೆ ಕರೆ ನೀಡುತ್ತಿದ್ದಾರೆ. ರವಿ ತೇಜ ಅವರು ಈ ಕೂಡಲೇ ಯಶ್‌ ಬಳಿ ಕ್ಷಮೆ ಕೇಳಬೇಕು ಎಂದು ಪೋಸ್ಟ್‌ ಮಾಡಲು ಶುರು ಮಾಡಿದ್ದಾರೆ.

ಇದೇ 22ಕ್ಕೆ ʻಟೈಗರ್ ನಾಗೇಶ್ವರ್ ರಾವ್

70ರ ಕಾಲಘಟ್ಟದ ಹೈದ್ರಾಬಾದ್ ಸ್ಟುವರ್ಟ್ ಪುರಂ ಹಳ್ಳಿಯೊಂದರ ಕುಖ್ಯಾತ ಕಳ್ಳನ ಜೀವನಾಧಾರಿತ ಸಿನಿಮಾ ಇದಾಗಿದೆ. ನೂಪುರ್ ಸನೋನ್ ಮತ್ತು ಗಾಯತ್ರಿ ಭಾರದ್ವಾಜ್ ನಾಯಕಿಯರಾಗಿ ಮಾಸ್ ಮಹಾರಾಜನಿಗೆ ಸಾಥ್ ಕೊಟ್ಟಿದ್ದಾರೆ. ಆರ್ ಮಧಿ ಛಾಯಾಗ್ರಹಣ, ಶ್ರೀಕಾಂತ್ ವೀಸಾ ಸಂಭಾಷಣೆ, ವಿ ಪ್ರಕಾಶ್ ಕುಮಾರ್ ಸಂಗೀತ ಸಿನಿಮಾಕ್ಕಿದೆ. ಅವಿನಾಶ್ ಕೊಲ್ಲಾ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಮಯಾಂಕ್ ಸಿಂಘಾನಿಯಾ ಸಹ ನಿರ್ಮಾಣದ ಜವಾಬ್ದಾರಿ ನಿಭಾಯಿಸಿದ್ದಾರೆ.

ಕಾರ್ತಿಕೇಯ-2, ಕಾಶ್ಮೀರಿ ಫೈಲ್ಸ್ ಸಿನಿಮಾ ನಿರ್ಮಿಸಿರುವ ಅಭಿಷೇಕ್ ಅಗರ್ವಾಲ್ ತಮ್ಮದೇ ಅಭಿಷೇಜ್ ಅಗರ್ವಾಲ್ ಆರ್ಟ್ಸ್ ಬ್ಯಾನರ್‌ನಡಿ ಟೈಗರ್ ನಾಗೇಶ್ವರ್ ರಾವ್ ಚಿತ್ರ ನಿರ್ಮಿಸಿದ್ದಾರೆ. ವಂಶಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

Exit mobile version