Site icon Vistara News

Rishab Shetty | ರಿಷಬ್‌ ಶೆಟ್ಟಿ ನಿರ್ಮಾಣದ ʻಶಿವಮ್ಮʼ ಫ್ರಾನ್ಸ್‌ನ ʻಯುವ ತೀರ್ಪುಗಾರರ ಅವಾರ್ಡ್‌ʼಗೆ ಭಾಜನ

Rishab Shetty (shivamma Film)

ಬೆಂಗಳೂರು : ರಿಷಬ್‌ ಶೆಟ್ಟಿ (Rishab Shetty) ನಿರ್ಮಾಣದಲ್ಲಿ ಮೂಡಿಬಂದ ʻಶಿವಮ್ಮʼ ಸಿನಿಮಾಗೆ ಸಾಕಷ್ಟು ಪ್ರಶಸ್ತಿಗಳು ಲಭಿಸಿವೆ. ಇದೀಗ ಫ್ರಾನ್ಸ್‌ನ ನಾಂಟೆಸ್‌ನಲ್ಲಿ ನೆಡೆದ ಫೆಸ್ಟಿವಲ್ 3 ಕಾಂಟಿನೆಂಟ್‌ನಲ್ಲಿ ‘ಯುವ ತೀರ್ಪುಗಾರರ ಅವಾರ್ಡ್’ ಪಡೆದುಕೊಂಡಿದೆ. ಈ ಚಿತ್ರವನ್ನು ಜೈ ಶಂಕರ್‌ ಆರ್ಯರ್‌ ನಿರ್ದೇಶನ ಮಾಡಿದ್ದಾರೆ.

ಈ ಸಿನಿಮಾದಲ್ಲಿ ಶರಣಮ್ಮ ಚಟ್ಟಿ, ಚೆನ್ನಮ್ಮ ಅಬ್ಬಿಗೆರೆ, ಶಿವು ಅಬ್ಬಿಗೆರೆ, ಶ್ರುತಿ ಕೊಂಡೇನಹಳ್ಳಿ ಸೇರಿದಂತೆ ಅನೇಕ ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ. ಈ ಹಿಂದೆ ಅಷ್ಟೇ ಈ ಸಿನಿಮಾಗೆ 27ನೇ ಬೂಸಾನ್‌ ಅಂತಾರಾಷ್ಟ್ರೀಯ ಪ್ರಶಸ್ತಿ (Busan International Film Festival) ಲಭಿಸಿತ್ತು. ಏಷ್ಯಾದ ಅತಿದೊಡ್ಡ ಫಿಲ್ಮ್ಸ್ ಉತ್ಸವದಲ್ಲಿ ಒಟ್ಟು 10 ಚಲನಚಿತ್ರಗಳು ಉನ್ನತ-ಪ್ರೊಫೈಲ್ ನ್ಯೂ ಕರೆಂಟ್ಸ್ ಪ್ರಶಸ್ತಿಗಾಗಿ ಸ್ಪರ್ಧಿಸಿದ್ದವು.

ʻಶಿವಮ್ಮʼ ಚಿತ್ರ ಹಳ್ಳಿಗಾಡಿನ ಮಹಿಳೆಯೊಬ್ಬರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ನೆಟ್‌ವರ್ಕ್‌ ವಹಿವಾಟಿನಲ್ಲಿ ಹೂಡಿಕೆ ಮಾಡುವ ವಿಭಿನ್ನ ಕಥಾ ಹಂದರ ಹೊಂದಿದೆ. ರಿಷಬ್‌ ಶೆಟ್ಟಿ ನಿರ್ಮಾಣದ ʻಪೆಡ್ರೋʼ ಕೂಡ ಹಿಂದಿನ ವರ್ಷ ಈ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿತ್ತು.

ಇದನ್ನೂ ಓದಿ | Rishab Shetty | ರಿಷಬ್‌ ಶೆಟ್ಟಿ ನಿರ್ಮಾಣದ ʻಶಿವಮ್ಮʼ ಚಿತ್ರಕ್ಕೆ ಬೂಸಾನ್‌ ಚಲನಚಿತ್ರೋತ್ಸವ ಪ್ರಶಸ್ತಿ

ಸಿನಿಮಾದ ಕಥೆ ಏನು?
ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುವ ೪೬ ವರ್ಷದ ಶಿವಮ್ಮ ಎನ್ನುವ ಮಹಿಳೆ ತನ್ನ ಪಾರ್ಶ್ವವಾಯು ಪೀಡಿತ ಪತಿಯನ್ನು ಸಾಕಿಕೊಂಡು, ತನ್ನ ಮಕ್ಕಳ ಭವಿಷ್ಯಕ್ಕಾಗಿ ನೆಟ್ವರ್ಕ್ ಮಾರ್ಕೆಟಿಂಗ್ ವ್ಯಾಪಾರವನ್ನು ಭರವಸೆಯಿಂದ ಪಾಲಿಸುವ ಹೋರಾಟದ ಕಥೆಯನ್ನು ಸಿನಿಮಾ ಮಾಡಿದ್ದಾರೆ ನಿರ್ದೇಶಕರು. ಆದಷ್ಟು ನೈಜವಾಗಿಯೇ ಇಡೀ ಸಿನಿಮಾವನ್ನು ಕಟ್ಟಿರುವುದು ಮತ್ತೊಂದು ವಿಶೇಷ.

ಚಿತ್ರವನ್ನು ಕೊಪ್ಪಳ ಜಿಲ್ಲೆಯ ಕುಕ್ನೂರು ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ಚಿತ್ರೀಕರಣವಾಗಿದ್ದು,  ಸಂಪೂರ್ಣ ನಟರೆಲ್ಲ ಅದೇ ಊರಿನವರಾಗಿದ್ದಾರೆ. ಎಲ್ಲರೂ ಮೊದಲ ಬಾರಿ ನಟಿಸಿರುವುದು ವಿಶೇಷ. 

ಇದನ್ನೂ ಓದಿ | Kantara Movie | ಕಾಂತಾರ ತುಳು ಟ್ರೈಲರ್‌ ಔಟ್‌: ಕಾಂತಾರ-2ಗೆ ಸಿದ್ಧತೆ ಮಾಡಿಕೊಳ್ತಿದ್ದಾರಾ ರಿಷಬ್‌ ಶೆಟ್ಟಿ?

Exit mobile version