Rishab Shetty: ನಾನು ತುಂಬಾ ಅದೃಷ್ಟಶಾಲಿ ಎಂದ ರಿಷಬ್ ಪತ್ನಿ ಪ್ರಗತಿ ಶೆಟ್ಟಿ! Yashaswi Devadiga 2 ವರ್ಷಗಳು ago ಫಾದರ್ಸ್ ಡೇ ದಿನ (Rishab Shetty) ಸೆಲಬ್ರಿಟಿಗಳು ತಮ್ಮ ತಂದೆಯೊಂದಿಗೆ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದರು. ನಟ ರಿಷಬ್ ಅವರು ಮಕ್ಕಳ ಜತೆಯಿರುವ ಫೋಟೊಗಳನ್ನು ಪತ್ನಿ ಪ್ರಗತಿ ಶೆಟ್ಟಿ ಶೇರ್ ಮಾಡಿದ್ದಾರೆ. ಈ ಫೋಟೊಗೆ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಕಾಂತಾರ ಚಿತ್ರದ ಯಶಸ್ಸಿನ ಬಳಿಕ ಕುಟುಂಬದ ಕಡೆ ಗಮನ ಕೊಡುತ್ತಿದ್ದರು ರಿಷಬ್. ವಿದೇಶ ಪ್ರವಾಸಕ್ಕೂ ಹೋಗಿ ಬಂದಿದ್ದರು. ತಮ್ಮ ಹುಟ್ಟೂರು ಕುಂದಾಪುರಕ್ಕೂ ನಟ ಭೇಟಿ ನೀಡಿದ್ದರು. ʻʻತಂದೆಯರ ದಿನದ ಶುಭಾಶಯಗಳು! ನಿಮ್ಮ ಪ್ರೀತಿ, ಬೆಂಬಲ ಮತ್ತು ಸಮರ್ಪಣಾ ಮನೋಭಾವವು ಪ್ರತಿದಿನವೂ ಅದ್ಭುತ ಅನುಭವ ನೀಡಿದೆ. ಬೆಸ್ಟ್ ಪತಿ ಮತ್ತು ತಂದೆಯಾಗಿದ್ದಕ್ಕಾಗಿ ಧನ್ಯವಾದಗಳು. ನೀವು ನನ್ನ ಪಕ್ಕದಲ್ಲಿರುವುದಕ್ಕೆ ನಾನು ತುಂಬಾ ಅದೃಷ್ಟಶಾಲಿʼʼ ಎಂದು ಪ್ರಗತಿ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈಗಾಗಲೇ ರಿಷಬ್ ಕಾಂತಾರ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆಗಸ್ಟ್ ತಿಂಗಳಲ್ಲಿ ಚಿತ್ರಕ್ಕೆ ಮುಹೂರ್ತ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ ಆಗಸ್ಟ್ 27ರಂದು ಸಿನಿಮಾಗೆ ಮುಹೂರ್ತ ನೆರವೇರುವ ಸಾಧ್ಯತೆ ಇದೆ. ಆ ಬಳಿಕ ಚಿತ್ರತಂಡ ನೇರವಾಗಿ ಶೂಟಿಂಗ್ಗೆ ಇಳಿಯಲಿದೆ.