Site icon Vistara News

South Indian Actor: ಸೌತ್‌ ಇಂಡಸ್ಟ್ರಿಯ ಈ ಶ್ರೀಮಂತ ನಟ 3 ಸಾವಿರ ಕೋಟಿ ಒಡೆಯ! ರಜನಿ, ಕಮಲ್‌ ಅಲ್ವೇ ಅಲ್ಲ!

rajanikanth

ದಕ್ಷಿಣ ಭಾರತದ ನಟರು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಗಳಿಸುತ್ತಿದ್ದಾರೆ. ವೃತ್ತಿಜೀವನದಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸುತ್ತಿದ್ದಾರೆ. ದಕ್ಷಿಣದ ಅನೇಕ ನಟರು ವ್ಯಾಪಾರ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. , ಚಿರಂಜೀವಿ ಮತ್ತು ಮೋಹನ್ ಲಾಲ್ ಸೇರಿದಂತೆ ಅನೇಕ ಯಶಸ್ವಿ ತಾರೆಯರನ್ನು ಜನರು ಆರಾಧಿಸುತ್ತಾರೆ. ಈ ಜನಪ್ರಿಯತೆಯು ಅವರಿಗೆ ಚಲನಚಿತ್ರಗಳು ಮತ್ತು ಇತರ ವ್ಯವಹಾರಗಳಿಂದ ದೊಡ್ಡ ಹಣವನ್ನು ಗಳಿಸುವಂತೆ ಮಾಡುತ್ತದೆ. ಆದರೆ ಸೌತ್ ಇಂಡಸ್ಟ್ರಿಯ ಮೆಗಾ ಸಕ್ಸಸ್ ಫುಲ್ ಸ್ಟಾರ್‌ಗಳಲ್ಲಿ ಯಾವ ನಟ ಅತ್ಯಂತ ಶ್ರೀಮಂತ ಅಂದರೆ ನಾಗಾರ್ಜುನ ಅಕ್ಕಿನೇನಿ ಎಂದರೆ ನೀವು ನಂಬಲೇಬೇಕು. ನಾಗಾರ್ಜುನ ಅಕ್ಕಿನೇನಿ ಸೌತ್‌ ಇಂಡಸ್ಟ್ರಿಯ (South Indian Actor) ಅತ್ಯಂತ ಶ್ರೀಮಂತ ನಟ ಮತ್ತು 3 ಸಾವಿರ ಕೋಟಿಗೂ ಹೆಚ್ಚು ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ.

ನಾಗಾರ್ಜುನ ಕಳೆದ ಮೂರು ದಶಕಗಳಲ್ಲಿ ದಕ್ಷಿಣ ಚಿತ್ರರಂಗದ ಅತ್ಯಂತ ಪ್ರಸಿದ್ಧ ನಟರಲ್ಲಿ ಒಬ್ಬರು. ವರದಿಗಳ ಪ್ರಕಾರ, ಅವರ ನಿವ್ವಳ ಆಸ್ತಿ ಮೌಲ್ಯ ಸರಿಸುಮಾರು 3,000 ಕೋಟಿ ರೂ.ಗಿಂತ ಹೆಚ್ಚಿನದ್ದಾಗಿದೆ. ಮಾಸಿಕ ಆದಾಯ ಸುಮಾರು 40 ಕೋಟಿ ರೂ. 95 ಕೋಟಿ ರೂ. ಮೌಲ್ಯದ ಬಿಎಂಡಬ್ಲ್ಯು, ಆಡಿ ಎ7 ಮತ್ತು ಪೋರ್ಷೆ ಸೇರಿದಂತೆ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಹೈದರಾಬಾದ್‌ನಲ್ಲಿರುವ ಅವರ ನಿವಾಸವು 45 ಕೋಟಿ ರೂ. ಮೌಲ್ಯದ್ದಾಗಿದೆ.

ವರದಿಗಳ ಪ್ರಕಾರ, ನಟ ಹಲವಾರು ವ್ಯವಹಾರಗಳಲ್ಲಿ ಹೂಡಿಕೆ ಮಾಡಿದ್ದಾರೆ. ಒಂದು ಸಮಯದಲ್ಲಿ ನಾಗಾರ್ಜುನ ಅವರು ‘ಮಾ ಟಿವಿ’ಯ ಮಾಲೀಕರಾಗಿದ್ದರು, ನಂತರ ಅವರು ಅದನ್ನು ‘ಸ್ಟಾರ್ ಮಾ’ಗೆ ಮಾರಾಟ ಮಾಡಿದರು. ಅವರ ತಂದೆ ನಾಗೇಶ್ವರ ರಾವ್ ಅವರು ಆರಂಭಿಸಿದ ಅನ್ನಪೂರ್ಣ ಸ್ಟುಡಿಯೊದಲ್ಲಿ ನಾಗಾರ್ಜುನ ಕೂಡ ಪಾಲುದಾರರಾಗಿದ್ದಾರೆ. ಇದರೊಂದಿಗೆ, ನಟ ಹೈದರಾಬಾದ್‌ನಲ್ಲಿ ಕನ್ವೆನ್ಷನ್ ಸೆಂಟರ್‌ನ ಮಾಲೀಕರಾಗಿದ್ದಾರೆ ಮತ್ತು ಮಾಧ್ಯಮ ಶಾಲೆಯನ್ನು ಸಹ ನಡೆಸುತ್ತಿದ್ದಾರೆ.

ಇದನ್ನೂ ಓದಿ: Actor MohanLal: ಮೋಹನ್ ಲಾಲ್ ಸಿನಿಮಾಗೆ ಕನ್ನಡದ ನಂದಕಿಶೋರ್ ಆ್ಯಕ್ಷನ್‌ ಕಟ್;‌ ಏಕ್ತಾ ಕಪೂರ್‌ ಸಹ ನಿರ್ಮಾಣ!

ಪ್ರತಿ ಜಾಹಿರಾತುವಿಗೆ 2-5 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಕೆಲವು ವರದಿಗಳ ಪ್ರಕಾರ, 2023ರಲ್ಲಿ ಅವರ ಸರಾಸರಿ ಗಳಿಕೆಯು ಸರಿಸುಮಾರು 46 ಕೋಟಿ ಎಂದು ನಿರೀಕ್ಷಿಸಲಾಗಿದೆ. ಆದರೆ 2022 ರಲ್ಲಿ ಅದು ಸುಮಾರು 42 ಕೋಟಿ ರೂಪಾಯಿಗಳಷ್ಟಿತ್ತು, ಅದರಲ್ಲಿ 9 ಕೋಟಿ ರೂ. ಚಲನಚಿತ್ರಗಳ ಮೂಲಕ ಗಳಿಸಿದ್ದರು ಎಂದು ವರದಿಯಾಗಿದೆ.

ವೆಂಕಟೇಶ್ 2200 ಕೋಟಿ ರೂ. ಆಸ್ತಿಯೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಚಿರಂಜೀವಿ 1650 ಕೋಟಿ ರೂ. ಆಸ್ತಿಯೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ನಂತರ ಚಿರಂಜೀವಿ ಪುತ್ರ ರಾಮ್ ಚರಣ್ 1370 ಕೋಟಿ ರೂ.ಆಸ್ತಿಯೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಜ್ಯೂನಿಯರ್‌ ಎನ್‌ಟಿಆರ್ 450 ಕೋಟಿ ರೂ. ಆಸ್ತಿಯೊಂದಿಗೆ ಐದನೇ ಸ್ಥಾನದಲ್ಲಿದ್ದರೆ, ದಳಪತಿ ವಿಜಯ್ (445 ಕೋಟಿ ರೂ.), ರಜನಿಕಾಂತ್ (430 ಕೋಟಿ ರೂ.), ಕಮಲ್ ಹಾಸನ್ (388 ಕೋಟಿ ರೂ.), ಮೋಹನ್ ಲಾಲ್ (376 ಕೋಟಿ ರೂ.) ಮತ್ತು ಅಲ್ಲು ಅರ್ಜುನ್ 350 ನಿವ್ವಳ ಆಸ್ತಿಯೊಂದಿಗೆ ಆರನೇ ಸ್ಥಾನದಲ್ಲಿದ್ದಾರೆ.

Exit mobile version