Site icon Vistara News

Rishab Shetty: ಫ್ಯಾಮಿಲಿ ಫೋಟೊಶೂಟ್‌ ಶೇರ್‌ ಮಾಡಿಕೊಂಡ ರಿಷಬ್‌ ಶೆಟ್ಟಿ

Rishab Shetty Family Photoshoot

ನಟ, ನಿರ್ದೇಶಕ ರಿಷಬ್‌ ಶೆಟ್ಟಿ (Rishab Shetty) ಫ್ಯಾಮಿಲಿ ಜತೆ ಇರುವ ಹೊಸ ಫೋಟೊಶೂಟ್‌ವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈಗಾಗಲೇ ಕಾಂತಾರ 2 ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಏಪ್ರಿಲ್‌ನಲ್ಲಿ ಮಗ ರಣ್ವೀತ್ ಹುಟ್ಟುಹಬ್ಬದಂದು ತೆಗೆದ ಫೋಟೊವನ್ನು ರಿಷಬ್ ಶೇರ್ ಮಾಡಿದ್ದಾರೆ.

ಕಾಂತಾರ-1 ಸಿಕ್ವೆಲ್‌ ಆಗಿದ್ದರೆ, ಕಾಂತಾರ-2 ಪ್ರಿಕ್ವೆಲ್‌ (Prequel film) ಆಗಿ ಮೂಡಿಬರಲಿದೆ. ಕಾಂತಾರ-2 ಸಿನಿಮಾ ಕಾಂತಾರಕ್ಕಿಂತ ಮೊದಲಿನ ಕತೆಯಾಗಿರಲಿದೆ.

ಕಾಂತಾರ-1 ಚಿತ್ರದಲ್ಲಿ ನಾಯಕ ಶಿವ ಮತ್ತು ಅವರ ತಂದೆಯಾಗಿ ರಿಷಬ್ ಶೆಟ್ಟಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಕಾಂತಾರ ಕನ್ನಡದಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡಾಗ ಹಿಂದಿ, ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ತೆರೆಕಂಡು ಯಶಸ್ಸು ಗಳಿಸಿದೆ.

Exit mobile version