Site icon Vistara News

Rekha Actress: ಸೆಕ್ರೆಟರಿ ಜತೆಗೆ ರೇಖಾ ಲಿವ್ ಇನ್‌ ರಿಲೇಶನ್‌ಶಿಪ್‌; ಪತಿ ಆತ್ಮಹತ್ಯೆಯ ಆಘಾತಕಾರಿ ನ್ಯೂಸ್‌ ಹೊರಬಿತ್ತು!

Rekha Actress With Her Secretary Farzana

ಬಾಲಿವುಡ್ ಹಿರಿಯ ನಟಿ ರೇಖಾ (Rekha Actress ) ಅವರು ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಲ್ಲಿರುತ್ತಾರೆ. ರೇಖಾ ತಮ್ಮ ಖಾಸಗಿ ಮತ್ತು ವೈಯಕ್ತಿಕ ಜೀವನ ಎರಡರಲ್ಲೂ ಸುದ್ದಿಯಲ್ಲಿದ್ದಾರೆ. ಹಲವರ ಜತೆ ರೇಖಾ ಹೆಸರು ತುಳುಕು ಹಾಕಿಕೊಂಡಿದೆ. ಅಮಿತಾಭ್ ಜತೆ ರೇಖಾ ಹೆಸರೂ ತಳಕು ಹಾಕಿಕೊಂಡಿತ್ತು. ಇಂದಿಗೂ ರೇಖಾ ಹೆಸರು ಬಂದಾಗ ಅಮಿತಾಭ್ ಹೆಸರೂ ಬರುತ್ತದೆ. ಇಬ್ಬರ ಪ್ರೇಮಕಥೆ ಇನ್ನೂ ಚರ್ಚೆಯಲ್ಲಿದೆ. ‘ರೇಖಾ: ದಿ ಅನ್​​ಟೋಲ್ಟ್​ ಸ್ಟೋರಿ’ (Rakha: The Untold Story) ಬಯೋಗ್ರಫಿಯಲ್ಲಿ ರೇಖಾ ಅವರು ತಮ್ಮ ಲೇಡಿ ಸೆಕ್ರೆಟರಿ ಫರ್ಜಾನಾ (Secretary Farzana) ಜತೆ ಲಿವ್ ಇನ್‌ ರಿಲೇಶನ್‌ಶಿಪ್‌ ಇದ್ದರು ಎಂಬ ಸುದ್ದಿ ರಿವೀಲ್‌ ಆಗಿದೆ. ಯಾಸರ್ ಉಸ್ಮಾನ್ ಬರೆದಿರುವ ʻರೇಖಾ: ದಿ ಅನ್‌ಟೋಲ್ಡ್ʼ ಸ್ಟೋರಿಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ.

‘ರೇಖಾ: ದಿ ಅನ್‌ಟೋಲ್ಡ್ ಸ್ಟೋರಿ’ ಎಂಬ ಶೀರ್ಷಿಕೆಯ ಯಾಸೀರ್ ಉಸ್ಮಾನ್ ಬರೆದ ಬಯೋಗ್ರಫಿಯಲ್ಲಿ ರೇಖಾ ಅವರು ಹಲವಾರು ಆಯ್ದ ಭಾಗಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ. ಪುಸ್ತಕದ ಆಯ್ದ ಭಾಗಗಳಲ್ಲಿ ಪ್ರಕಾರ, ರೇಖಾ ತನ್ನ ಲೇಡಿ ಸೆಕ್ರೆಟರಿ ಫರ್ಜಾನಾ ಅವರೊಂದಿಗೆ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದರು ಎಂದು ಉಲ್ಲೇಖಗೊಂಡಿದೆ. ಇದರಲ್ಲಿ “ಫರ್ಜಾನಾ ರೇಖಾಗೆ ಪರಿಪೂರ್ಣ ಸಂಗಾತಿ ಆಗಿದ್ದರು. ಉತ್ತಮ ಸಲಹೆಗಾರ್ತಿ, ಸ್ನೇಹಿತಿಯಾಗಿದ್ದರು. ರೇಖಾ ಅವರಿಗೆ ಅವಳಿಲ್ಲದೆ ಬದುಕಲು ಸಾಧ್ಯವಾಗುತ್ತಿರಲಿಲ್ಲ. ಕೆಲವರು ಇಬ್ಬರೂ ಲವರ್ ಎಂದು ಹೇಳಿದ್ದಿದೆ. ರೇಖಾ ಬೆಡ್​ರೂಂಗೆ ಫರ್ಜಾನಾಗೆ ಮಾತ್ರ ಎಂಟ್ರಿ ಇತ್ತು’ ಎಂದು ಬಯೋಗ್ರಫಿಯಲ್ಲಿ ಬರೆದುಕೊಳ್ಳಲಾಗಿದೆ. ಅಷ್ಟೇ ಅಲ್ಲದೇ ʻʻಫರ್ಜಾನಾ ರೇಖಾ ಅವರಿಗೆ ಉತ್ತಮ ಪಾರ್ಟ್‌ನರ್‌ ಆಗಿದ್ದರು. ರೇಖಾ ಅವರ ಪ್ರತಿಯೊಂದು ಫೋನ್ ಕರೆಯಿಂದ ಹಿಡಿದು ಎಲ್ಲವನ್ನೂ ಫರ್ಜಾನಾ ನಿಭಾಯಿಸುತ್ತಿದ್ದರು.

ಇದನ್ನೂ ಓದಿ: Bollywood : ಬಾಲಿವುಡ್‌ ನಟಿ ರೇಖಾ ತಂದೆ-ತಾಯಿ ವಿವಾಹವನ್ನೇ ಆಗಿರಲಿಲ್ಲ!

Rekha Actress

ರೇಖಾ ಪತಿಯ ಆತ್ಮಹತ್ಯೆಗೆ ಫರ್ಜಾನಾ ಕಾರಣನಾ?

ಜೀವನಚರಿತ್ರೆ ರೇಖಾ ಅವರ ಪತಿಯ ಸಾವಿನ ಬಗ್ಗೆ ಕೆಲವು ಆಘಾತಕಾರಿ ಹೇಳಿಕೆಗಳನ್ನು ಉಲ್ಲೇಖಿಸಿದೆ. ರೇಖಾ ಮದುವೆ ಆಗಿ ಏಳೇ ತಿಂಗಳಿಗೆ ಮುಖೇಶ್‌ ( Mukesh Aggarwal) ಆತ್ಮಹತ್ಯೆ ಮಾಡಿಕೊಂಡರು. ಆ ಸಂದರ್ಭದಲ್ಲಿ ರೇಖಾ ಲಂಡನ್​ನಲ್ಲಿ ಇದ್ದರು. ಮುಕೇಶ್ ಸಾವಿಗೆ ರೇಖಾ ಕಾರಣ ಎಂದು ಎಲ್ಲರೂ ದೂರಿದರು. ಆದರೆ, ಅವರ ಆತ್ಮಹತ್ಯೆ ಪತ್ರದಲ್ಲಿ ಯಾರ ಹೆಸರೂ ಇರಲಿಲ್ಲ. ರೇಖಾ ಅವರು ಫರ್ಜಾನ್ ಅವರನ್ನು ಸಹೋದರಿ ಎಂದು ಭಾವಿಸಿದ್ದರು. ಆದರೆ, ಅವರ ಬಯೋಗ್ರಫಿಯಲ್ಲಿ ಇವರ ಸಂಬಂಧದ ಬಗ್ಗೆ ಬೇರೆ ರೀತಿಯಲ್ಲಿ ಹೇಳಲಾಗಿದೆ. ಅಗರ್ವಾಲ್ ಸಾವಿಗೆ ಫರ್ಜಾನಾ ಕಾರಣ ಎಂದು ಪುಸ್ತಕದಲ್ಲಿ ಹೇಳಲಾಗಿದೆ.

Exit mobile version