ಬೆಂಗಳೂರು: ಸ್ಯಾಂಡಲ್‌ವುಡ್ ಸ್ಟಾರ್ಸ್‌ಗಳು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿರುವ ವಿಚಾರ ಈಗಾಗಲೇ ಸಾಕಷ್ಟು ಚರ್ಚೆಯಲ್ಲಿದೆ. ಇದೀಗ ಕಾಂತಾರ ಸಿನಿಮಾದ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಹೆಸರು ರಾಜಕೀಯ ಕುರಿತಾಗಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಪತ್ರಕರ್ತೆಯೊಬ್ಬರು ಈ ಬಗ್ಗೆ ಟ್ವೀಟ್ ಮಾಡಿದ್ದು, ರಿಷಬ್ ರಾಜಕೀಯ ಪ್ರವೇಶದ ಕುರಿತಾಗಿ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.
ʻʻರಿಷಬ್ ರಾಜಕೀಯಕ್ಕೆ ಎಂಟ್ರಿ..ಇವತ್ತಿನ ಸುದ್ದಿ..ʼʼ ಎಂಬ ಪೋಸ್ಟ್‌ಗೆ ರಿಷಬ್ ಪ್ರತಿಕ್ರಿಯೆ ನೀಡಿದ್ದಾರೆ. ʻʻಸುಮ್ನನೆ ಇರಿ ಮರ್ರೆ , ಸುಳ್ಳು ಸುದ್ದಿ, ಏಪ್ರಿಲ್ ಫಸ್ಟ್ ಎಂದು ಹೇಳಿ… ಮೊದಲೇ ಕೆಲವರು ನನ್ನನ್ನ ಒಂದು ಪಕ್ಷಕ್ಕೆ ಸೇರಿಸಿದ್ದಾರೆ. ನಾನು ರಾಜಕೀಯಕ್ಕೆ ಎಂದೂ ಹೋಗುವುದಿಲ್ಲʼʼ ಎಂದು ಈ ಮೂಲಕ ಸ್ಪಷ್ಟನೆ ನೀಡಿದ್ದಾರೆ. ರಿಷಬ್ ಶೆಟ್ಟಿಯವರು ಬಿಜೆಪಿ ಪಕ್ಷ ಹಾಗೂ ಅದರ ಸಿದ್ಧಾಂತದ ಪರವಾಗಿ ಒಲವಿರುವವರು ಎಂದು ಬ್ರ್ಯಾಂಡ್ ಮಾಡಲಾಗಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ನಿಮ್ಮ ನೆಚ್ಚಿನ ನಾಯಕ ಯಾರು ಎಂಬ ಪ್ರಶ್ನೆಗೆ ರಿಷಬ್ ಅವರು ಮೋದಿ ಎಂದಿದ್ದರು. ಆ ನಂತರ ರಾಹುಲ್ ಗಾಂಧಿ ಬಗ್ಗೆ ಕೇಳಿದಾಗ ನೋ ಕಮೆಂಟ್ಸ್ ಎಂದು ಮೌನವಾಗಿದ್ದರು! ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ರಿಷಬ್ ಶೆಟ್ಟಿ ಮೋದಿಯವರ ಅಭಿಮಾನಿ ಎಂದು ವ್ಯಾಖ್ಯಾನಿಸಲಾಗಿತ್ತು. ಇದೀಗ ಮತ್ತೆ ಅವರ ರಾಜಕೀಯ ಅಭಿರುಚಿಯ ಕುರಿತಾಗಿ ಚರ್ಚೆಗಳು ಆಗುತ್ತಿವೆ. ತಾವು ರಾಜಕೀಯಕ್ಕೆ ಎಂಟ್ರಿ ಕೊಡುವುದಿಲ್ಲ ಎಂದು ಸದ್ಯ ರಿಷಬ್ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: Crime news: ʼಕಾಂತಾರ’ ಚಿತ್ರದ ದೃಶ್ಯ ಕಳಿಸಿ ಕೊಲೆ ಬೆದರಿಕೆ! ದೂರು ದಾಖಲು
ರಿಷಬ್ ಶೆಟ್ಟಿ ಪ್ರತಿಕ್ರಿಯೆ
ಕಾಂತಾರ 2
ಕಾಂತಾರ-2ಗೆ ಭರ್ಜರಿ ಪ್ಲಾನ್ ಮಾಡಿ ಬರವಣಿಗೆ ಆರಂಭಿಸಿದ್ದಾರೆ ನಟ ರಿಷಬ್. ಹೊಂಬಾಳೆ ಪ್ರೊಡಕ್ಷನ್ಸ್ ಅಡಿಯಲ್ಲಿ ಸಿನಿಮಾ ತಯಾರಾಗಲಿದ್ದು, ಮತ್ತೆ ಸಿನಿಮಾ ಕೆಲಸದಲ್ಲಿ ನಿರತರಾಗಿದ್ದಾರೆ.
ಕಾಂತಾರ-1 ಸಿಕ್ವೆಲ್ ಆಗಿದ್ದರೆ, ಕಾಂತಾರ-2 ಪ್ರಿಕ್ವೆಲ್ (Prequel film) ಆಗಿ ಮೂಡಿಬರಲಿದೆ. ಕಾಂತಾರ-2 ಪೂರ್ವಭಾವಿ ಕತೆಯಾಗಿದ್ದು, ಇದು ಗ್ರಾಮಸ್ಥರು, ದೇವತೆ ಮತ್ತು ತೊಂದರೆಗೊಳಗಾದ ರಾಜನ ನಡುವಿನ ಸಂಬಂಧವನ್ನು ಅನ್ವೇಷಿಸುತ್ತದೆ. ರಾಜನು ಗ್ರಾಮಸ್ಥರನ್ನು ಮತ್ತು ತನ್ನ ಸುತ್ತಲಿನ ಭೂಮಿಯನ್ನು ರಕ್ಷಿಸಲು ದೇವತೆಯೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತಾನೆ. ʻಮನುಷ್ಯ ಮತ್ತು ಪ್ರಕೃತಿಯ ನಡುವಿನ ಕದನʼ ಚಿತ್ರದ ತಿರುಳಾಗಿದೆ. ಕಾಂತಾರ-2, 2024ರಲ್ಲಿ ಥಿಯೇಟರ್‌ಗೆ ಬರಲಿದೆ ಎಂದು ರಿಷಬ್ ಖಚಿತಪಡಿಸಿದ್ದಾರೆ.