Site icon Vistara News

Rekha Vedavyas: ನನ್ನನ್ನು ಚೆನ್ನಾಗಿ ನಗಿಸಿ, ಬೇಗ ಚೇತರಿಸಿಕೊಳ್ತೀನಿ ಎಂದ ನಟಿ ರೇಖಾ

rekha vedavyas

ಬೆಂಗಳೂರು: `ಹುಚ್ಚ’ ‘ಚಿತ್ರ’, ‘ತುಂಟಾಟ’, ‘ಮೋನಲಿಸಾ’, ‘ಚೆಲ್ಲಾಟ’ ಹೀಗೆ ಹಲವು ಸಿನಿಮಾಗಳಲ್ಲಿ ರೇಖಾ ವೇದವ್ಯಾಸ್‌ (Rekha Vedavyas) ನಟಿಸಿ ಸ್ಯಾಂಡಲ್‌ವುಡ್‌ನಲ್ಲಿ ಸೈ ಎನಿಸಿಕೊಂಡವರು. ಹಲವು ವರ್ಷಗಳಾದ ಮೇಲೆ ನಟಿ ರಿಯಾಲಿಟಿ ಶೋ ಒಂದರಲ್ಲಿ ಕಾಣಿಸಿಕೊಂಡಿದ್ದರು. ನಟಿಯ ಈಗಿನ ಸ್ಥಿತಿ ಕಂಡು ಅವರ ಫ್ಯಾನ್ಸ್‌ ಬಹಳ ಆತಂಕ ವ್ಯಕ್ತಪಡಿಸಿದ್ದರು. ಬಹಳ ಸಣ್ಣಗಾಗಿರುವ ರೇಖಾ ಗುರುತು ಸಿಗದ್ದಷ್ಟು ಬದಲಾಗಿದ್ದಾರೆ. ಅಷ್ಟೇ ಅಲ್ಲದೇ ವೇದಿಕೆಯಲ್ಲಿ ಆರೋಗ್ಯದ ಕುರಿತು ನಟಿ ರಿವೀಲ್‌ ಮಾಡಿದ್ದಾರೆ.

ಕಳೆದ 9 ವರ್ಷಗಳಿಂದ ರೇಖಾ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ನಟಿ ಇದ್ದಕ್ಕಿಂದ್ದಂತೆ ತೆಲುಗು ಕಿರುತೆರೆ ‘ಶ್ರೀದೇವಿ ಡ್ರಾಮಾ ಕಂಪನಿ’ ಶೋಗೆ ಅತಿಥಿಯಾಗಿ ಬಂದಿದ್ದರು. ನಟಿಯನ್ನು ನೋಡಿದ ಕೆಲವರು ಅಚ್ಚರಿಗೊಂಡಿದ್ದರು. ಬಹಳ ಸಣ್ಣಗಾಗಿರುವ ರೇಖಾ ಗುರುತು ಸಿಗದ್ದಷ್ಟು ಬದಲಾಗಿದ್ದರು ಅಷ್ಟೇ ಅಲ್ಲದೇ ವೇದಿಕೆಯಲ್ಲಿ ಆರೋಗ್ಯದ ಕುರಿತು ಮಾತನಾಡಿ ʻʻನಾನು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಇದೆಲ್ಲ ಸಡನ್‌ ಆಗಿ ಆಯಿತು. ಸಾಕಷ್ಟು ಜನ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅದು ಸಣ್ಣ ತಲೆನೋವು ಇರಬಹುದು, ಅಥವಾ ದೊಡ್ಡ ಸಮಸ್ಯೆಯೇ ಆಗಿರಬಹುದು. ಯಾವುದಕ್ಕೂ ಹೆಚ್ಚು ಒತ್ತಡ ತೆಗೆದುಕೊಳ್ಳಬಾರದು. ಒತ್ತಡದಿಂದ ಆರೋಗ್ಯ ಇನ್ನಷ್ಟು ಹದೆಗೆಡುತ್ತದೆ. ಎಲ್ಲಕ್ಕಿಂತ ದೇವರಲ್ಲಿ ಹೆಚ್ಚಿನ ನಂಬಿಕೆ ಇಡಬೇಕು. ಯಾವುದೇ ದೇವರು ಆಗಿರಲಿ. ನಿಮ್ಮ ಮೆಡಿಸಿನ್ ಕೆಲಸ ಮಾಡಿದ್ದಿದ್ದರೂ ನಿಮ್ಮ ನಂಬಿಕೆ ಕೆಲಸ ಮಾಡುತ್ತದೆ. ನನ್ನನ್ನು ಚೆನ್ನಾಗಿ ನಗಿಸಿ, ನಾನು ಬೇಗ ಚೇತರಿಸಿಕೊಳ್ತೀನಿ” ಎಂದು ರೇಖಾ ಹೇಳಿದ್ದಾರೆ.

ಇದನ್ನೂ ಓದಿ: Rekha Vedavyas: ಗುರುತೇ ಸಿಗದಷ್ಟು ಬದಲಾದ ʻಹುಚ್ಚʼ ಸಿನಿಮಾ ನಾಯಕಿ ರೇಖಾ; ನಟಿಗೆ ಏನಾಯ್ತು?

ರೇಖಾ ಅವರ ಮಾತುಗಳನ್ನು ಕೇಳಿ ಅವರ ಫ್ಯಾನ್ಸ್‌ ʻʻಬೇಗ ಚೇತರಿಸಿಕೊಳ್ಳಿʼʼ ಎಂದು ಪ್ರಾರ್ಥಿಸುತ್ತಿದ್ದಾರೆ. ಗಣೇಶ್ ಜೋಡಿಯಾಗಿ ‘ಹುಡುಗಾಟ’ ಚಿತ್ರದಲ್ಲಿ ಮಿಂಚಿದರು. ಆ ಬಳಿಕ ಮತ್ತೆ ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ಈ ಬೆಂಗಳೂರು ಬೆಡಗಿ ನಟಿಸಿದರು. ಮಾಡೆಲಿಂಗ್ ಕ್ಷೇತ್ರದಿಂದ ಚಿತ್ರರಂಗಕ್ಕೆ ಬಂದ ರೇಖಾ ವೇದವ್ಯಾಸ್ ಮತ್ತೆ ಹಿಂತಿರುಗಿ ನೋಡಲಿಲ್ಲ. ಹುಚ್ಚ ಸಿನಿಮಾದಲ್ಲಿ ಸುದೀಪ್‌ಗೆ ನಾಯಕಿಯಾಗಿ ನಟಿಸಿರುವ ರೇಖಾ, ಇಂದಿಗೂ ಫೇಮಸ್ಸು. 2014ರಲ್ಲಿ ಕೊನೆಯದಾಗಿ ‘ತುಳಸಿ’ ಕನ್ನಡ ಚಿತ್ರದಲ್ಲಿ ರೇಖಾ ಕಾಣಿಸಿಕೊಂಡಿದ್ದರು. ಕೆಲ ವರ್ಷಗಳ ಹಿಂದೆ ತೂಕ ಹೆಚ್ಚಿಸಿಕೊಂಡು ದಪ್ಪ ಆಗಿದ್ದ ರೇಖಾ ಮತ್ತೆ ತೂಕ ಇಳಿಸಿ ಸಿನಿಮಾಗಳಲ್ಲಿ ನಟಿಸಿದ್ದರು.

ಮೂರು ವರ್ಷಗಳ ಹಿಂದೆಯಷ್ಟೆ ತೆಲುಗು ಸಂದರ್ಶನವೊಂದರಲ್ಲಿ ಭಾಗಿ ಆಗಿ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುವ ಬಗ್ಗೆ ವ್ಯಕ್ತಪಡಿಸಿದ್ದರು. ‘ಪರಿಚಯ’, ‘ಬಾಸ್’, ‘ಬೆಂಕಿ ಬಿರುಗಾಳಿ’, ‘ಲೂಸ್‌ಗಳು’, ‘ಪರಮಶಿವ’ ಸೇರಿದಂತೆ ರೇಖಾ ನಟಿಸಿದ್ದರು.

Exit mobile version