Site icon Vistara News

Rihanna Diamond Watch: ಕೈಗೆ ಕಟ್ಟಿಕೊಳ್ಳಬೇಕಾದ 5.7 ಕೋಟಿ ರೂ. ವಾಚ್ ಕುತ್ತಿಗೆಗೆ ಕಟ್ಟಿಕೊಂಡ ಗಾಯಕಿ ರಿಹಾನಾ!

Rihanna Diamond Watch

#image_title

ಪ್ಯಾರಿಸ್‌: ವಾಚ್‌ ಅನ್ನು ಕೈಗೆ ಕಟ್ಟಿಕೊಳ್ಳುವುದು ಸಾಮಾನ್ಯ. ಈಗಂತೂ ವಾಚ್‌ ಹೋಗಿ ಎಲ್ಲರ ಕೈನಲ್ಲೂ ಸ್ಮಾರ್ಟ್‌ ವಾಚ್‌ಗಳೇ ಮಿಂಚುತ್ತಿವೆ. ಹೀಗಿರುವ ಹಾಲಿವುಡ್‌ನ ಪ್ರಸಿದ್ಧ ಗಾಯಕಿ ರಿಹಾನಾ ಅವರು ವಾಚ್‌ (Rihanna Diamond Watch) ಅನ್ನು ಕೈಗೆ ಕಟ್ಟಿಕೊಳ್ಳದೆ ಕುತ್ತಿಗೆಗೆ ಕಟ್ಟಿಕೊಂಡಿದ್ದಾರೆ. ಅಂದ ಹಾಗೆ ಅವರು ಈ ರೀತಿ ಕಟ್ಟಿಕೊಂಡಿರುವ ಸಣ್ಣ ಬೆಲೆಯ ವಾಚ್‌ ಅಲ್ಲ ಬರೋಬ್ಬರಿ 5.7 ಕೋಟಿ ರೂ. ಬೆಲೆಯ ವಾಚ್‌!

ಇದನ್ನೂ ಓದಿ: Viral Video: ಇದು ಬರೀ ಪುಶ್‌ಅಪ್‌ ಅಲ್ಲ, ಸೈನ್‌ ಬೋರ್ಡ್‌ ಪುಶ್‌ಅಪ್‌! ಇಂತಹ ಸಾಹಸವನ್ನು ಮಾಡಲೇ ಬೇಡಿ
ಹೌದು. ರಿಹಾನಾ ಅವರು ತಮ್ಮ ಪ್ರಿಯತಮ ರಾಕಿ ಅವರೊಂದಿಗೆ ಇತ್ತೀಚೆಗೆ ಪ್ಯಾರಿಸ್‌ ಫ್ಯಾಷನ್‌ ವೀಕ್‌ನಲ್ಲಿ ಕಾಣಿಸಿಕೊಂಡಿದ್ದರು. ತುಂಬು ಗರ್ಭಿಣಿಯಾಗಿರುವ ಅವರು ಅಲ್ಲಿ ತಮ್ಮ ಬೇಬಿ ಬಂಪ್‌ ತೋರಿಸುವಂತಹ ಸುಂದರ ಜೀನ್ಸ್‌, ಡೆನಿಮ್‌ ಶರ್ಟ್‌ನೊಂದಿಗೆ ಕಾಣಿಸಿಕೊಂಡಿದ್ದರು. ಆದರೆ ಅವರ ಪೂರ್ತಿ ಔಟ್‌ಫಿಟ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದು ಅವರ ವಾಚ್‌. ಅವರು ವಾಚನ್ನೇನು ಕೈಗೆ ಕಟ್ಟಿರಲಿಲ್ಲ ಬದಲಾಗಿ ಕುತ್ತಿಗೆಗೆ ಕಟ್ಟಿಕೊಂಡಿದ್ದರು.


Jacob & Co ಸಂಸ್ಥೆ ಇಂತದ್ದೊಂದು ಹೊಸ ವಾಚ್‌ ಅನ್ನು ಲೋಕಾರ್ಪಣೆ ಮಾಡಿದೆ. ಕುತ್ತಿಗೆಗೆ ಕಟ್ಟಿಕೊಳ್ಳಲೆಂದೇ ಮಾಡಲಾಗಿರುವ ಈ ಚೋಕರ್‌ ವಾಚ್‌ನಲ್ಲಿ ಒಟ್ಟು 368 ವಜ್ರದ ಹರಳುಗಳನ್ನು ಬಳಸಲಾಗಿದೆ. ವಾಚ್‌ನ ಒಟ್ಟು ಬೆಲೆ ಬರೋಬ್ಬರಿ 5.7 ಕೋಟಿ ರೂ.! ರಿಹಾನಾ ಅವರು ಈ ಚೋಕರ್‌ ವಾಚ್‌ ತೊಟ್ಟುಕೊಳ್ಳುವುದರ ಜತೆಯಲ್ಲಿ ಅದಕ್ಕೆ ಮ್ಯಾಚ್‌ ಆಗುವಂತೆ ವಜ್ರದ ಲೇಯರ್ಡ್‌ ನೆಕ್ಲೇಸ್‌ ಅನ್ನೂ ಧರಿಸಿದ್ದರು.


ರಿಹಾನಾ ಮತ್ತು ರಾಕಿ 2020ರಿಂದ ಪ್ರೀತಿಯಲ್ಲಿದ್ದಾರೆ. ಅವರ ಪ್ರೀತಿ ವಿಚಾರ ಅದೇ ವರ್ಷ ನವೆಂಬರ್‌ನಲ್ಲಿ ಸಾರ್ವಜನಿಕವಾಯಿತು. ಅದಾದ ನಂತರ 2022ರ ಏಪ್ರಿಲ್‌ನಲ್ಲಿ ರಿಹಾನಾ ಮತ್ತು ರಾಕಿ ಬೇರೆಯಾಗುತ್ತಾರೆ ಎಂದು ಸುದ್ದಿಗಳು ಹರಿದಾಡಿದ್ದವು. ಆದರೆ ಅದು ಸುಳ್ಳಾಯಿತು. 2022ರ ಮೇ ತಿಂಗಳಲ್ಲಿ ರಿಹಾನಾ ಮೊದನೇ ಗಂಡು ಮಗುವಿಗೆ ಜನ್ಮ ನೀಡಿದರು. ಇದೀಗ ಅವರು ಎರಡನೇ ಮಗುವಿನ ತಾಯಿಯಾಗಲು ದಿನಗಣನೆ ಮಾಡುತ್ತಿದ್ದಾರೆ.

Exit mobile version