ಬೆಂಗಳೂರು: ಸಂಕ್ರಾಂತಿ ಬಂತು ಎಂದರೆ ಟಾಲಿವುಡ್, ಕಾಲಿವುಡ್‌ನಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗುತ್ತವೆ. ಮಹೇಶ್ ಬಾಬು ಅವರ ‘ಗುಂಟೂರು ಖಾರಂ’, ರವಿತೇಜ (Ravi Teja) ಅವರ ‘ಈಗಲ್’, ತೇಜ ಸಜ್ಜ ಅವರ ‘ಹನುಮಾನ್’, ವೆಂಕಟೇಶ್ ದಗ್ಗುಬಾಟಿ ಅವರ ‘ಸೈಂಧವ’ ಮತ್ತು ನಾಗಾರ್ಜುನ ಅವರ ‘ನಾ ಸಾಮಿ ರಂಗ’ ಚಿತ್ರಗಳು ಸಂಕ್ರಾಂತಿಯಂದು ಅದ್ಧೂರಿಯಾಗಿ ಬಿಡುಗಡೆಯಾಗಬೇಕಿತ್ತು. ಆದರೆ ರವಿತೇಜ ಅವರ ʻಈಗಲ್ʼ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದೆ.
ʻʻನಮ್ಮ ತೆಲುಗು ಚಿತ್ರರಂಗದ ಶ್ರೇಯೋಭಿವೃದ್ಧಿಗಾಗಿ ಒಂದು ಹೆಜ್ಜೆ ಹಿಂದಕ್ಕೆ ಇಡುತ್ತಿದ್ದೇನೆ. ಆಗಮನದಲ್ಲಿ ಸ್ವಲ್ಪ ಬದಲಾವಣೆ. ಈಗಲ್ 2024ರ ಫೆಬ್ರವರಿ 9ರಂದು ಬಿಡುಗಡೆಯಾಗುತ್ತಿದೆ. ಉಳಿದ ಎಲ್ಲ ಸಿನಿಮಾಗಳಿಗೆ ನನ್ನ ಶುಭ ಹಾರೈಕೆʼʼಎಂದು ಟ್ವೀಟ್ ಮಾಡಿದ್ದಾರೆ. ಈ ಮುಂಚೆ ರವಿತೇಜ ಅವರ ಮುಂಬರುವ `ಈಗಲ್’ ಸಿನಿಮಾ ಜನವರಿ 13 ರಂದು ಅದ್ಧೂರಿಯಾಗಿ ಬಿಡುಗಡೆಯಾಗಬೇಕಿತ್ತು.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ನಿರ್ಮಾಪಕ ದಿಲ್ ರಾಜು, ʻʻಫೆಬ್ರವರಿ 9 ರಂದು ‘ಈಗಲ್’ ಚಿತ್ರ ರಿಲೀಸ್ ಆಗಲಿದೆ. ನಾವು ಕೂಡ ‘ಟಿಲ್ಲು ಸ್ಕ್ವೇರ್’ ತಂಡದೊಂದಿಗೆ ಮಾತನಾಡಿದ್ದೇವೆ. ನಾಗ ವಂಶಿ ಸಿನಿಮಾ ಮುಂದೂಡಲು ಒಪ್ಪಿಗೆ ನೀಡಿದ್ದಾರೆ. ಎಲ್ಲ ಸಿನಿಮಾಗಳು ಒಟ್ಟಿಗೆ ರಿಲೀಸ್ ಆದ ಕಾರಣ ನಿರ್ಧಾರ ಕೈಗೊಂಡಿದ್ದೇವೆʼʼಎಂದು ಹೇಳಿದರು.
ಇದನ್ನೂ ಓದಿ: Ravi Teja : ʻಮಿಸ್ಟರ್ ಬಚ್ಚನ್ʼ ಆದ ರವಿ ತೇಜ; ಅಮಿತಾಭ್ ರಿಯಲ್ ಫ್ಯಾನ್ ಅಂದ್ರು ನೆಟ್ಟಿಗರು!
ಈ ಹಿಂದೆ ಛಾಯಾಗ್ರಾಹಕರಾಗಿ ಕೆಲಸ ಮಾಡಿರುವ ಅನುಭವ ಇರುವ ಕಾರ್ತಿಕ್ ಕಟ್ಟಿಮನೆ ಅವರ ನಿರ್ದೇಶನದಲ್ಲಿ ಬರಲಿರುವ ಸಿನಿಮಾಕ್ಕೆ ʼಈಗಲ್ʼ ಎಂದು ಹೆಸರಿಡಲಾಗಿದೆ. ರವಿ ತೇಜ ಈ ಸಿನಿಮಾದಲ್ಲಿ ಒಬ್ಬ ಚಿತ್ರ ಕಲೆಗಾರನಾಗಿ, ಕೃಷಿಕನಾಗಿ, ಆಕ್ಷನ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ ಎಂದು ಟೈಟಲ್ ಅನೌನ್ಸ್‌ಮೆಂಟ್ ವಿಡಿಯೊದಿಂದ ತಿಳಿದುಬಂದಿದೆ. ನಟಿ ಅನುಪಮಾ ಪರಮೇಶ್ವರನ್, ನವದೀಪ್, ಮಧುಬಾಲ, ಕಾವ್ಯ ಥಾಪರ್ ಅವರು ಈ ವಿಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ.
ಭಾರೀ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈಗಲ್ ಸಿನಿಮಾಗೆ ಕಾರ್ತಿಕ್ ಗಟ್ಟಿಮನ್ನಿ ನಿರ್ದೇಶನದ ಜತೆಗೆ ಸಂಕಲನ ಹಾಗೂ ಛಾಯಾಗ್ರಹಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಮಣಿಬಾಬು ಕರಣಂ ಅವರ ಸಂಭಾಷಣೆ, ದಾವ್ಜಂಡ್ ಟ್ಯೂನ್ ಚಿತ್ರಕ್ಕಿದೆ.