Site icon Vistara News

Rishab Shetty: ಮಗಳು ರಾದ್ಯಾ ಜನುಮದಿನದಂದು ಸ್ಪೆಷಲ್‌ ವಿಡಿಯೊ ಹಂಚಿಕೊಂಡ ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ

Rishab Shetty shares daughter Radhya Cute birthday photoshoot

ಬೆಂಗಳೂರು: ಸ್ಯಾಂಡಲ್‌ವುಡ್‌ ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ (Rishab Shetty) ಕಾಂತಾರ ಸಿನಿಮಾ ಮೂಲಕ ಖ್ಯಾತಿ ಪಡೆದು ಇದೀಗ ಕಾಂತಾರ-2 ಸಿನಿಮಾ ಸೆಟ್ಟೇರಲು ಸಜ್ಜಾಗಿದೆ ಇದರ ಬೆನ್ನಲ್ಲೇ ಮಗಳು ರಾದ್ಯಾಳ ಬರ್ತ್‌ಡೇಗೆ (Birthday) ವಿಶೇಷ ವೀಡಿಯೊ ಹಂಚಿಕೊಂಡಿದ್ದಾರೆ. ರಾದ್ಯಾಳ ಕ್ಯೂಟ್‌ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಮಗಳು ರಾದ್ಯಾ ಇದೀಗ ಒಂದು ವರ್ಷ ಪೂರೈಸಿದ್ದು, ರಿಷಬ್ ದಂಪತಿ ಫೋಟೊಶೂಟ್ ಮಾಡಿಸಿದ್ದಾರೆ. ಬಿಳಿ ಮತ್ತು ಹಸಿರು ಬಣ್ಣದ ಡ್ರೆಸ್‌ನಲ್ಲಿ ರಾದ್ಯಾ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾಳೆ. ಹಲವು ಈ ವಿಡಿಯೊ ನೋಡಿ ಮಗು ರಿಷಬ್‌ ಅಂತೆಯೇ ಇದ್ದಾಳೆ ಎಂದು ಕಮೆಂಟ್‌ ಮಾಡಿದ್ದಾರೆ.

ರಾದ್ಯಾಳ ತುಂಟಾಟದ ಕ್ಯೂಟ್‌ ಫೋಟೊಗಳು

ರಿಷಬ್‌ ಶೆಟ್ಟಿ ಇನ್‌ಸ್ಟಾದಲ್ಲಿ ವಿಡಿಯೊ ಶೇರ್‌ ಮಾಡಿ ʻʻರಾದ್ಯಾಳ ಮೊದಲ ಹುಟ್ಟುಹಬ್ಬಕ್ಕೆ ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಸದಾ ಇರಲಿʼʼ ಎಂದು ಬರೆದುಕೊಂಡಿದ್ದಾರೆ.

ಇಲ್ಲಿದೆ ರಾದ್ಯಾಳ ಫೋಟೊಶೂಟ್‌ ವಿಡಿಯೊ

ಇದನ್ನೂ ಓದಿ: Rishab Shetty: ಹರಿಯುವ ನೀರು, ಮಗುವಿನ ನಗುವಿನ ಧ್ವನಿ, ಬೇಕಾದವರೊಂದಿಗೆ ಕಳೆಯುವ ಕ್ಷಣಗಳು… ಫೋಟೊ ಹಂಚಿಕೊಂಡ ರಕ್ಷಿತ್‌

ಕಾಂತಾರ-2

ಕಾಂತಾರ-1 ಸಿಕ್ವೆಲ್‌ ಆಗಿದ್ದರೆ, ಕಾಂತಾರ-2 ಪ್ರಿಕ್ವೆಲ್‌ (Prequel film) ಆಗಿ ಮೂಡಿಬರಲಿದೆ. ಕಾಂತಾರ-2 ಸಿನಿಮಾ ಕಾಂತಾರಕ್ಕಿಂತ ಮೊದಲಿನ ಕತೆಯಾಗಿದ್ದು, ಇದು ಗ್ರಾಮಸ್ಥರು, ದೇವತೆ ಮತ್ತು ತೊಂದರೆಗೊಳಗಾದ ರಾಜನ ನಡುವಿನ ಸಂಬಂಧವನ್ನು ಅನ್ವೇಷಿಸುತ್ತದೆ. ರಾಜನು ಗ್ರಾಮಸ್ಥರನ್ನು ಮತ್ತು ತನ್ನ ಸುತ್ತಲಿನ ಭೂಮಿಯನ್ನು ರಕ್ಷಿಸಲು ದೇವತೆಯೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತಾನೆ. ʻಮನುಷ್ಯ ಮತ್ತು ಪ್ರಕೃತಿಯ ಕದನʼ ಚಿತ್ರದ ತಿರುಳು ಇದಾಗಿದೆ. ಕಾಂತಾರ-2, 2024ರಲ್ಲಿ ಥಿಯೇಟರ್‌ಗೆ ಬರಲಿದೆ ಎಂದು ರಿಷಬ್‌ ಖಚಿತಪಡಿಸಿದ್ದಾರೆ.

Exit mobile version