Site icon Vistara News

Rishab Shetty | ರಿಷಬ್‌ ಶೆಟ್ಟಿ ನಿರ್ಮಾಣದ ʻಶಿವಮ್ಮʼ ಚಿತ್ರಕ್ಕೆ ಬೂಸಾನ್‌ ಚಲನಚಿತ್ರೋತ್ಸವ ಪ್ರಶಸ್ತಿ

Rishab Shetty

ಬೆಂಗಳೂರು: ರಿಷಬ್‌ ಶೆಟ್ಟಿ (Rishab Shetty) ಫಿಲ್ಮ್ಸ್‌ ನಿರ್ಮಾಣ ಮಾಡಿರುವ ʻಶಿವಮ್ಮʼ ಸಿನಿಮಾಗೆ ಈ ವರ್ಷದ 27ನೇ ಬೂಸಾನ್‌ ಅಂತಾರಾಷ್ಟ್ರೀಯ ಪ್ರಶಸ್ತಿ (Busan International Film Festival) ಲಭಿಸಿದೆ. ಭಾರತೀಯ ಚಲನಚಿತ್ರ ʻಶಿವಮ್ಮʼ ನಿರ್ದೇಶಕ ಜೈ ಶಂಕರ್‌ ಆರ್ಯರ್‌ ನಿರ್ದೇಶನ ಮಾಡಿದ್ದಾರೆ. ಏಷ್ಯಾದ ಅತಿದೊಡ್ಡ ಫಿಲ್ಮ್ಸ್ ಉತ್ಸವದಲ್ಲಿ ಒಟ್ಟು 10 ಚಲನಚಿತ್ರಗಳು ಉನ್ನತ-ಪ್ರೊಫೈಲ್ ನ್ಯೂ ಕರೆಂಟ್ಸ್ ಪ್ರಶಸ್ತಿಗಾಗಿ ಸ್ಪರ್ಧಿಸಿದ್ದವು. ದಕ್ಷಿಣ ಕೊರಿಯಾದ ʻವೈಲ್ಡ್‌ ರೂಮರ್‌ʼ ಕೂಡ ಪ್ರಶಸ್ತಿ ಬಾಚಿಕೊಂಡಿದೆ.

ಮೊದಲು ಅಥವಾ ಎರಡನೇ ಬಾರಿಗೆ ತಮ್ಮ ಚಿತ್ರಗಳನ್ನು ತಯಾರಿಸುವ ನಿರ್ದೇಶಕರಿಗಾಗಿಯೇ ಈ ಪ್ರಶಸ್ತಿಯನ್ನು ಕಾಯ್ದಿರಿಸಲಾಗಿದೆ. ಈ ಸಿನಿಮಾಗೆ ತೀರ್ಪುಗಾರರು ಶ್ಲಾಘಿಸಿದ್ದಾಋೆ.. ʻʻಪ್ರಸ್ತುತ ಕಾಲಕ್ಕೆ ಹೊಂದಿಕೆಯಾಗುವಂತೆ ಈ ಕಥೆಯನ್ನು ಪೂರ್ಣಗೊಳಿಸಿದ ನಿರ್ದೇಶಕರನ್ನು, ಅವರ ಸ್ವಂತಿಕೆಯನ್ನು ನಿರೂಪಣೆಗಾಗಿ ನಾವು ಪ್ರಶಂಶಿಸುತ್ತೇವೆʼʼ ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ | ದೃಶ್ಯ ಕಾವ್ಯ | ಕಾಂತಾರ ಸಿನೆಮಾ ನನಗೇಕೆ ಇಷ್ಟವಾಯಿತು?

ಶಿವಮ್ಮ ಚಿತ್ರ ಹಳ್ಳಿಗಾಡಿನ ಮಹಿಳೆಯೊಬ್ಬರು ಕಷ್ಟಪಟ್ಟು ಸಂಪಾದಿಸಿ ಹಣವನ್ನು ನೆಟ್‌ವರ್ಕ್‌ ವಹಿವಾಟಿನಲ್ಲಿ ಹೂಡಿಕೆ ಮಾಡುವ ವಿಭಿನ್ನ ಕಥಾ ಹಂದರ ಹೊಂದಿದೆ. ರಿಷಬ್‌ ಶೆಟ್ಟಿ ನಿರ್ಮಾಣದ ಪೆಡ್ರೋ ಕೂಡ ಹಿಂದಿನ ವರ್ಷ ಈ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿತ್ತು.

ಎ ವೈಲ್ಡ್‌ ರೂಮರ್‌

ಮತ್ತೊಂದು ಪ್ರಶಸ್ತಿ ಪಡೆದ ʻಎ ವೈಲ್ಡ್‌ ರೂಮರ್‌ʼ, ಕೊರಿಯಾದ ಚಲನಚಿತ್ರ ನಿರ್ಮಾಪಕ ಲೀ ಜಿಯೋಂಗ್-ಹಾಂಗ್ ಅವರ ಮೊದಲ ಚಲನಚಿತ್ರವಾಗಿದೆ. ಇದು BIFF ನಲ್ಲಿ ನೆಟ್‌ವರ್ಕ್ ಫಾರ್ ದಿ ಪ್ರಮೋಷನ್ ಆಫ್ ಏಷ್ಯಾ ಪೆಸಿಫಿಕ್ ಸಿನಿಮಾ ಪ್ರಶಸ್ತಿ ಮತ್ತು KBS ಇಂಡಿಪೆಂಡೆಂಟ್ ಫಿಲ್ಮ್ ಅವಾರ್ಡ್ ಸೇರಿದಂತೆ ಎರಡು ಇತರ ಬಹುಮಾನಗಳನ್ನು ಪಡೆದುಕೊಂಡಿದೆ. ಭಾರತದಿಂದ ಆಯ್ಕೆಯಾಗಿದ್ದ ಇನ್ನೊಂದು ಚಿತ್ರ ‘ವಿಂಟರ್‌ ವಿದಿನ್ʼಗೆ ಪ್ರೇಕ್ಷಕ ವಿಭಾಗದ ಪ್ರಶಸ್ತಿ ಲಭಿಸಿದೆ.

ಇದನ್ನೂ ಓದಿ | Rishab Shetty | ನಟ/ನಿರ್ದೇಶಕ ರಿಷಬ್‌ ಶೆಟ್ಟಿಗೆ ಜನುಮದಿನದ ಸಂಭ್ರಮ

Exit mobile version