Site icon Vistara News

Salaar Movie: ಸಲಾರ್‌ ಸೆಟ್‌ನಲ್ಲಿ ರಿಷಬ್‌ ಶೆಟ್ಟಿ; ರಟ್ಟಾಯ್ತು ಗುಟ್ಟು!

Rishab shetty salaar film set in mangalore

ಬೆಂಗಳೂರು: ಲಾರ್‌ (Salaar Movie) ಚಿತ್ರತಂಡ ಇದುವರೆಗೂ ಯಾವುದೇ ಗುಟ್ಟನ್ನು ರಟ್ಟು ಮಾಡಿಲ್ಲ. ಸೆಟ್‌ ಫೋಟೊಗಳಾಗಲಿ, ಸ್ಥಳಗಳನ್ನಾಗಲಿ ಯಾವುದನ್ನೂ ಹಂಚಿಕೊಂಡಿಲ್ಲ. ಇತ್ತೀಚೆಗೆ ಮಂಗಳೂರಿನಲ್ಲಿ ‘ಸಲಾರ್’ ಸಿನಿಮಾ ಚಿತ್ರೀಕರಣ ನಡೆದಿದ್ದು ರಿಷಬ್ ಶೆಟ್ಟಿ ಸೆಟ್‌ಗೆ ಹೋಗಿ ಬಂದಿದ್ದಾರೆ. ಈ ಉಹಾಪೋಹಗಳು ಸೋಷಿಯಲ್‌ ಮೀಡಿಯಾದಲ್ಲಿ ಕೆಲವು ದಿನಗಳ ಹಿಂದೆ ಹರಿದಾಡುತ್ತಿತ್ತು. ‘ಕಾಂತಾರ’-2 ಸಿನಿಮಾ ಪ್ರೀಪ್ರೊಡಕ್ಷನ್‌ ವರ್ಕ್‌ನಲ್ಲಿ ಬ್ಯುಸಿ ಇರುವ ರಿಷಬ್ ‘ಸಲಾರ್’ ಸೆಟ್‌ನಲ್ಲಿ ಹೊಂಬಾಳೆ ಪ್ರೊಡಕ್ಷನ್ ಮ್ಯಾನೇಜರ್‌ನ ಭೇಟಿ ಮಾಡಿ ಬಂದಿದ್ದಾರೆ.

‘ಕಾಂತಾರ’- 2 ಲೊಕೇಶನ್ ಬಗ್ಗೆ ಮಾತುಕತೆ ನಡೆಸಿ ಬಂದಿದ್ದಾರೆ. ಇದೇ ವೇಳೆ ಪ್ರಶಾಂತ್‌ ನೀಲ್ ಜತೆ ರಿಷಬ್ ಪರಸ್ಪರ ಮಾತುಕತೆ ನಡೆಸಿದ್ದಾರೆ. ‘ಸಲಾರ್‌’ ಚಿತ್ರದ ಮುಖ್ಯ ಸನ್ನಿವೇಶಗಳ ಚಿತ್ರೀಕರಣ ಈಗಾಗಲೇ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್‌, ಡಬ್ಬಿಂಗ್ ವರ್ಕ್ ಚಾಲ್ತಿಯಲ್ಲಿದೆ. ಒಂದು ಸಾಂಗ್ ಶೂಟಿಂಗ್ ಮಾತ್ರ ಬಾಕಿಯಿದೆ ಎನ್ನಲಾಗ್ತಿದೆ. ಅದು ಚಿತ್ರದ ಸ್ಪೆಷಲ್ ಸಾಂಗ್ ಆಗಿರಬಹುದು ಎನ್ನುವ ಅಂದಾಜಿದೆ. ಅದು ಬಿಟ್ಟರೆ ಪ್ರಭಾಸ್ ಕಾಣಿಸಿಕೊಂಡಿರುವ ದೃಶ್ಯಗಳ ಚಿತ್ರೀಕರಣ ಮುಕ್ತಾಯವಾಗಿದೆ.

ಸೆಪ್ಟೆಂಬರ್ 28 ರಂದು

ಪ್ಯಾನ್-ಇಂಡಿಯನ್ ಸ್ಟಾರ್ ಪ್ರಭಾಸ್ ಸಲಾರ್ (Salaar Movie ) ಇನ್ನೆರಡು ತಿಂಗಳಲ್ಲಿ ರಿಲೀಸ್‌ ಆಗಲಿದೆ. ಈಗಾಗಲೇ ಸಿನಿಮಾದ ಟ್ರೆಂಡ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಇದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವು ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಸೆಪ್ಟೆಂಬರ್ 28 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಸಲಾರ್ ನಿರ್ಮಾಪಕರು ಚಿತ್ರದ ಇಂಗ್ಲಿಷ್ ಆವೃತ್ತಿಯನ್ನು ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆ ಎಂತಲೂ ವರದಿಯಾಗಿದೆ.

‘ಸಲಾರ್’ ಟೀಸರ್ ಈಗಾಗಲೇ ಬಿಡುಗಡೆಗೊಂಡಿದ್ದು. ಸೂಪರ್ ಹಿಟ್ ಆಗಿದೆ. 100 ಮಿಲಿಯನ್‌ಗೂ ಅಧಿಕ ವೀವ್ಸ್ ಸಾಧಿಸಿದೆ. ಆದರೂ ಕೂಡ ಟೀಸರ್ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಪ್ರಭಾಸ್‌ ಲುಕ್ ರಿವೀಲ್ ಮಾಡಿಲ್ಲ ಎಂದಿದ್ದರು. ಹಾಗಾಗಿ ಚಿತ್ರತಂಡ ಪೋಸ್ಟ್ ಮಾಡಿ ಆಗಸ್ಟ್ ಕೊನೆಗೆ ಟ್ರೈಲರ್ ರಿಲೀಸ್ ಮಾಡುತ್ತೇವೆ ಎಂದಿದ್ದರು.

ಇದನ್ನೂ ಓದಿ: Salaar Movie : ಪ್ರಭಾಸ್ ನಟನೆಯ ʻಸಲಾರ್‌ʼನಲ್ಲಿ ಕಾಳಿ ಮಾತೆಯ ದಿವ್ಯ ರೂಪ!

ಇನ್ನು ಸಲಾರ್‌ ಸಿನಿಮಾದ ವಿತರಣೆ ಹಕ್ಕನ್ನು ಪ್ರತ್ಯಾಂಗೀರ್‌ ಸಿನಿಮಾಸ್‌ ಪಡೆದುಕೊಂಡಿದೆ. ಸಿನಿಮಾವನ್ನು ಭರ್ಜರಿಯಾಗಿ ಬಿಡುಗಡೆ ಮಾಡುವುದಕ್ಕೆ ಪ್ರತ್ಯಾಂಗೀರ್‌ ಸಿನಿಮಾಸ್‌ ಭಾರೀ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಎಲ್ಲೆಡೆ ಸಿನಿಮಾ ಬಿಡುಗಡೆಗೆ ಮೊದಲೇ ಭಾರೀ ಸದ್ದು ಮಾಡುತ್ತಿದ್ದು, ಈ ಸಿನಿಮಾ ಪ್ರಭಾಸ್‌ಗೆ ಮತ್ತೆ ಒಳ್ಳೆಯ ಫೇಮ್‌ ಒಂದನ್ನು ತಂದುಕೊಡುವ ನಿರೀಕ್ಷೆಯಿದೆ. ಬಹು ನಿರೀಕ್ಷೆಯ ಸಲಾರ್‌ ಸಿನಿಮಾದಲ್ಲಿ ನಟಿ ಶ್ರುತಿ ಹಾಸನ್‌ ಅವರು ನಾಯಕ ನಟಿಯಾಗಿದ್ದಾರೆ. ಪೃಥ್ವಿರಾಜ್‌ ಸುಕುಮಾರನ್‌, ಜಗಪತಿ ಬಾಬು, ಈಶ್ವರಿ ರಾವ್‌ ಸೇರಿ ಅನೇಕರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Salaar Movie : ಅಮೆರಿಕದಲ್ಲಿ ದಾಖಲೆ ಬರೆಯಲಿದೆ ಪ್ರಭಾಸ್‌ನ ಸಲಾರ್‌; ಶುರುವಾಗಿದೆ 1979 ಲೆಕ್ಕಾಚಾರ!

ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ ಅಡಿಯಲ್ಲಿ ವಿಜಯ್‌ ಕಿರಗಂದೂರು ಅವರು ನಿರ್ಮಾಣ ಜವಾಬ್ದಾರಿ ಹೊತ್ತಿರುವ ಸಿನಿಮಾಕ್ಕೆ ಕೆಜಿಎಫ್‌ ಖ್ಯಾತಿಯ ರವಿ ಬಸ್ರೂರು ಅವರು ಸಂಗೀತ ನಿರ್ದೇಶಕರಾಗಿದ್ದಾರೆ.

Exit mobile version