Site icon Vistara News

Rishab Shetty | ದುಬೈನಲ್ಲಿ ಎಂಜಾಯ್‌ ಮಾಡುತ್ತಿರುವ ರಿಷಬ್‌ ಶೆಟ್ಟಿ ಫ್ಯಾಮಿಲಿ: ವಿಡಿಯೊ ಇಲ್ಲಿದೆ!

Rishab Shetty

ಬೆಂಗಳೂರು : ಕಾಂತಾರ ಸಿನಿಮಾ ನಟ, ನಿರ್ದೇಶಕ ರಿಷಬ್‌ ಶೆಟ್ಟಿ (Rishab Shetty) ಪತ್ನಿ ಪ್ರಗತಿ ಮತ್ತು ಮಕ್ಕಳೊಂದಿಗೆ ಅರಬ್ ದೇಶಕ್ಕೆ ಹಾರಿದ್ದಾರೆ. ದುಬೈಗೆ ಫ್ಯಾಮಿಲಿ ಜತೆ ರಿಷಬ್ ಶೆಟ್ಟಿ ಟ್ರಿಪ್ ಹೋಗಿದ್ದಾರೆ. ಮಕ್ಕಳೊಂದಿಗೆ ಎಂಜಾಯ್‌ ಮಾಡುತ್ತಿರುವ ವಿಡಿಯೊ ಪೋಸ್ಟ್‌ ಮಾಡಿದ್ದಾರೆ.

ಕಾಂತಾರ ಯಶಸ್ಸಿನ ಬೆನ್ನಲ್ಲೇ ಅವರ ಅಭಿಮಾನಿಗಳು ಕಾಂತಾರ-2 ಯಾವಾಗ ಎಂದು ಸೋಷಿಯಲ್‌ ಮೀಡಿಯಾ ಮೂಲಕ ಕೇಳುತ್ತಿದ್ದಾರೆ. ಸ್ವಲ್ಪ ಬ್ರೇಕ್‌ ತೆಗೆದುಕೊಂಡು ಸಿನಿಮಾ ಮಾಡುವುದಾಗಿ ರಿಷಬ್‌ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಈಗ ದುಬೈನಲ್ಲಿ ಫ್ಯಾಮಿಲಿ ಜತೆ ರಿಷಬ್ ಶೆಟ್ಟಿ ಟ್ರಿಪ್ ಹೋಗಿದ್ದಾರೆ. ಅರಬ್ ದೇಶದಲ್ಲಿ ಪತ್ನಿ ಪ್ರಗತಿ ಮತ್ತು ಇಬ್ಬರು ಮುದ್ದು ಮಕ್ಕಳೊಂದಿಗೆ ಎಂಜಾಯ್‌ ಮಾಡುತ್ತಿದ್ದಾರೆ. ಡೆಸರ್ಟ್ ರೈಡಿಂಗ್ಸ್‌ ಸೇರಿದಂತೆ ಅಡ್ವೆಂಚರ್ ಆಟಗಳನ್ನು ಆಡಿದ್ದಾರೆ.

ಇದನ್ನೂ ಓದಿ | Rishab Shetty | 400 ಕೋಟಿ ರೂ. ಗಳಿಕೆ ಕಂಡ ಕಾಂತಾರ ಸಿನಿಮಾಗೆ ರಿಷಬ್‌ ಪಡೆದುಕೊಂಡ ಸಂಭಾವನೆ ಎಷ್ಟು?

ಈ ಕುರಿತ ವಿಡಿಯೊವನ್ನ ರಿಷಬ್ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ʻʻದುಬೈ, ಸಾಟಿಯಿಲ್ಲದ ಅನುಭವ! ಚಿಕ್ಕ ಮಕ್ಕಳಿಗೆ ಕೆಲವೊಮ್ಮೆ ಆಶ್ಚರ್ಯಕರ ವಾತಾವರಣ ಮತ್ತು ಆತಿಥ್ಯದಿಂದ ಮನಮುಟ್ಟಿದೆʼʼ ಎಂದು ಬರೆದು ಸಂಭ್ರಮಿಸಿದ್ದಾರೆ.

ಕಾಂತಾರ ಸಿನಿಮಾ (Kantara Movie) ವಿಶ್ವಾದ್ಯಂತ ಭಾರಿ ಪ್ರಶಂಸೆಯನ್ನು ಪಡೆದುಕೊಂಡಿದೆ. ಈ ನಡುವೆ ಹಿರಿಯ ನಟ ಕಮಲಹಾಸನ್‌ ಅವರು ಕಾಂತಾರ ಯಶಸ್ಸಿನ ಕುರಿತು ರಿಷಬ್‌ ಶೆಟ್ಟಿ ಅವರಿಗೆ ಪತ್ರವನ್ನೇ ಬರೆದಿದ್ದಾರೆ. ಇದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಕಾಂತಾರ ಬಿಡುಗಡೆಯಾದ ಸಂದರ್ಭದಲ್ಲಿ ಕಮಲ್‌ ಹಾಸನ್‌ ಅವರು ಕಾಂತಾರ ಸಿನಿಮಾವನ್ನು ಮೆಚ್ಚಿ ಹಾಡಿ ಹೊಗಳಿದ್ದರು. ಕಾಂತಾರ ಸಿನಿಮಾ ವೀಕ್ಷಿಸಿ, ರಿಷಭ್ ಶೆಟ್ಟಿ ಅವರಿಗೆ ಬೆನ್ನು ತಟ್ಟಿದ್ದರು. ಅಲ್ಲದೇ, ರಿಷಬ್‌ ಅವರು ಕತೆ ಹೇಳಿದ ರೀತಿ ಪ್ರೇರಣಾದಾಯಕವಾಗಿದೆ ಎಂದು ಕಮಲ್ ಹಾಸನ್ ಹೇಳಿದ್ದರು.

ಇದನ್ನೂ ಓದಿ | Rishab Shetty | ʻಅದ್ಭುತ ವ್ಯಕ್ತಿಗಳ ಜತೆ ಅದ್ಭುತ ಚರ್ಚೆʼ ಅಂದಿದ್ಯಾಕೆ ರಿಷಬ್‌ ಶೆಟ್ಟಿ: ಫೋಟೊ ವೈರಲ್‌!

Exit mobile version