Site icon Vistara News

Rhea Chakraborty: ಜೆರೋಧಾ ಕಂಪನಿ ಓನರ್ ಜತೆ ಸುಶಾಂತ್‌ ಸಿಂಗ್‌ ಗರ್ಲ್‌ಫ್ರೆಂಡ್‌ ಡೇಟಿಂಗ್‌? ವಿಶ್ವ ಸುಂದರಿ ಚಿಲ್ಲರ್‌ ಕಥೆ ಏನು?

Rhea Chakraborty

ವಿಶ್ವ ಸುಂದರಿ, ನಟಿ ಮಾನುಷಿ ಚಿಲ್ಲರ್‌ (Manushi Chhillar) ಬೆಂಗಳೂರು ಮೂಲದ ಉದ್ಯಮಿ, ಜೆರೋಧಾ ಕಂಪನಿ ಸಂಸ್ಥಾಪಕ ನಿಖಿಲ್‌ ಕಾಮತ್‌ ಜತೆ ಡೇಟಿಂಗ್‌ ಮಾಡುತ್ತಿದ್ದಾರೆ, ಅಷ್ಟೇ ಅಲ್ಲದೇ ಮದುವೆಯಾಗಲಿದ್ದಾರೆ ಎಂದು ವರದಿಯಾಗಿತ್ತು. ಆದರೀಗ ಈ ಜೋಡಿ ಮಧ್ಯೆ ಬಿರುಕು ಮೂಡಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ನಿಖಿಲ್‌ ಕಾಮತ್‌ (Nikhil Kamath) ಹಾಗೂ (sushant singh rajput)ಸುಶಾಂತ್ ಸಿಂಗ್ ಗರ್ಲ್‌ಫ್ರೆಂಡ್ ರಿಯಾ ಚಕ್ರವರ್ತಿ (Rhea Chakraborty) ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ನಿಖಿಲ್ ಮತ್ತು ಮಾನುಷಿ ಇಬ್ಬರೂ ತಮ್ಮ ಇನ್‌ಸ್ಟಾದಲ್ಲಿ ಒಬ್ಬರಿಗೊಬ್ಬರು ಅನ್‌ಫಾಲೋ ಮಾಡಿದ್ದಾರೆ. ಅಷ್ಟೇ ಅಲ್ಲದೇ ರಿಯಾ ಮತ್ತು ನಿಖಿಲ್ ಒಬ್ಬರನ್ನೊಬ್ಬರು ಫಾಲೋ ಮಾಡಲು ಶುರು ಮಾಡಿದ್ದಾರೆ. ಮಾನುಷಿ ಮತ್ತು ನಿಖಿಲ್ 2021ರಲ್ಲಿ ಡೇಟಿಂಗ್ ಮಾಡಲು ಪ್ರಾರಂಭಿಸಿದರು ಎಂದು ವರದಿಯಾಗಿತ್ತು.

ಸುಶಾಂತ್ ಸಿಂಗ್ ರಜಪೂತ್ ನಿಧನದ ಬಳಿಕ ಶಾಕ್‌ನಲ್ಲಿದ್ದ ರಿಯಾ ಇದೀಗ ಮೆಲ್ಲನೆ ಸಹಜ ಬದುಕಿನತ್ತ ಸಾಗಿದ್ದಾರೆ ಎನ್ನಲಾಗುತ್ತಿದೆ. 31 ವರ್ಷದ ರಿಯಾ ಚಕ್ರವರ್ತಿ ಹಾಗೂ 36 ವರ್ಷದ ನಿಖಿಲ್ ಕಾಮತ್ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎಂಬ ಮಾಹಿತಿಯನ್ನು ರೆಡ್ಡಿಟ್ ಸೇರಿದಂತೆ ಇತರ ಕೆಲ ಮಾಧ್ಯಮಗಳು ವರದಿ ಮಾಡಿದೆ.

ಇದನ್ನೂ ಓದಿ: Manushi Chhillar | ಬೆಂಗಳೂರು ಮೂಲದ ಉದ್ಯಮಿ ಜತೆ ವಿಶ್ವ ಸುಂದರಿ ಮಾನುಷಿ ಚಿಲ್ಲರ್‌ ಡೇಟಿಂಗ್‌?

ರಿಯಾ ಚಕ್ರವರ್ತಿ ಹಾಗೂ ನಿಖಿಲ್ ಕಾಮತ್ ಡೇಟಿಂಗ್ ನಡೆಸುತ್ತಿರುವ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಉಹಾಪೋಹಗಳು ಹರಿದಾಡುತ್ತಿದೆ. ರಿಯಾ ಚಕ್ರವರ್ತಿ ಈ ಹಿಂದೆ ಕಾರ್ನರ್‌ಸ್ಟೋನ್ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಕಂಪನಿ ಮಾಲಕಿ ಸೀಮಾ ಸಜ್ದೆ ಸಹೋದರ ಬಂಟಿ ಸಜ್ದೆ ಜತೆಗೆ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ ಯಾವುದೇ ಅಧೀಕೃತ ಮಾಹಿತಿ ಹೊರಬಿದ್ದಿಲ್ಲ. ಸುಶಾಂತ್ ಸಾವಿನ ಬಳಿಕ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದ ರಿಯಾ ಚಕ್ರವರ್ತಿಗೆ ಇತ್ತೀಚೆಗೆ ನ್ಯಾಯಾಲಯ ಜಾಮೀನು ನೀಡಿತ್ತು. ರಿಯಾ ಚಕ್ರವರ್ತಿ, ಗೆಳೆಯ ಸುಶಾಂತ್ ಸಿಂಗ್‌ ಡ್ರಗ್ಸ್ ನೀಡುತ್ತಿದ್ದರು ಎನ್ನುವ ಗಂಭೀರ ಆರೋಪ ರಿಯಾ ಮೇಲಿದೆ.

ನಿಖಿಲ್‌ ಕಾಮತ್‌ ಅವರು ಬೆಂಗಳೂರು ಮೂಲದವಾರಿದ್ದು ಈಗಾಗಲೇ ಅವರಿಗೆ ಮದುವೆ ಆಗಿತ್ತು ಎನ್ನಲಾಗಿದೆ. 2019ರ ವೇಳೆ ಇಟಲಿಯಲ್ಲಿ ಅಮಂಡಾ ಪುರವಂಕರ ಜತೆ ವಿವಾಹವಾಗಿದ್ದರು. ಕಾರಣಾಂತರದಿಂದ ಡಿವೋರ್ಸ್‌ ಪಡೆದಿದ್ದಾರೆ ಎನ್ನಲಾಗಿದೆ.

Exit mobile version