Site icon Vistara News

Rishab Shetty: ಆರ್​ಸಿಬಿಗೆ ʻಜೈʼ ಎಂದ ರಿಷಬ್ ಶೆಟ್ಟಿ ಪುತ್ರಿ ರಾಧ್ಯಾ: ಮುದ್ದು ಕಂದಮ್ಮನ ವಿಡಿಯೊ ವೈರಲ್‌

Rishabh Shetty's daughter Radhya celebrates rcb win

ಬೆಂಗಳೂರು: ಆರ್​ಸಿಬಿ ತಂಡದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ ಅವರು ಗುರುವಾರ ( ಮೇ 18ರಂದು) ನಡೆದ ಐಪಿಎಲ್​(IPL 2023) ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ಶತಕ ಬಾರಿಸುವ ಮೂಲಕ ತಮ್ಮ ಐಪಿಎಲ್​ ವೃತ್ತಿಜೀವನದಲ್ಲಿ 6ನೇ ಶತಕವನ್ನು ಪೂರೈಸಿದರು. ಈ ಮೂಲಕ ಕ್ರಿಸ್​ ಗೇಲ್​ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದರು. ಆರ್‌ಸಿಬಿ ಗೆದ್ದಿದ್ದಕ್ಕೆ ‘ಕಾಂತಾರ’ (Kantara) ಹೀರೊ ರಿಷಬ್ ಶೆಟ್ಟಿ (Rishab Shetty) ಪುತ್ರಿ ರಾಧ್ಯಾ ಸಂಭ್ರಮಿಸಿರುವ ವಿಡಿಯೊ ವೈರಲ್ ಆಗಿದೆ.

ವಿರಾಟ್​ ಕೊಹ್ಲಿ ಪಾಲಿಗೆ ಇದು ನಾಲ್ಕು ವರ್ಷಗಳ ಬಳಿಕ ಬಾರಿಸಿದ ಶತಕವಾಗಿದೆ. 2019ನೇ ಅವೃತ್ತಿಯಲ್ಲಿ ವಿರಾಟ್​ ಕೊಹ್ಲಿ ಕೋಲ್ಕೊತಾ ನೈಟ್​ ರೈಡರ್ಸ್​ ತಂಡ ವಿರುದ್ಧ ಶತಕ ಬಾರಿಸಿದ್ದರು. ಆ ಬಳಿಕದ ಮೂರು ಆವೃತ್ತಿಯಲ್ಲಿ ಅವರ ಬ್ಯಾಟಿಂಗ್ ವೈಖರಿ ಕಳೆಗುಂದಿತ್ತು. ಇದೀಗ ಎಸ್ಆರ್​ಎಚ್​ ವಿರುದ್ಧ ಮತ್ತೆ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದಾರೆ. ಇದೀಗ ರಿಷಬ್‌ ಪುತ್ರಿ ರಾಧ್ಯಾ ಆರ್‌ಸಿಬಿ ಗೆದ್ದಿದ್ದಕ್ಕೆ ಆರ್​ಸಿಬಿಗೆ ಜೈ ಎಂದು ಸಂಭ್ರಮಿಸಿದ್ದಾರೆ. ಮುದ್ದು ಕಂದ ಕುಣಿದಾಡಿರುವ ವಿಡಿಯೊಗೆ ನೆಟ್ಟಿಗರು ಕಮೆಂಟ್‌ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ: Karnataka Election 2023: ಮತದಾನಕ್ಕೆ ಮದುಮಗನಂತೆ ಬಂದ ಡಾಲಿ; ಹೇಗಿತ್ತು ನೋಡಿ ರಿಷಬ್‌ ಶೆಟ್ಟಿ ಶೈಲಿ

ರಾಧ್ಯಾ ಸಂಭ್ರಮಿಸಿದ್ದು ಹೀಗೆ!

ರಿಷಬ್‌ ಶೆಟ್ಟಿ ಕೆಲವು ದಿನಗಳ ಹಿಂದೆಯಷ್ಟೇ ಫ್ಯಾಮಿಲಿ ಫೋಟೊಶೂಟ್‌ ಶೇರ್‌ ಮಾಡಿಕೊಂಡಿದ್ದರು. ಕಾಂತಾರ 2 ಸಿನೆಮಾದ ಕೆಲಸದಲ್ಲಿ ಬ್ಯುಸಿಯಾಗಿರುವ ರಿಷಬ್ ಶೆಟ್ಟಿ ಕಾಂತಾರ ಚಿತ್ರದ ಎರಡನೇ ಭಾಗದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಚಿತ್ರದಲ್ಲಿ ಯಾರೆಲ್ಲ ಕಲಾವಿದರು ಇರಲಿದ್ದಾರೆ? ಹೊಸಬರಾಗಿ ಯಾರು ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂಬ ಕುತೂಹಲ ಶುರುವಾಗಿದ್ದು, ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ಆಗುತ್ತಿವೆ.

ಕಾಂತಾರ-1 (Kantara Movie ) ವಿಶ್ವಾದ್ಯಂತ 400 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್‌ ಮಾಡಿದೆ. ಕಾಂತಾರ ಚಿತ್ರದ ಮೂಲಕ ಪ್ಯಾನ್-ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದರು ರಿಷಬ್‌. ಕಾಂತಾರ-1 ಸಿಕ್ವೆಲ್‌ ಆಗಿದ್ದರೆ, ಕಾಂತಾರ-2 ಪ್ರಿಕ್ವೆಲ್‌ (Prequel film) ಆಗಿ ಮೂಡಿಬರಲಿದೆ. ಕಾಂತಾರ-2 ಸಿನಿಮಾ ಕಾಂತಾರಕ್ಕಿಂತ ಮೊದಲಿನ ಕತೆಯಾಗಿರಲಿದೆ.

Exit mobile version