Site icon Vistara News

Rishab Shetty: ಕಾಂತಾರ-2 ಬಗ್ಗೆ ಹೊಸ ಅಪ್‌ಡೇಟ್‌ ಹಂಚಿಕೊಂಡ ರಿಷಬ್‌ ಶೆಟ್ಟಿ

Rishab Shetty new Update kantara 2

ಬೆಂಗಳೂರು: ಕಾಂತಾರ ಚಿತ್ರದ ನಟ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿ (Rishab Shetty) ಜಿನೀವಾದಲ್ಲಿ ಕಾಂತಾರ ಸಿನಿಮಾ ವಿಶೇಷ ಪ್ರದರ್ಶನಗೊಂಡ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಪ್ರೇಕ್ಷಕರಿಗೆ ಹೊಸ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಬರವಣಿಗೆಯ ಆದಿ ಎಂದು ಕ್ಯಾಪ್ಷನ್‌ ಮೂಲಕ ಸಿನಿಮಾದ ಹೊಸ ಅಪ್‌ಡೇಟ್‌ ಹಂಚಿಕೊಂಡಿದ್ದಾರೆ.

ಕಾಂತಾರ-2ಗೆ ಭರ್ಜರಿ ಪ್ಲಾನ್ ಮಾಡಿ ಬರವಣಿಗೆ ಆರಂಭಿಸಿದ್ದಾರೆ ನಟ ರಿಷಬ್‌. ಹೊಂಬಾಳೆ ಪ್ರೊಡಕ್ಷನ್ಸ್‌ ಅಡಿಯಲ್ಲಿ ಸಿನಿಮಾ ತಯಾರಾಗಲಿದ್ದು, ಮತ್ತೆ ಕೆಲಸದಲ್ಲಿ ನಿರತರಾಗಿದ್ದಾರೆ.

ಪ್ರಿಕ್ವೆಲ್‌ ಆಗಿ ಬರಲಿದೆ ಕಾಂತಾರ 2

ಕಾಂತಾರ-1 ಸಿಕ್ವೆಲ್‌ ಆಗಿದ್ದರೆ, ಕಾಂತಾರ-2 ಪ್ರಿಕ್ವೆಲ್‌ (Prequel film) ಆಗಿ ಮೂಡಿಬರಲಿದೆ. ಕಾಂತಾರ-2 ಪೂರ್ವಭಾವಿ ಕತೆಯಾಗಿದ್ದು, ಇದು ಗ್ರಾಮಸ್ಥರು, ದೇವತೆ ಮತ್ತು ತೊಂದರೆಗೊಳಗಾದ ರಾಜನ ನಡುವಿನ ಸಂಬಂಧವನ್ನು ಅನ್ವೇಷಿಸುತ್ತದೆ. ರಾಜನು ಗ್ರಾಮಸ್ಥರನ್ನು ಮತ್ತು ತನ್ನ ಸುತ್ತಲಿನ ಭೂಮಿಯನ್ನು ರಕ್ಷಿಸಲು ದೇವತೆಯೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತಾನೆ. ʻಮನುಷ್ಯ ಮತ್ತು ಪ್ರಕೃತಿಯ ಕದನʼ ಚಿತ್ರದ ತಿರುಳು ಇದಾಗಿದೆ. ಕಾಂತಾರ-2, 2024ರಲ್ಲಿ ಥಿಯೇಟರ್‌ಗೆ ಬರಲಿದೆ ಎಂದು ರಿಷಬ್‌ ಖಚಿತಪಡಿಸಿದ್ದಾರೆ.

ಇದನ್ನೂ ಓದಿ: Rishab Shetty: ಜಿನೀವಾದಲ್ಲಿ ಕಾಂತಾರ ಸಿನಿಮಾ ವಿಶೇಷ ಪ್ರದರ್ಶನ, ಫೋಟೊ ಹಂಚಿಕೊಂಡ ರಿಷಬ್‌

ರಿಷಬ್‌ ಶೆಟ್ಟಿ ಪೋಸ್ಟ್‌

ಕಾಂತಾರ-1ರಲ್ಲಿ ನಾಯಕ ಶಿವ ಮತ್ತು ಅವರ ತಂದೆಯಾಗಿ ರಿಷಬ್ ಶೆಟ್ಟಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತೂಮಿನಾಡ್, ನವೀನ್ ಡಿ ಪಡೀಲ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಾಂತಾರ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಕಾಂತಾರ ಕನ್ನಡದಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡಾಗ ಹಿಂದಿ, ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ತೆರೆಕಂಡಿತು.

Exit mobile version