ಬೆಂಗಳೂರು: ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ಮಾಡೆಲ್ ಹಾಗೂ ನಟಿ ರಿಶ್ತಾ ಲಬೋನಿ ಶಿಮಾನಾ (Rishta Laboni Shimana) ನಿಧನರಾಗಿದ್ದಾರೆ. ಬಾಂಗ್ಲಾದೇಶದ ಖ್ಯಾತ ನಟಿಯಾಗಿ ಗುರುತಿಸಿಕೊಂಡಿರುವ ರಿಶ್ತಾ ಲಬೋನಿ ಶಿಮಾನಾ ಬ್ರೈನ್ ಹ್ಯಾಮ್ರೇಜ್‌ನಿಂದ ಆಸ್ಪತ್ರೆ ದಾಖಲಾಗಿದ್ದರು. ಅವರಿಗೆ 39 ವರ್ಷ ವಯಸ್ಸಾಗಿತ್ತು. 14 ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ರಿಷ್ತಾ ಜೂ.5ರಂದು ನಿಧನರಾಗಿದ್ದಾರೆ.
ನಟಿ ರಿಶ್ತಾ ಲಬೋನಿ ಶಿಮಾನಾ ಸಹೋದರ ಎಜಾಜ್ ಬಿನ್ ಅಲಿ ಮತ್ತು ಮಾಜಿ ಪತಿ ಗಾಯಕ ಪರ್ವೇಜ್ ಸಜಾದ್ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಮೇ.21ರಂದು ಬ್ರೈನ್ ಹ್ಯಾಮ್ರೇಜ್ ಸಮಸ್ಯೆಯಿಂದ ತೀವ್ರ ಅಸ್ವಸ್ಥಗೊಂಡಿದ್ದ ನಟಿಯನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಕುಟುಂಬದ ಮಾಹಿತಿ ಪ್ರಕಾರ, ಶಿಮಾನಾ ಅವರು ಮೇ 21ರ ರಾತ್ರಿ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾಗಿದ್ದರು. ಮತ್ತು ಅವರನ್ನು ಢಾಕಾದ ಧನ್ಮಂಡಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಮರುದಿನ ಉತ್ತಮ ಚಿಕಿತ್ಸೆಗಾಗಿ ಧನ್ಮಂಡಿಯ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ರಾಜಧಾನಿಯ ಅಗರಗಾಂವ್‌ನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂರೋಸೈನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. , ಅಲ್ಲಿ ಅವರು ಮೇ 25 ರಂದು ಮಿದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಮೆದುಳು ಸರ್ಜರಿ ಬಳಿಕ ನಟಿಯ ಆರೋಗ್ಯ ಮತ್ತಷ್ಟು ಕ್ಷೀಣಿಸಿತ್ತು. ಹೀಗಾಗಿ ಶೇಕ್ ಮುಜೀಬ್ ಮೆಡಿಕಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಮೇ.29ರಿಂದ ವೆಂಟಿಲೇಟರ್ ನೆರವಿನಲ್ಲಿದ್ದ ನಟಿ ರಿಶ್ತಾ ಲಬೋನಿ ಶಿಮಾನಾ ಇದೀಗ ನಿಧನರಾಗಿದ್ದಾರೆ.
ಇದನ್ನೂ ಓದಿ: Death News: ಬಿಎಸ್‌ವೈ ಆಪ್ತ ಕಾ.ಪು ಸಿದ್ದಲಿಂಗಸ್ವಾಮಿ ನಿಧನ
ಬಾಂಗ್ಲಾದ ಹಲವು ಸಿನಿಮಾದಲ್ಲಿ ನಾಯಕಿಯಾಗಿ ರಿಶ್ತಾ ಲಬೋನಿ ಶಿಮಾನಾ ಕಾಣಿಸಿಕೊಂಡಿದ್ದಾರೆ. ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ರಿಷ್ತಾ 2014ರಲ್ಲಿ ಗಾಯಕ ಪರ್ವೆಜ್ ಸಜ್ಜದ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ರಿಶ್ತಾ ಲಬೋನಿ ಶಿಮಾನಾ ಅವರು ತೌಕಿರ್ ಅಹ್ಮದ್ ಅವರ ಚಲನಚಿತ್ರ “ದಾರುಚಿನಿ ದ್ವಿಪ್” ನಲ್ಲಿ ಕಾಣಿಸಿಕೊಂಡಿದ್ದರು. 2016ರಲ್ಲಿ ತಾಯಿಯಾಗಿ ಬಡ್ತಿ ಪಡೆದ ನಟಿ ಸಿನಿಮಾದಿಂದ ದೂರ ಉಳಿದಿದ್ದರು. ಆದರೆ ಪರ್ವೆಜ್ ಜೊತೆಗಿನ ವಿಚ್ಚೇದನ ಬಳಿಕ ಮತ್ತೆ ಸಿನಿಮಾಗೆ ಮರಳಿದ್ದರು. ನಟಿ ನಿಧನಕ್ಕೆ ಬಾಂಗ್ಲಾದೇಶ ಸಿನಿಮಾ ಜಗತ್ತು ಕಂಬನಿ ಮಿಡಿದಿದೆ.