Site icon Vistara News

Renu Desai | ಪವನ್ ಕಲ್ಯಾಣ್ ಮಾಜಿ ಪತ್ನಿ ಸಿನಿರಂಗಕ್ಕೆ ಕಮ್‌ಬ್ಯಾಕ್‌!

Renu Desai

ಬೆಂಗಳೂರು: ಟಾಲಿವುಡ್‌ ನಟ ರವಿತೇಜ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಟೈಗರ್ ನಾಗೇಶ್ವರ ರಾವ್’ ಸಿನಿಮಾದಲ್ಲಿ ನಟ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ‌ (Renu Desai) ಅಭಿನಯಿಸಲಿದ್ದಾರೆ. ವಂಶಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ರೇಣು ದೇಸಾಯಿ ಪಾತ್ರದ ಇಂಟ್ರಡಕ್ಷನ್ ಟೀಸರ್ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ.

ಭಾರತೀಯ ಸಾಮಾಜಿಕ ಕಾರ್ಯಕರ್ತೆ, ಲೇಖಕಿಯೂ ಆಗಿರುವ, ಅಸ್ಪೃಶತೆ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ʻಹೇಮಲತಾ ಲವಣಂʼ ಪಾತ್ರದಲ್ಲಿ ರೇಣು ದೇಸಾಯಿ ಅಭಿನಯಿಸುತ್ತಿದ್ದಾರೆ. ಶುಭ್ರ ಬಿಳಿ ಬಣ್ಣದ ಸೀರೆಯುಟ್ಟು ಪವರ್ ಫುಲ್ ಎಂಟ್ರಿ ಕೊಟ್ಟಿರುವ ರೇಣು ದೇಸಾಯಿ ಟೀಸರ್ ಝಲಕ್‌ಗೆ ಸಿನಿರಸಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ | Mahesh Babu | ಟಾಲಿವುಡ್‌ ಸೂಪರ್‌ ಸ್ಟಾರ್‌ ಮಹೇಶ್‌ ಬಾಬುಗೆ ಮಾತೃ ವಿಯೋಗ

ʻದಿ ಕಾಶ್ಮೀರಿ ಫೈಲ್ಸ್ʼ ಚಿತ್ರವನ್ನು ನಿರ್ಮಾಣ ಮಾಡಿ ದೊಡ್ಡ ಮಟ್ಟದ ಖ್ಯಾತಿ ಗಳಿಸಿರುವ ಅಭಿಷೇಕ್ ಅಗರ್‌ವಾಲ್‌ ‘ಅಭಿಷೇಕ್ ಅಗರ್‌ವಾಲ್‌ ಆರ್ಟ್ಸ್’ ಬ್ಯಾನರ್ ಮೂಲಕ ‘ಟೈಗರ್ ನಾಗೇಶ್ವರ ರಾವ್’ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, ಈ ಚಿತ್ರದ ಮೂಲಕ ರವಿತೇಜ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮುತ್ತಿದ್ದಾರೆ.

ಕಳ್ಳನ ಕಥಾವಸ್ತುವನ್ನು ಒಳಗೊಂಡಿರುವ ಈ ಚಿತ್ರದಲ್ಲಿ ರವಿತೇಜ ಸಂಪೂರ್ಣ ಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಆ್ಯಕ್ಷನ್‌ ಥ್ರಿಲ್ಲರ್‌ ಸಿನಿಮಾವಾಗಿದೆ. ರವಿತೇಜಗೆ ಜೋಡಿಯಾಗಿ ನೂಪುರ್ ಸನೋನ್, ಗಾಯತ್ರಿ ಭಾರಧ್ವಾಜ್‌ ನಟಿಸುತಿದ್ದಾರೆ. ರೆಟ್ರೋ ಶೈಲಿಯಲ್ಲಿ ಸಿನಿಮಾ ಮೂಡಿಬರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಪವನ್ ಕಲ್ಯಾಣ್ ರೇಣು ದೇಸಾಯಿ ಜತೆ 2009ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿ 2012ರಲ್ಲಿ ಬೇರೆಯಾದರು. ಇವರಿಬ್ಬರಿಗೆ ಅಕಿರಾ ನಂದನ್ ಮತ್ತು ಆಧ್ಯಾ ಎಂಬ ಇಬ್ಬರು ಮಕ್ಕಳಿದ್ದಾರೆ.

ಇದನ್ನೂ ಓದಿ | Tollywood | ಆಗಸ್ಟ್‌ 1ರಿಂದ ತೆಲುಗು ಚಿತ್ರೀಕರಣ ಸ್ಥಗಿತ: ಏನು ಟಾಲಿವುಡ್‌ನ ಸಮಸ್ಯೆ?

Exit mobile version