Site icon Vistara News

Ravichandran: ಮಾತಿನ ಮನೆಯಲ್ಲಿ ‘ದ ಜಡ್ಜ್ ಮೆಂಟ್’; ಕ್ರೇಜಿಸ್ಟಾರ್‌ ಅಭಿನಯದ ಚಿತ್ರ ಶೀಘ್ರ ತೆರೆಗೆ

judgement

judgement

ಬೆಂಗಳೂರು: ಜಿ 9 ಕಮ್ಯುನಿಕೇಷನ್ ಮೀಡಿಯಾ & ಎಂಟರ್‌ಟೈನ್‌ಮೆಂಟ್‌ ಲಾಂಛನದಲ್ಲಿ ಶಾರದಾ ನಾಡಗೌಡ, ವಿಶ್ವನಾಥ ಗುಪ್ತ, ರಾಮು ರಾಯಚೂರು, ರಾಜಶೇಖರ ಪಾಟೀಲ ಮತ್ತು ಪ್ರತಿಮ ಬಿರಾದಾರ ನಿರ್ಮಿಸುತ್ತಿರುವ ಹಾಗೂ ಗುರುರಾಜ ಕುಲಕರ್ಣಿ (ನಾಡಗೌಡ) ರಚನೆ ಹಾಗೂ ನಿರ್ದೇಶನದ, ರವಿಚಂದ್ರನ್‌ (Ravichandran) ಅಭಿನಯದ ʼದ ಜಡ್ಜ್ ಮೆಂಟ್ʼ ಚಿತ್ರಕ್ಕೆ ಮಾತಿನ ಜೋಡಣೆ ಆರಂಭವಾಗಿದೆ. ಚಿತ್ರಕ್ಕೆ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಒಂದು ಹಾಡಿನ ಶೂಟಿಂಗ್‌ ಮಾತ್ರ ಬಾಕಿಯಿದೆ.

ಅಪಾರ ವೆಚ್ಚದಲ್ಲಿ ಅದ್ದೂರಿ ತಾರಾಗಣದೊಂದಿಗೆ ನಿರ್ಮಾಣವಾಗುತ್ತಿರುವ ಈ ಚಿತ್ರ ಆರಂಭದಿಂದಲೂ ಸದ್ದು ಮಾಡುತ್ತಿದೆ. ʼದ ಜಡ್ಜ್‌ಮೆಂಟ್‌ʼ ಸಿನಿಮಾ ಲೀಗಲ್‌ ಥ್ರಿಲ್ಲರ್‌ ಆಗಿದ್ದು, ರಾಜ್ಯಾಂಗ ಮತ್ತು ನ್ಯಾಯಾಂಗದ ಸುತ್ತ ನಡೆಯುವ ಘಟನೆಯನ್ನು ಬಳಸಿಕೊಂಡು ಕಥೆ ಹಣೆಯಾಗಿದೆಯಂತೆ.

ಕ್ರೇಜಿಸ್ಟಾರ್ ರವಿಚಂದ್ರನ್ ಈ ಚಿತ್ರದಲ್ಲಿ ವಕೀಲರಾಗಿ ಅಭಿನಯಿಸಿದ್ದಾರೆ. ಜತೆಗೆ ದಿಗಂತ್‌ ಮಂಚಾಲೆ, ಮೇಘನಾ ಗಾಂವ್ಕರ್‌, ಧನ್ಯಾ ರಾಮ್ ಕುಮಾರ್‌, ಲಕ್ಷ್ಮೀ ಗೋಪಾಲಸ್ವಾಮಿ, ಪ್ರಕಾಶ ಬೆಳವಾಡಿ, ಟಿ.ಎಸ್.ನಾಗಾಭರಣ, ಕೃಷ್ಣಾ ಹೆಬ್ಬಾಳೆ, ರಂಗಾಯಣ ರಘು, ರಾಜೇಂದ್ರ ಕಾರಂತ, ರವಿಶಂಕರ ಗೌಡ ಸುಜಯ ಶಾಸ್ತ್ರೀ, ರೇಖಾ ಕೂಡ್ಲಿಗಿ, ರೂಪಾ ರಾಯಪ್ಪ, ಪ್ರೀತಂ, ಅಶ್ವಿನ್ ರಾವ್ ಮುಂತಾದವರು ಚಿತ್ರದ ತಾರಾ ಬಳಗದಲ್ಲಿದ್ದಾರೆ.

ಗುರುರಾಜ ಕುಲಕರ್ಣಿ (ನಾಡಗೌಡ) ನಿರ್ದೇಶಿಸಿರುವ ʼದ ಜಡ್ಜ್ ಮೆಂಟ್ʼ ಚಿತ್ರಕ್ಕೆ ಎಂ.ಎಸ್.ರಮೇಶ್ ಸಂಭಾಷಣೆ ಬರೆದಿದ್ದಾರೆ. ʼಕಾಂತಾರʼ ಚಿತ್ರದ ʼಸಿಂಗಾರ ಸಿರೆಯೇʼ ಹಾಡಿನ ಖ್ಯಾತಿಯ ಪ್ರಮೋದ್ ಮರವಂತೆ ಹಾಡುಗಳನ್ನು ರಚಿಸಿದ್ದಾರೆ. ಅನೂಪ್ ಸೀಳಿನ್‌ ಸಂಗೀತ ಸಂಯೋಜಿಸಿದ್ದಾರೆ. ಪಿ.ಕೆ.ಎಚ್. ದಾಸ್ ಛಾಯಾಗ್ರಹಣ, ಕೆಂಪರಾಜ್ ಬಿ.ಎಸ್. ಸಂಕಲನವಿರುವ ಈ ಚಿತ್ರದ ಸ್ಕ್ರಿಪ್ಟ್ ಸೂಪರ್ ವೈಸರ್ ಆಗಿ ಪಿ. ವಾಸುದೇವ ಮೂರ್ತಿ ಕಾರ್ಯ ನಿರ್ವಹಿಸಿದ್ದಾರೆ.

ಇದನ್ನೂ ಓದಿ: Vikram Ravichandran : ವಿಕ್ರಮ್ ರವಿಚಂದ್ರನ್ ಎರಡನೇ ಸಿನಿಮಾಗೆ ‘ಮುಧೋಳ್’ ಟೈಟಲ್‌ ಫಿಕ್ಸ್‌

ಹಿರಿಯ ನಟ, ಕ್ರೇಜಿಸ್ಟಾರ್‌ ಅನೇಕ ದಿನಗಳ ಬಳಿಕ ಕರಿ ಕೋಟು ತೊಟ್ಟು ತೆರೆ ಮೇಲೆ ಬರಲಿದ್ದಾರೆ. ವರ್ಷಾರಂಭದಲ್ಲಿ ದರ್ಶನ್‌ ಅಭಿನಯದ ʼಕ್ರಾಂತಿʼ ಚಿತ್ರದಲ್ಲಿ ನಟಿಸಿದ್ದರು. ಸದ್ಯ ʼಕೆಡಿʼ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಜತೆಗೆ ಡ್ರಾಮಾ ಜೂನಿಯರ್‌ ರಿಯಾಲಿಟಿ ಶೋದಲ್ಲೂ ಭಾಗವಹಿಸುತ್ತಿದ್ದಾರೆ. ಇನ್ನು ʼನಿನ್ನ ಸನಿಹಕೆʼ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಧನ್ಯಾ ರಾಮ್‌ ಕುಮಾರ್‌ ಕೂಡ ಅಳೆದೂ ತೂಗಿ ಪಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದು, ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ʼಗಾಳಿಪಟ 2ʼ ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ನಟ ದಿಗಂತ್‌ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಪಾತ್ರಗಳಲ್ಲಿ ಸಖತ್‌ ಚ್ಯೂಸಿಯಾಗಿರುವ ಮೇಘನಾ ಗಾಂವ್ಕರ್‌ ʼಕರ್ವ 3ʼ ಚಿತ್ರದ ಜತೆಗೆ ʼದ ಜಡ್ಜ್ ಮೆಂಟ್ʼ ಸಿನಿಮಾದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಇನ್ನೊಂದು ವಿಶೇಷ ಎಂದರೆ ಹಿರಿಯ ನಟಿ ಲಕ್ಷ್ಮೀ ಗೋಪಾಲಸ್ವಾಮಿ ಅನೇಕ ದಿನಗಳ ಬಳಿಕ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕಳೆದ ವರ್ಷ ತೆರೆಕಂಡ ʼರೆಮೋʼ ಚಿತ್ರದಲ್ಲಿ ಅವರು ಪುಟ್ಟ ಪಾತ್ರ ನಿರ್ವಹಿಸಿದ್ದರು. ಈ ಚಿತ್ರದಲ್ಲಿ ವಕೀಲೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version