ಬೆಂಗಳೂರು: ರಿಷಬ್ ಶೆಟ್ಟಿ (Rishab Shetty) ಅವರು ಇತ್ತೀಚೆಗೆ ಗೋವಾದಲ್ಲಿ ನಡೆದ IFFI 2023 (ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ)ನಲ್ಲಿ ನೀಡಿದ ಹೇಳಿಕೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗಳು ಆಗಿದ್ದವು. ರಿಷಬ್ ಶೆಟ್ಟಿ ಅವರು ʻʻನನಗೆ ಹಿಂದಿ ಮಾತ್ರವಲ್ಲದೆ ಇತರ ಚಲನಚಿತ್ರೋದ್ಯಮಗಳಿಂದಲೂ ಆಫರ್‌ಗಳು ಬಂದವು. ನಾನು ಕನ್ನಡ ಇಂಡಸ್ಟ್ರಿಯನ್ನು ಬಿಡಬಾರದು ಎಂಬ ನಂಬಿಕೆಯಿಂದಾಗಿ ಹಲವು ಆಪರ್‌ಗಳನ್ನು ಬಿಟ್ಟೆʼʼ ಎಂದು ಹೇಳಿಕೆ ನೀಡಿದ್ದರು. ಇದಾದ ಬಳಿಕ ನೆಟ್ಟಿಗರು ರಿಷಬ್ ಅವರು ಪರೋಕ್ಷವಾಗಿ ರಶ್ಮಿಕಾ ಹಾಗೂ ಪ್ರಶಾಂತ್ ನೀಲ್ ಅವರಿಗೆ ತಿರುಗೇಟು ಕೊಟ್ಟರು ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲು ಶುರು ಮಾಡಿದ್ದರು. ಇದೀಗ ರಿಷಬ್ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ ಎಂದು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ರಶ್ಮಿಕಾ ಮಂದಣ್ಣ ಮತ್ತು ಪ್ರಶಾಂತ್ ನೀಲ್ ಅವರಂತಹ ನಟಿ ಹಾಗೂ ನಿರ್ದೇಶಕರುಗಳು ಕನ್ನಡ ಚಿತ್ರರಂಗದಲ್ಲಿ ಯಸಸ್ಸು ಸಾಧಿಸಿದ ಬಳಿಕ ಬೇರೆ ಭಾಷೆಯ ಚಿತ್ರೋದ್ಯಮದಲ್ಲಿ ಹೋಗಿದ್ದಾರೆ ಎಂಬುದು ಹಲವರ ವಾದ.
ಇತ್ತೀಚೆಗೆ ನಡೆದ IFFIನಲ್ಲಿ ರಿಷಬ್‌ಗೆ ಹಿಂದಿ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡಲು ಯೋಜಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದರು.
ರಿಷಬ್ ಮಾತನಾಡಿ ʻ ಕಾಂತಾರ ಯಶಸ್ಸಿನ ನಂತರ, ನನಗೆ ಹಿಂದಿ ಮಾತ್ರವಲ್ಲದೆ ಇತರ ಚಲನಚಿತ್ರೋದ್ಯಮಗಳಿಂದಲೂ ಆಫರ್‌ಗಳು ಬಂದವು. ಕಾಂತಾರ ಸಿನಿಮಾ ಈ ಮಟ್ಟದಲ್ಲಿ ಹಿಟ್ ಆಗಿದ್ದಕ್ಕೆ ನನ್ನ ಕನ್ನಡಿಗರ ಕೊಡುಗೆ ಅದರಲ್ಲಿ ಅಪಾರ ಇದೆ. ಹಾಗಾಗಿ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ನಾನು ಸದಾ ಚಿರಋಣಿ. ಒಂದು ಸಿನಿಮಾ ಹಿಟ್ ಆಗ್ತಿದ್ದಂತೆ, ಇಂಡಸ್ಟ್ರಿ ಬಿಟ್ಟು ಹೊರಟ ನೋಡು ಎಂಬ ಮಾತು ಬರಬಾರದುʼʼ ಎಂದಿದ್ದರು.
ಇದನ್ನೂ ಓದಿ: Rishab Shetty: ವಿಶೇಷ ಜ್ಯೂರಿ ಅವಾರ್ಡ್ ತಮ್ಮ ನೆಚ್ಚಿನ ನಟನಿಗೆ ಅರ್ಪಿಸಿದ ರಿಷಬ್ ಶೆಟ್ಟಿ, ಯಾರವರು?
ರಶ್ಮಿಕಾ ಮತ್ತು ಪ್ರಶಾಂತ್ ನೀಲ್ ಕನ್ನಡ ಚಲನಚಿತ್ರೋದ್ಯಮದಲ್ಲಿ ಭಾರಿ ಯಶಸ್ಸನ್ನು ಗಳಿಸಿದವರು. 2016ರ ಚಲನಚಿತ್ರ ʼಕಿರಿಕ್ ಪಾರ್ಟಿʼಯೊಂದಿಗೆ ರಶ್ಮಿಕಾ ಖ್ಯಾತಿಯನ್ನು ಗಳಿಸಿದರು. 2018 ಚಲೋ ಸಿನಿಮಾ ಮೂಲಕ ತೆಲುಗಿಗೆ ಪದರ್ಪಾಣೆ ಮಾಡಿದರು ರಶ್ಮಿತಾ . ಅದೇ ವರ್ಷ ಬಿಡುಗಡೆಯಾದ ʼಗೀತ ಗೋವಿಂದಂʼ ಅವರ ಜೀವನವನ್ನು ಬದಲಾಯಿಸಿತು. ಬಳಿಕ ನಟಿ ತಮಿಳು ಮತ್ತು ಹಿಂದಿಯಲ್ಲೂ ನಟಿಸಿದರು. ಅವರು ಇತ್ತೀಚೆಗೆ ಸಂದೀಪ್ ರೆಡ್ಡಿ ವಂಗಾ ಅವರ ʼಅನಿಮಲ್ʼ ಚಿತ್ರದಲ್ಲಿ ರಣಬೀರ್ ಕಪೂರ್ ಜತೆ ಕಾಣಿಸಿಕೊಂಡರು. ಮತ್ತೊಂದೆಡೆ ಪ್ರಶಾಂತ್ ನೀಲ್ ಅವರು ಯಶ್ ಅಭಿನಯದ ಕೆಜಿಎಫ್ ಮತ್ತು ಕೆಜಿಎಫ್ 2 ಸಿನಿಮಾ ಮೂಲಕ ಸಕ್ಸೆಸ್ ಕಂಡ ಬಳಿಕ ಪ್ರಭಾಸ್ ಅವರೊಂದಿಗೆ ಸಲಾರ್: ಭಾಗ 1ನಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗೇ ಮುಂದೆ ಟಾಲಿವುಡ್ ಮತ್ತು ಬಾಲಿವುಡ್‌ಗೆ ಪ್ರವೇಶಿಸುತ್ತಿದ್ದಾರೆ. ಈ ಇಬ್ಬರು ತಮ್ಮ ಯಶಸ್ಸಿನ ನಂತರ ಕನ್ನಡ ಚಿತ್ರರಂಗವನ್ನು ತೊರೆಯುತ್ತಿರುವುದಕ್ಕೆ ರಿಷಬ್ ವ್ಯಂಗ್ಯವಾಡುತ್ತಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡಲು ಶುರು ಮಾಡಿದರು. ಹಾಗೇ ಈ ಬಗ್ಗೆ ಭಾರಿ ಚರ್ಚೆಗಳು ಆಯ್ತು.
ನಟನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟಪಡಿಸಲು ರಿಷಬ್ ಪ್ರತಿಕ್ರಿಯೆಯನ್ನು ಅಭಿಮಾನಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ʻʻರಿಷಬ್ ಅವರು ಹೇಳಿದ್ದು ಒಂದು ಹಿಟ್ ಸಿನಿಮಾ ನೀಡಿದ ನಂತರ ಉದ್ಯಮವನ್ನು ತೊರೆಯುವ ವ್ಯಕ್ತಿ ಎಂದು ಕರೆಸಿಕೊಳ್ಳಲು ನಾನು ಬಯಸುವುದಿಲ್ಲʼʼ ಎಂದು. ಅದರ ಬದಲಾಗಿ, ‘ನಾನು ಇತರರಂತೆ ಕನ್ನಡ ಇಂಡಸ್ಟ್ರಿ ತೊರೆಯುವುದಿಲ್ಲ’ ಎಂದು ಅವರು ಹೇಳಿಲ್ಲ ಎಂದು ರಿಷಬ್ ಪರ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Rishab Shetty: ಕನ್ನಡಿಗ ಕಲಾವಿದರೇ ಮೊದಲ ಆದ್ಯತೆ ಎಂದ ರಿಷಬ್; ಹೇಗಿರಲಿದೆ ಕಾಂತಾರ ಚಾಪ್ಟರ್ 1?
ಈ ಟ್ವೀಟ್‌ಗೆ ರಿಷಬ್ ಕೂಡ ಪ್ರತಿಕ್ರಿಯಿಸಿ, “ತೊಂದರೆಯಿಲ್ಲ, ಕೊನೆಗೂ ನಾನು ಹೇಳಲು ಬಯಸಿದ್ದನ್ನು ಒಬ್ಬರಾದರೂ ಅರ್ಥಮಾಡಿಕೊಂಡರಲ್ಲ” ಎಂದು ಬರೆದುಕೊಂಡಿದ್ದಾರೆ.
ಈಗಾಗಲೇ ಕಾಂತಾರ ಚಾಪ್ಟರ್ -1 ಲುಕ್ ಔಟ್ ಆಗಿದೆ. ಪ್ರತಿಕ್ಷಣವೂ ದೈವಿಕ ಸ್ಪರ್ಶ ನೀಡುವಂತಹ ಹಿನ್ನೆಲೆ ಧ್ವನಿಯಲ್ಲಿ ತಮ್ಮ ಅವತಾರವನ್ನು ಬಹಿರಂಗಗೊಳಿಸಿದ್ದಾರೆ ರಿಷಬ್. ಇತಿಹಾಸದ ನಿಗೂಢ ಸತ್ಯ ಹೇಳುವುದಕ್ಕೆ ರಿಷಬ್ ಶೆಟ್ಟಿ ತಯಾರಿ ಮಾಡಿಕೊಂಡಿದ್ದಾರೆ. ವಿಶ್ವಾದ್ಯಂತ ಸಿನಿಮಾ ಏಳು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಕಾಡುಬೆಟ್ಟು ಶಿವನ ತಂದೆಯ ರಹಸ್ಯ ರಿವೀಲ್ ಮಾಡಲು ಹೊರಟ್ಟಿದ್ದಾರೆ ರಿಷಬ್. 2024ಕ್ಕೆ ‘ಕಾಂತಾರ-1’ ಚಿತ್ರಮಂದಿರಗಳಿಗೆ ಬರಲಿದೆ..