Site icon Vistara News

Eagle Movie : ಈಗಲ್‌ ರೂಪದಲ್ಲಿ ಬರಲಿದ್ದಾರೆ ರವಿತೇಜ! ಮುಂದಿನ ಸಂಕ್ರಾಂತಿಗೆ ಸಿನಿಮಾ ರಿಲೀಸ್‌

ravi teja's new movie eagle

#image_title

ಹೈದರಾಬಾದ್‌: ರವಿತೇಜ ನಟನೆಯ ಧಮಾಕ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಹೆಸರು ಗಳಿಸಿತ್ತು. ಆ ಸಿನಿಮಾಕ್ಕೆ ಪೀಪಲ್‌ ಮೀಡಿಯಾ ಫ್ಯಾಕ್ಟರಿ ಅಡಿಯಲ್ಲಿ ಟಿಜೆ ವಿಶ್ವ ಪ್ರಸಾದ್‌ ಅವರು ಬಂಡವಾಳ ಹೂಡಿದ್ದರು. ಧಮಾಕದ ಯಶಸ್ಸಿನ ಬೆನ್ನಲ್ಲೇ ರವಿತೇಜ ಅವರು ಪೀಪಲ್ಸ್‌ ಮೀಡಿಯಾ ಫ್ಯಾಕ್ಟರಿಯೊಂದಿಗೆ ಮತ್ತೊಂದು ಸಿನಿಮಾಕ್ಕೆ (Eagle Movie) ಕೈ ಜೋಡಿಸಿದ್ದಾರೆ.

ಹೌದು. ರವಿತೇಜ ಅವರ ಮತ್ತೊಂದು ಸಿನಿಮಾ ಘೋಷಣೆಯಾಗಿದೆ. ಈ ಹಿಂದೆ ಛಾಯಾಗ್ರಾಹಕರಾಗಿ ಕೆಲಸ ಮಾಡಿರುವ ಅನುಭವ ಇರುವ ಕಾರ್ತಿಕ್‌ ಕಟ್ಟಿಮನೆ ಅವರ ನಿರ್ದೇಶನದಲ್ಲಿ ಬರಲಿರುವ ಸಿನಿಮಾಕ್ಕೆ ʼಈಗಲ್‌ʼ ಎಂದು ಹೆಸರಿಡಲಾಗಿದೆ.

ಇದನ್ನೂ ಓದಿ: Video Viral: ಒಂದು ಟಿಸಿಗೆ ಬರೀ ನೂರೇ ರೂಪಾಯಿ, ಕಾಸು ಕೊಟ್ರಷ್ಟೇ ಇಲ್ಲಿ ಕಮಾಯಿ; ಈತ ದುರ್ಗದ ಲಂಚ ಪುರುಷ!
ರವಿ ತೇಜ ಈ ಸಿನಿಮಾದಲ್ಲಿ ಒಬ್ಬ ಚಿತ್ರ ಕಲೆಗಾರನಾಗಿ, ಕೃಷಿಕನಾಗಿ, ಆಕ್ಷನ್‌ ನಾಯಕನಾಗಿ ಕಾಣಿಸಿಕೊಂಡಿದ್ದಾರೆ ಎಂದು ಟೈಟಲ್‌ ಅನೌನ್ಸ್‌ಮೆಂಟ್‌ ವಿಡಿಯೊದಿಂದ ತಿಳಿದುಬಂದಿದೆ. ನಟಿ ಅನುಪಮಾ ಪರಮೇಶ್ವರನ್‌, ನವದೀಪ್, ಮಧುಬಾಲ, ಕಾವ್ಯ ಥಾಪರ್ ಅವರು ಈ ವಿಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ.


ಭಾರೀ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈಗಲ್ ಸಿನಿಮಾಗೆ ಕಾರ್ತಿಕ್ ಗಟ್ಟಿಮನ್ನಿ ನಿರ್ದೇಶನದ ಜತೆಗೆ ಸಂಕಲನ ಹಾಗೂ ಛಾಯಾಗ್ರಹಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ‌. ಮಣಿಬಾಬು ಕರಣಂ ಅವರ ಸಂಭಾಷಣೆ, ದಾವ್ಜಂಡ್ ಟ್ಯೂನ್ ಚಿತ್ರಕ್ಕಿದೆ. ಹೈದರಾಬಾದ್‌ ಹಾಗೂ ಸುತ್ತಲಿನ ಸ್ಥಳಗಳಲ್ಲಿ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಸಿನಿಮಾ 2024ರ ಸಂಕ್ರಾಂತಿ ಹಬ್ಬಕ್ಕೆ ತೆರೆ ಕಾಣಲಿದೆ.

Exit mobile version