Site icon Vistara News

Ravi Teja: ’ಟೈಗರ್ ನಾಗೇಶ್ವರ್ ರಾವ್’ ಪರಿಚಯಿಸಿದ ಶಿವಣ್ಣ ; ರಾಜಮಂಡ್ರಿಯ ಹ್ಯಾವ್ಲಾಕ್ ಸೇತುವೆ ಮೇಲೆ ಫಸ್ಟ್ ಲುಕ್ ಲಾಂಚ್

Ravi Teja Tiger Nageswara Rao first look

ಬೆಂಗಳೂರು: ತೆಲುಗಿನ ಮಾಸ್ ಮಹಾರಾಜ ರವಿತೇಜ (Ravi Teja) ಅವರ ಚೊಚ್ಚಲ ಪ್ಯಾನ್ ಇಂಡಿಯಾ ಸಿನಿಮಾ ʻಟೈಗರ್ ನಾಗೇಶ್ವರ್ ರಾವ್ʼ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಭಾರತದ ಮೂರನೇ ಅತಿ ಉದ್ದದ ರಸ್ತೆ ಹಾಗೂ ರೈಲ್ವೆ ಸೇತುವೆ ಎನಿಸಿಕೊಂಡಿರುವ ರಾಜಮಂಡ್ರಿಯಲ್ಲಿರುವ ಗೋದಾವರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹ್ಯಾವ್ಲಾಕ್ ಸೇತುವೆ ಮೇಲೆ ಮೇ 24ರಂದು ಫಸ್ಟ್ ಲುಕ್ ಪೋಸ್ಟರ್ ಅನಾವರಣ ಮಾಡಲಾಗಿದೆ.

ಟೈಗರ್ ನಾಗೇಶ್ವರ್ ರಾವ್ ಫಸ್ಟ್ ಲುಕ್‌ನಲ್ಲಿ ರವಿತೇಜ, ಉಗ್ರವಾದ ರೂಪದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಬಿಯರ್ಡ್ ಲುಕ್, ಗಾಯವಾದ ಮುಖ, ಮಾಸ್ ಅವತಾರದಲ್ಲಿ ಮಾಸ್ ಮಹಾರಾಜ ಧಗಧಗಿಸಿದ್ದಾರೆ. ಪಂಚ ಭಾಷೆಯಲ್ಲಿ ರಿಲೀಸ್ ಆಗಿರುವ ಕನ್ನಡದ ಫಸ್ಟ್ ಲುಕ್‌ಗೆ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಧ್ವನಿಯಾಗಿದ್ದಾರೆ. ಭಾರತದ ಕುಖ್ಯಾತ ಕಳ್ಳ ಎನಿಸಿಕೊಂಡಿರುವ ಟೈಗರ್ ನಾಗೇಶ್ವರ್ ರಾವ್ ಪ್ರಪಂಚವನ್ನು ಶಿವಣ್ಣ ಪರಿಚಯಿಸಿದ್ದಾರೆ.

ವಂಶಿ ನಿರ್ದೇಶನದಲ್ಲಿ ಅದ್ಧೂರಿಯಾಗಿ ಈ ಸಿನಿಮಾ ಮೂಡಿ ಬರುತ್ತಿದೆ. ಕನ್ನಡದಲ್ಲಿ ಶಿವಣ್ಣ, ತೆಲುಗಿನಲ್ಲಿ ವೆಂಕಟೇಶ್ ದಗ್ಗುಭಾಟಿ, ಬಾಲಿವುಡ್‌ನಲ್ಲಿ ಜಾನ್ ಅಬ್ರಾಂ, ತಮಿಳಿನಲ್ಲಿ ಕಾರ್ತಿ ಹಾಗೂ ಮಲಯಾಳಂನಲ್ಲಿ ದುಲ್ಕರ್ ಸಲ್ಮಾನ್ ಟೈಗರ್ ನಾಗೇಶ್ವರ್ ರಾವ್ ಫಸ್ಟ್ ಲುಕ್‌ಗೆ ಧ್ವನಿಯಾಗಿದ್ದಾರೆ. ʻʻಜಿಂಕೆಯನ್ನು ಬೇಟೆಯಾಡುವ ಹುಲಿ ನೋಡಿರ್ತಿಯಾ.. ಹುಲಿಗಳನ್ನು ಬೇಟೆಯಾಡುವ ಹುಲಿ ನೋಡಿರ್ತಿಯಾʼʼ ಎಂಬ ಪವರ್ ಫುಲ್ ಡೈಲಾಗ್ ಮೂಲಕ ರವಿತೇಜ ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ: Ravi Teja: ರವಿ ತೇಜ ಸಿನಿಮಾಗೆ ಶಿವಣ್ಣ ಸಾಥ್‌; ಫಸ್ಟ್ ಲುಕ್ ರಿಲೀಸ್‌ಗೆ ಮುಹೂರ್ತ ಫಿಕ್ಸ್‌!

70ರ ಕಾಲಘಟ್ಟದ ಹೈದ್ರಾಬಾದ್‌ನ ಸ್ಟುವರ್ಟ್ ಪುರಂ ಹಳ್ಳಿಯೊಂದರ ಕುಖ್ಯಾತ ಕಳ್ಳನ ಜೀವನಾಧಾರಿತ ಸಿನಿಮಾ ಇದಾಗಿದ್ದು, ಈ ಹಿಂದಿನ ಎಲ್ಲಾ ಚಿತ್ರಕ್ಕಾಗಿ ರವಿತೇಜ ಗೆಟಪ್, ಬಾಡಿ ಲಾಗ್ವೇಜ್ ಸಂಪೂರ್ಣವಾಗಿ ಬದಲಿಸಿಕೊಂಡಿದ್ದಾರೆ. ನೂಪುರ್ ಸನೋನ್ ಮತ್ತು ಗಾಯತ್ರಿ ಭಾರದ್ವಾಜ್ ನಾಯಕಿಯರಾಗಿ ಮಾಸ್ ಮಹಾರಾಜನಿಗೆ ಸಾಥ್ ಕೊಟ್ಟಿದ್ದಾರೆ. ಆರ್ ಮಧಿ ಛಾಯಾಗ್ರಹಣ, ಶ್ರೀಕಾಂತ್ ವೀಸಾ ಸಂಭಾಷಣೆ, ವಿ ಪ್ರಕಾಶ್ ಕುಮಾರ್ ಸಂಗೀತ ಸಿನಿಮಾಕ್ಕಿದೆ. ಅವಿನಾಶ್ ಕೊಲ್ಲಾ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಮಯಾಂಕ್ ಸಿಂಘಾನಿಯಾ ಸಹ ನಿರ್ಮಾಣದ ಜವಾಬ್ದಾರಿ ನಿಭಾಯಿಸಿದ್ದಾರೆ. ಅಕ್ಟೋಬರ್ 22ರಂದು ವಿಶ್ವಾದ್ಯಂತ ರವಿತೇಜ ಸಿನಿಮಾ ಬೆಳ್ಳಿತೆರೆಗಪ್ಪಳಿಸಲಿದೆ.

Exit mobile version