Site icon Vistara News

Rishab Shetty | ಹ್ಯಾಷ್‌ ಟ್ಯಾಗ್‌ ಮ್ಯಾಗಜಿನ್‌ ಮುಖಪುಟದಲ್ಲಿ ರಿಷಬ್ ಶೆಟ್ಟಿ: ವೈರಲ್‌ ಆಯ್ತು ವಿಡಿಯೊ!

Rishab Shetty (hash tag magazine)

ಬೆಂಗಳೂರು : ‘ಕಾಂತಾರ’ ಸಿನಿಮಾದಿಂದ ರಿಷಬ್‌ ಶೆಟ್ಟಿ (Rishab Shetty ) ಅವರಿಗೆ ಬೇಡಿಕೆ ಹೆಚ್ಚಾಗಿದೆ. ಕಾಂತಾರ ಸಿನಿಮಾ ವಿಶ್ವಾದ್ಯಂತ ಖ್ಯಾತ ಗಳಿಸಿ ಅಂತಾರಾಷ್ಟ್ರೀಯ ಫ್ರಂಟ್‌ಲೈನ್‌ ಮ್ಯಾಗಜಿನ್‌ನಲ್ಲಿ ಕನ್ನಡದ ʻಕಾಂತಾರʼ ಫೋಟೊವನ್ನು ಕವರ್‌ ಪೇಜ್‌ನಲ್ಲಿ ಬಳಸಲಾಗಿತ್ತು. ಇದರ ಬೆನ್ನಲ್ಲೇ ಪ್ರಸಿದ್ಧ ಹ್ಯಾಷ್ ಟ್ಯಾಗ್ ಮ್ಯಾಗಜಿನ್ (Rishab Shetty) ತನ್ನ ಕವರ್ ಪೇಜ್​ಗಾಗಿ ನಟನ ಸ್ಟೈಲಿಷ್ ಫೋಟೊಶೂಟ್ ಮಾಡಿದೆ. ಇದರ ವಿಡಿಯೊವನ್ನು ರಿಷಬ್ ಅವರ ಪತ್ನಿ ಪ್ರಗತಿ ಶೆಟ್ಟಿ ಅವರೂ ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ.

ಕಾಂತಾರ ಸಿನಿಮಾ ವಿಶ್ವಾದ್ಯಂತ 400 ಕೋಟಿ ರೂ. ಗಳಿಕೆ ಕಂಡಿದೆ. ಕರ್ನಾಟಕದಲ್ಲಿಯೇ 150 ಕೋಟಿ ರೂ. ಕಲೆಕ್ಷನ್‌ ಮಾಡಿದೆ. 1984ರಿಂದ ಈವರೆಗೆ ಯಾವುದೇ ಕನ್ನಡ ಚಿತ್ರದ ಫೋಟೊಗಳು ಫ್ರಂಟ್‍ಲೈನ್ ಮ್ಯಾಗಜಿನ್‍ನ ಮುಖಪುಟದಲ್ಲಿ ಬಂದಿರಲಿಲ್ಲ ಎನ್ನುವುದು ವಿಶೇಷ.ʻ ಕಾಂತಾರʼ ಫೋಟೊವನ್ನು ಫ್ರಂಟ್‍ಲೈನ್ ಮ್ಯಾಗಜಿನ್‍ನ ಕವರ್‌ ಪೇಜ್‌ನಲ್ಲಿ ಬಳಸಲಾಗಿತ್ತು. ಇದೀಗ ಹ್ಯಾಶ್​ಟ್ಯಾಗ್ ಮ್ಯಾಗಜಿನ್ ಕವರ್ ಪುಟದಲ್ಲಿ ರಿಷಬ್ ಶೆಟ್ಟಿ ಅವರು ಮಿಂಚಲಿದ್ದಾರೆ. ರಿಷಬ್ ಶೆಟ್ಟಿ ಈ ಸಂಬಂಧಿತ ಫೋಟೊಶೂಟ್​ನ ಬಿಟಿಎಸ್ ವಿಡಿಯೊವನ್ನು ಶೇರ್ ಮಾಡಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಅವರ ವಿಡಿಯೊ ಈಗ ವೈರಲ್ ಆಗಿದ್ದು ಈ ವಿಡಿಯೋಗೆ ಸುಮಾರು 86 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ.

ಇದನ್ನೂ ಓದಿ | Kantara movie | ವಿಶ್ವಾದ್ಯಂತ ಕಾಂತಾರ ಸಿನಿಮಾ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಹೀಗಿದೆ

ಕಾಂತಾರ ಸಿನಿಮಾ ಕ್ರೇಜ್‌ ಇನ್ನೂ ಹೆಚ್ಚಾಗುತ್ತಿದೆ. ರಿಷಬ್ ಶೆಟ್ಟಿ ಜತೆ ಈ ಸಿನಿಮಾದಲ್ಲಿ ನಟಿ ಸಪ್ತಮಿ ಗೌಡ, ನಟ ಕಿಶೋರ್, ಪ್ರಮೋದ್ ಶೆಟ್ಟಿ. ಅಚ್ಯುತ್ ಕುಮಾರ್, ಮಾನಸಿ ಸುಧೀರ್ ಸೇರಿ ಬಹಳಷ್ಟು ಸ್ಥಳೀಯ ಕಲಾವಿದರು ನಟಿಸಿದ್ದಾರೆ.

ಇದನ್ನೂ ಓದಿ | Kantara Movie | ನಟ ಅನುಪಮ್‌ ಖೇರ್‌ ಜತೆ ರಿಷಬ್‌ ಶೆಟ್ಟಿ: ನಿರ್ದೇಶಕ ಮಧುರ್ ಭಂಡಾರ್ಕರ್ ಹೇಳಿದ್ದೇನು?

Exit mobile version