Site icon Vistara News

Ravi Teja : ʻಮಿಸ್ಟರ್ ಬಚ್ಚನ್ʼ ಆದ ರವಿ ತೇಜ; ಅಮಿತಾಭ್‌ ರಿಯಲ್‌ ಫ್ಯಾನ್‌ ಅಂದ್ರು ನೆಟ್ಟಿಗರು!

Ravi Teja in and as Mr Bachchan First look poster

ಬೆಂಗಳೂರು: ನಟ ರವಿ ತೇಜ (Ravi Tej) ಮತ್ತು ನಿರ್ದೇಶಕ ಹರೀಶ್ ಶಂಕರ್ ಹೊಸ ಸಿನಿಮಾಗಾಗಿ ಮತ್ತೆ ಕೈ ಜೋಡಿಸಿದ್ದಾರೆ. ಇದೀಗ ನಟ ರವಿತೇಜ ಅವರು ತಮ್ಮ ಹೊಸ ಚಿತ್ರದ ಟೈಟಲ್‌ ಹಾಗೂ ಫಸ್ಟ್ ಲುಕ್ ಪೋಸ್ಟರ್‌ ಅನಾವರಣ ಮಾಡಲಾಗಿದೆ. ಈ ಚಿತ್ರಕ್ಕೆ ʻಮಿಸ್ಟರ್ ಬಚ್ಚನ್ʼ ಎಂದು ಟೈಟಲ್‌ ಇಡಲಾಗಿದೆ. ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ದೊಡ್ಡ ಅಭಿಮಾನಿಯಾಗಿರುವ ರವಿ ತೇಜ ಅವರು ಫಸ್ಟ್ ಲುಕ್‌ನಲ್ಲಿ ಅಮಿತಾಭ್‌ ಅವರಂತೆ ಪೋಸ್‌ ಕೊಟ್ಟಿದ್ದಾರೆ.

ರವಿ ತೇಜ ಅವರು ʻಮಿಸ್ಟರ್ ಬಚ್ಚನ್ʼ ಪೋಸ್ಟರ್‌ನಲ್ಲಿ ಗಂಭೀರವಾದ ಲುಕ್‌ ನೀಡಿದ್ದಾರೆ. 80ರ ದಶಕದಲ್ಲಿ ಅಮಿತಾಭ್ ಬಚ್ಚನ್ ಅವರಂತೆ ಹೋಲುವ ಸ್ಟೈಲ್‌ನಲ್ಲಿ ಕಂಡಿದ್ದಾರೆ. ನೀವು ನನ್ನ ಹೆಸರನ್ನು ಕೇಳಿರಬೇಕು (‘ನಾಮ್ ಥೋ ಸುನಾ ಹೋಗಾ) ಎಂದು ಅಮಿತಾಭ್ ಅವರ ಸಾಲುಗಳನ್ನು ಪೋಸ್ಟರ್‌ನಲ್ಲಿ ಬರೆದುಕೊಂಡಿದ್ದಾರೆ .

ರವಿತೇಜ ಅವರು ತಮ್ಮ ಮಿಸ್ಟರ್ ಬಚ್ಚನ್ ಲುಕ್ ಟ್ವೀಟ್‌ನಲ್ಲಿ ಹಂಚಿಕೊಂಡು ʻʻನನ್ನ ನೆಚ್ಚಿನ ಅಮಿತಾಭ್‌ ಬಚ್ಚನ್‌ ಸರ್‌ ಅವರ ಹೆಸರಿನೊಂದಿಗೆ ಪಾತ್ರವನ್ನು ನಿರ್ವಹಿಸಲು ನನಗೆ ಗೌರವವಿದೆʼʼಎಂದು ಬರೆದುಕೊಂಡಿದ್ದಾರೆ. ಮಿಸ್ಟರ್ ಬಚ್ಚನ್ ಸಿನಿಮಾಗಾಗಿ ರವಿತೇಜ ಅವರು ಹರೀಶ್ ಶಂಕರ್ ಜತೆ ಮೂರನೇ ಬಾರಿಗೆ ಕೈ ಜೋಡಿಸುತ್ತಿದ್ದಾರೆ. ಭಾಗ್ಯಶ್ರೀ ಬೋರ್ಸೆ ಅವರು ಮಿಸ್ಟರ್ ಬಚ್ಚನ್ ಚಿತ್ರದಲ್ಲಿ ನಾಯಕಿಯಾಗಿ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ.ಈ ಸಿನಿಮಾ 2024ರಲ್ಲಿ ತೆರೆಗೆ ಬರಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಟಿಜಿ ವಿಶ್ವ ಪ್ರಸಾದ್‌, ವಿವೇಕ್ ಕೂಚಿಭೋಟ್ಲಾ ಸಹ ನಿರ್ಮಾಪಕರಾಗಿ ಸಿನಿಮಾವನ್ನು ನಿರ್ಮಿಸಲಿದ್ದಾರೆ. ಮಿಕ್ಕಿ ಜೆ ಮೇಯರ್ ಅವರ ಸಂಗೀತ ಸಿನಿಮಾಕ್ಕಿರಲಿದೆ.

ಇದನ್ನೂ ಓದಿ: Ravi Teja: ‘ಟೈಗರ್ ನಾಗೇಶ್ವರ್ ರಾವ್’ ಮೊದಲ ಹಾಡು ರಿಲೀಸ್; ನೂಪುರ್ ಸನೋನ್ ಜತೆ ರವಿತೇಜ ಮಾಸ್ ಸ್ಟೆಪ್‌!

ನಟಿ ಕೃತಿ ಸನೂನ್‌ ಅವರ ಸಹೋದರಿ ನೂಪುರ್ ಸನೂನ್‌ ಅವರು ರವಿತೇಜಾ ಅಭಿನಯದ ತೆಲುಗು ಚಿತ್ರ ಟೈಗರ್ ನಾಗೇಶ್ವರ ರಾವ್‌ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ವಂಶೀ ನಿರ್ದೇಶಿಸಿದ, ಈ ಸಿನಿಮಾದಲ್ಲಿ ಅನುಪಮ್ ಖೇರ್, ರೇಣು ದೇಸಾಯಿ, ಜಿಶು ಸೇನ್‌ಗುಪ್ತ, ಗಾಯತ್ರಿ ಭಾರದ್ವಾಜ್ ಮತ್ತು ಮುರಳಿ ಶರ್ಮಾ ಕೂಡ ಕಾಣಿಸಿಕೊಂಡಿದ್ದರು. ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ಈ ಸಿನಿಮಾ ಸಾಕಷ್ಟು ಖ್ಯಾತಿ ಗಳಿಸಿತ್ತು.

ಮುಂಬರುವ ತಿಂಗಳುಗಳಲ್ಲಿ, ರವಿತೇಜ ʻಈಗಲ್ʼ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನು ಕಾರ್ತಿಕ್ ಗಟ್ಟಮ್ನೇನಿ ಬರೆದು, ನಿರ್ದೇಶಿಸಿದ್ದಾರೆ. 2024ರ ಜನವರಿ 13ರಂದು ಥಿಯೇಟರ್‌ಗಳಿಗೆ ಬರಲಿದೆ. ಇದನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಟಿಜಿ ವಿಶ್ವ ಪ್ರಸಾದ್ ಮತ್ತು ವಿವೇಕ್ ಕುಚಿಭೋಟ್ಲಾ ಅವರು ನಿರ್ಮಿಸಿದ್ದಾರೆ.

Exit mobile version