Site icon Vistara News

Richard Gere: ಶಿಲ್ಪಾ ಶೆಟ್ಟಿಗೆ ವೇದಿಕೆಯಲ್ಲೇ ಕಿಸ್ ಮಾಡಿ ವಿವಾದಕ್ಕೆ ಕಾರಣವಾಗಿದ್ದ ನಟ ರಿಚರ್ಡ್ ಗೇರ್ ಆಸ್ಪತ್ರೆಗೆ ದಾಖಲು

Richard Gere hospitalized overnight with pneumonia

ಬೆಂಗಳೂರು: ಅಮೆರಿಕದ ಪ್ರಖ್ಯಾತ ನಟ, 73 ವರ್ಷದ ರಿಚರ್ಡ್ ಕೇರ್ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲವು ವರ್ಷಗಳ ಹಿಂದೆ ಭಾರತದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ವೇದಿಕೆಯಲ್ಲೇ ನಟಿ ಶಿಲ್ಪಾ ಶೆಟ್ಟಿ ಅವರಿಗೆ ಕಿಸ್ ಮಾಡಿ, ವಿವಾದಕ್ಕೆ ಕಾರಣವಾಗಿದ್ದರು ಈ ನಟ. ತಮ್ಮ ಪತ್ನಿ ಅಲೆಜಾಂಡ್ರಾ ಸಿಲ್ವಾ ಅವರ 40ನೇ ಹುಟ್ಟುಹಬ್ಬವನ್ನು ನ್ಯೂವೋ ವಲ್ಲರ್ಟಾ ಬಳಿ ಆಚರಿಸಲು ಕುಟುಂಬದೊಂದಿಗೆ ವಕೇಶನ್‌ಗೆಂದು ಹೋಗಿದ್ದಾಗ, ಅನಾರೋಗ್ಯಕ್ಕೆ ತುತ್ತಾಗಿ ಗೇರ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.

ವರದಿ ಪ್ರಕಾರ ನಟನ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದಾರೆ ಎನ್ನಲಾಗಿದೆ. ವಕೇಶನ್‌ಗೆ ಹೋಗುವ ಮೊದಲೇ ನಟ ಕೆಮ್ಮಿನಿಂದ ಬಳಲುತ್ತಿದ್ದು, ಮೆಕ್ಸಿಕೋದಲ್ಲಿದ್ದಾಗ ಅದು ಉಲ್ಬಣಗೊಂಡಿತು. ಚಿಕಿತ್ಸೆಯ ಬಳಿಕ ಅವರಿಗೆ ನ್ಯುಮೋನಿಯಾ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

ಪತ್ನಿ ಅಲೆಜಾಂಡ್ರಾ ಸಿಲ್ವಾ ಇನ್‌ಸ್ಟಾ ಪೋಸ್ಟ್‌ ಹಂಚಿಕೊಂಡು ʻʻಹುಟ್ಟುಹಬ್ಬದ ಶುಭಾಶಯಗಳಿಗಾಗಿ ಎಲ್ಲರಿಗೂ ಧನ್ಯವಾದಗಳು.ನಮ್ಮ ಕುಟುಂಬದಲ್ಲಿ ಎಲ್ಲರೂ ಅನಾರೋಗ್ಯದಿಂದ ಬಳಲುತ್ತಿದ್ದರು. 3 ವಾರಗಳ ನಂತರ ಇಂದು ನಾನು ಹೆಚ್ಚು ಚೇತರಿಸಿಕೊಂಡಿದ್ದೇನೆ! ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳುʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Dhrishyam Movie : ಹಾಲಿವುಡ್‌ಗೂ ಹಾರಿದ ದೃಶ್ಯಂ ಸಿನಿಮಾ! ಚೀನಾ, ಕೋರಿಯಾ ಭಾಷೆಗಳಿಗೂ ಸಿನಿಮಾ ರಿಮೇಕ್‌

ಅಲೆಜಾಂಡ್ರಾ ಸಿಲ್ವಾ ಇನ್‌ಸ್ಟಾ ಪೋಸ್ಟ್‌

ಹಾಲಿವುಡ್ ನಟ ರಿಚರ್ಡ್ ಗೇರ್ ಅವರು ಸಾರ್ವಜನಿಕವಾಗಿ ಶಿಲ್ಪಾ ಶೆಟ್ಟಿ ಅವರನ್ನು ಚುಂಬಿಸಿದ್ದ ಘಟನೆ ವಿವಾದ ಸೃಷ್ಟಿಸಿತ್ತು. ಅಮೆರಿಕನ್ ನಟ ಭಾರತಕ್ಕೆ ಬಂದಿದ್ದಾಗ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಈ ಘಟನೆ ನಡೆದಿತ್ತು. 

Exit mobile version