Site icon Vistara News

Parineeti And Raghav : ಪರಿಣಿತಿ ಚೋಪ್ರಾ ನಿಶ್ಚಿತಾರ್ಥದ ಮನಮುಟ್ಟುವ ಪೋಸ್ಟ್‌ ಹಾಕಿದ ತಾಯಿ ರೀನಾ

#image_title

ಮುಂಬೈ: ಬಾಲಿವುಡ್‌ ಮಂದಿಯ ಮನೆಗಳಲ್ಲಿ ನಡೆಯುವ ಪ್ರತಿ ಕಾರ್ಯಕ್ರಮ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸುತ್ತದೆ. ಅದರಂತೆ ನಟಿ ಪರಿಣಿತಿ ಚೋಪ್ರಾ ಮತ್ತು ರಾಘವ್‌ ಛಡ್ಡಾ (Parineeti And Raghav) ಅವರ ನಿಶ್ಚಿತಾರ್ಥ ಕೂಡ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ ವಿಚಾರವಾಗಿತ್ತು. ಈ ಜೋಡಿ ದಾಂಪತ್ಯಕ್ಕೆ ಕಾಲಿಡುತ್ತದೆ ಎನ್ನುವ ವಿಚಾರ ಸಾಕಷ್ಟು ದಿನಗಳಿಂದ ಹರಿದಾಡುತ್ತಿದ್ದು, ಶನಿವಾರ ಸಂಜೆ ಅದು ನಿಶ್ಚಿತಾರ್ಥದ ಮೂಲಕ ಅಧಿಕೃತಗೊಂಡಿದೆ.

ಪರಿಣಿತಿ ಮತ್ತು ರಾಘವ್‌ ಅವರ ನಿಶ್ಚಿತಾರ್ಥದ ಫೋಟೋಗಳನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಅನೇಕ ರೀತಿಯಲ್ಲಿ ಶುಭ ಹಾರೈಸುತ್ತಿದ್ದಾರೆ. ಅದೇ ರೀತಿ ಪರಿಣಿತಿ ಚೋಪ್ರಾ ಅವರ ತಾಯಿ ರೀನಾ ಚೋಪ್ರಾ ಕೂಡ ಮಗಳು ಮತ್ತು ಭಾವಿ ಅಳಿಯನ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಹಂಚಿಕೊಂಡಿರುವ ಅವರು, “ದೇವರು ಇದ್ದಾನೆ ಎಂದು ಮತ್ತೆ ಮತ್ತೆ ನಂಬುವಂತೆ ಮಾಡಲು ಹಲವು ಕಾರಣಗಳಿರುತ್ತವೆ. ಅದರಲ್ಲಿ ಇದೂ ಒಂದು” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Parineeti Chopra Engagement: ಇಲ್ಲಿದೆ ಪರಿಣಿತಿ ಚೋಪ್ರಾ ಮತ್ತು ರಾಘವ್‌ ಛಡ್ಡಾ ನಿಶ್ಚಿತಾರ್ಥ ಫೋಟೊಗಳು
ಹಾಗೆಯೇ ನವ ಜೋಡಿಗೆ ಅಭಿನಂದಿಸಿ, ಆಶೀರ್ವದಿಸಿದ ಜನರಿಗೂ ಅವರು ಧನ್ಯವಾದಗಳನ್ನೂ ಅರ್ಪಿಸಿದ್ದಾರೆ. “ಅವರಿಬ್ಬರಿಗೆ ಆಶೀರ್ವಾದ ನೀಡಿ ಶುಭ ಹಾರೈಸಿದ ನಿಮಗೆಲ್ಲರಿಗೂ ಧನ್ಯವಾದಗಳು” ಎಂದು ಬರೆದಿದ್ದಾರೆ.


ಪರಿಣಿತಿ ಮತ್ತು ರಾಘವ್‌ ಅವರು ದೆಹಲಿಯ ಕಪುರ್ತಲಾ ಹೌಸ್‌ನಲ್ಲಿ ಶನಿವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವಿಚಾರದಲ್ಲಿ ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. “ನಾನು ಪ್ರಾರ್ಥಿಸಿದ್ದೆಲ್ಲವೂ ಇದೆ” ಎಂದು ಇಬ್ಬರೂ ಬರೆದುಕೊಂಡಿದ್ದಾರೆ. ಈ ಜೋಡಿಯ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಬಾಲಿವುಡ್‌ ಗಣ್ಯರು ಹಾಗೂ ರಾಜಕೀಯ ಗಣ್ಯರು ಭಾಗವಹಿಸಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಶಿವಸೇನಾ ನಾಯಕ ಆದಿತ್ಯ ಠಾಕ್ರೆ, ಹಾಗೆಯೇ ಬಾಲಿವುಡ್‌ನ ಮನೀಷ್ ಮಲ್ಹೋತ್ರಾ, ಮಿಕಾ ಸಿಂಗ್, ಸಹಜ್ ಚೋಪ್ರಾ, ಮತ್ತು ಶಿವಾಂಗ್ ಚೋಪ್ರಾ ಸೇರಿದಂತೆ ದಂಪತಿಯ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಭಾಗವಹಿಸಿದ್ದರು.

Exit mobile version