Site icon Vistara News

Rekha Actress: ಮಹಿಳೆಯನ್ನು ಮದುವೆ ಯಾಕಾಗಬಾರದು ಎಂದ ನಟಿ ರೇಖಾ!

Rekha Actress

ಬೆಂಗಳೂರು: ಬಾಲಿವುಡ್ ಹಿರಿಯ ನಟಿ ರೇಖಾ (Rekha Actress ) ಅವರು ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಲ್ಲಿರುತ್ತಾರೆ. ‘ರೇಖಾ: ದಿ ಅನ್​​ಟೋಲ್ಟ್​ ಸ್ಟೋರಿ’ (Rakha: The Untold Story) ಬಯೋಗ್ರಫಿಯಲ್ಲಿ ರೇಖಾ ಅವರು ತಮ್ಮ ಲೇಡಿ ಸೆಕ್ರೆಟರಿ ಫರ್ಜಾನಾ (Secretary Farzana) ಜತೆ ಲಿವ್ ಇನ್‌ ರಿಲೇಶನ್‌ಶಿಪ್‌ ಇದ್ದರು ಎಂಬ ಸುದ್ದಿ ರಿವೀಲ್‌ ಆಗಿತ್ತು. ಆದರೆ, ಈ ವರದಿ ಸುಳ್ಳು ಎಂಬುದು ಬಳಿಕ ತಿಳಿದು ಬಂದಿತ್ತು. ನಟಿ ರೇಖಾ ಅವರು ‘ನಾನು ಮಹಿಳೆಯನ್ನು ಏಕೆ ಮದುವೆ ಆಗಬಾರದು’ ಎಂದು ಸಂದರ್ಶನ ಒಂದರಲ್ಲಿ ನೇರವಾಗಿ ಕೇಳಿದ್ದರು. ಈ ವಿಡಿಯೊ ಈಗ ವೈರಲ್ ಆಗುತ್ತಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತಿವೆ.

ರೇಖಾ ಅವರ ವೈಯಕ್ತಿಕ ಜೀವನ ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಹಾಟ್‌ ಟಾಪಿಕ್‌ ಇದ್ದಂತೆ. ರೇಖಾ ಮದುವೆ ಆಗಿ ಏಳೇ ತಿಂಗಳಿಗೆ ಮುಕೇಶ್‌ ಅಗರ್ವಾಲ್ ( Mukesh Aggarwal) ಆತ್ಮಹತ್ಯೆ ಮಾಡಿಕೊಂಡರು. ಆ ಸಂದರ್ಭದಲ್ಲಿ ರೇಖಾ ಲಂಡನ್​ನಲ್ಲಿ ಇದ್ದರು. ಮುಕೇಶ್ ಸಾವಿಗೆ ರೇಖಾ ಕಾರಣ ಎಂದು ಎಲ್ಲರೂ ದೂರಿದರು. ಒಂದು ಹಂತದಲ್ಲಿ ಅಮಿತಾಭ್ ಬಚ್ಚನ್ ಅವರೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ ರೇಖಾ ಅವರು ಮಾರ್ಚ್ 1990ರಲ್ಲಿ ಮುಕೇಶ್ ಅಗರ್ವಾಲ್ ಅವರೊಂದಿಗೆ ವಿವಾಹವಾದರು. ಪತಿ ನಿಧನದ ಬಳಿಕ ಮತ್ತೆ ರೇಖಾ ಅವರು ಮದುವೆಯಾಗಲೇ ಇಲ್ಲ.

ಎರಡನೇ ಮದುವೆ ಬಗ್ಗೆ ಸಂದರ್ಶನ ಒಂದರಲ್ಲಿ ರೇಖಾ ಮಾತನಾಡಿದ್ದರು. ಅದು 2004ರಲ್ಲಿ. ಸಿಮಿ ಗರೇವಾಲ್ ಅವರ ಶೋನಲ್ಲಿ ಭಾಗಿ ಆಗಿದ್ದರು. ಮದುವೆ ಬಗ್ಗೆ ಅವರಿಗೆ ಪ್ರಶ್ನೆ ಮಾಡಲಾಗಿತ್ತು. ‘ಪುರುಷನ ಜತೆ ಮತ್ತೆ ಮದುವೆಯೇ’ ಎಂದು ರೇಖಾ ಮರು ಪ್ರಶ್ನೆ ಮಾಡಿದ್ದರು. ‘ಮಹಿಳೆಯ ಜತೆಯಂತೂ ಮದುವೆಯಾಗಲು ಸಾಧ್ಯವಿಲ್ಲವಲ್ಲ’ ಎಂದು ಸಿಮಿ ಉತ್ತರಿಸಿದ್ದರು. ಇದಕ್ಕೆ ರೇಖಾ ‘ಯಾಕಾಗಬಾರದು’ ಎಂದು ಕೇಳಿದ್ದರು. ರೇಖಾ ಮಾತು ಮುಂದುವರಿಸಿ ʻʻನನ್ನ ಮನಸ್ಸಿನಲ್ಲಿ, ನಾನು ನನ್ನನ್ನು, ನನ್ನ ವೃತ್ತಿಯನ್ನು ಮತ್ತು ನನ್ನ ಪ್ರೀತಿಪಾತ್ರರನ್ನು ಮದುವೆಯಾಗಿದ್ದೇನೆ. ನಾನು ಸಿನಿಕತನದ ವ್ಯಕ್ತಿಯಲ್ಲʼʼಎಂದು ಹೇಳಿದ್ದರು. ಅದೇ ಸಂಚಿಕೆಯಲ್ಲಿ, ರೇಖಾ ಅವರು ವಿನೋದ್ ಮೆಹ್ರಾ ಅವರೊಂದಿಗಿನ ಮದುವೆಯ ವದಂತಿಗಳನ್ನು ಸಹ ತಿಳಿಸಿದ್ದರು.

ಇದನ್ನೂ ಓದಿ: Rekha Actress: ಸೆಕ್ರೆಟರಿ ಜತೆಗೆ ರೇಖಾ ಲಿವ್ ಇನ್‌ ರಿಲೇಶನ್‌ಶಿಪ್‌; ಪತಿ ಆತ್ಮಹತ್ಯೆಯ ಆಘಾತಕಾರಿ ನ್ಯೂಸ್‌ ಹೊರಬಿತ್ತು!

ರೇಖಾ ಪತಿಯ ಆತ್ಮಹತ್ಯೆಗೆ ಫರ್ಜಾನಾ ಕಾರಣವೇ?

ಜೀವನಚರಿತ್ರೆ ರೇಖಾ ಅವರ ಪತಿಯ ಸಾವಿನ ಬಗ್ಗೆ ಕೆಲವು ಆಘಾತಕಾರಿ ಹೇಳಿಕೆಗಳನ್ನು ಉಲ್ಲೇಖಿಸಿದೆ. ರೇಖಾ ಮದುವೆ ಆಗಿ ಏಳೇ ತಿಂಗಳಿಗೆ ಮುಕೇಶ್ ( Mukesh Aggarwal) ಆತ್ಮಹತ್ಯೆ ಮಾಡಿಕೊಂಡರು. ಆ ಸಂದರ್ಭದಲ್ಲಿ ರೇಖಾ ಲಂಡನ್​ನಲ್ಲಿ ಇದ್ದರು. ಮುಕೇಶ್ ಸಾವಿಗೆ ರೇಖಾ ಕಾರಣ ಎಂದು ಎಲ್ಲರೂ ದೂರಿದರು. ಆದರೆ, ಅವರ ಆತ್ಮಹತ್ಯೆ ಪತ್ರದಲ್ಲಿ ಯಾರ ಹೆಸರೂ ಇರಲಿಲ್ಲ. ರೇಖಾ ಅವರು ಫರ್ಜಾನ್ ಅವರನ್ನು ಸಹೋದರಿ ಎಂದು ಭಾವಿಸಿದ್ದರು. ಆದರೆ, ಅವರ ಬಯೋಗ್ರಫಿಯಲ್ಲಿ ಇವರ ಸಂಬಂಧದ ಬಗ್ಗೆ ಬೇರೆ ರೀತಿಯಲ್ಲಿ ಹೇಳಲಾಗಿದೆ. ಅಗರ್ವಾಲ್ ಸಾವಿಗೆ ಫರ್ಜಾನಾ ಕಾರಣ ಎಂದು ಪುಸ್ತಕದಲ್ಲಿ ಹೇಳಲಾಗಿದೆ.

Exit mobile version