ಬೆಂಗಳೂರು: ಹಾಲಿವುಡ್ ನಟ ರಾಬರ್ಟ್ ಡಿ ನಿರೋ (Robert De Niro) ಇದೀಗ ಏಳನೇ ಬಾರಿಗೆ ತಂದೆಯಾಗಿದ್ದಾರೆ. ತಮ್ಮ 79ನೇ ವಯಸ್ಸಿನಲ್ಲಿ ಏಳನೇ ಮಗುವಿಗೆ ತಂದೆಯಾಗಿದ್ದಾರೆ. ಈ ಸುದ್ದಿಯನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ. ರಾಬರ್ಟ್ ಡಿ ನಿರೋ ತಮ್ಮ ಮುಂಬರುವ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದರು. ಈ ವೇಳೆ ಸಂದರ್ಶಕರು ನಿಮಗೆ ಆರು ಮಕ್ಕಳು ಅಲ್ಲವೆ? ಎನ್ನುವ ಪ್ರಶ್ನೆಗೆ ಅಲ್ಲ ಏಳು ಎಂದು ಹೇಳುವ ಮೂಲಕ ನಿರೂಪಕರನ್ನೇ ಬೆಚ್ಚಿಬೀಳಿಸಿದ್ದಾರೆ.
ರಾಬರ್ಟ್ ಡಿ ನಿರೋ ಅವರು 60ರ ದಶಕದಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ. ಸದ್ಯ ‘ಕಿಲ್ಲಿಂಗ್ ಆಫ್ ದಿ ಫ್ಲವರ್ ಮೂನ್’, ‘ಅಬೌಟ್ ಮೈ ಫಾದರ್’, ‘ವೈಸ್ ಗಯ್ಸ್’ ಮೊದಲಾದ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈಗ ಏಳನೇ ಮಗುವಿನ ವಿಚಾರ ರಿವೀಲ್ ಮಾಡಿದ್ದಾರೆ.
ಚಿತ್ರದ ಪ್ರಚಾರದ ಸಂದರ್ಭದಲ್ಲಿ, ನಟ ಮಾತನಾಡಿ ʻʻತನ್ನ ಮಕ್ಕಳಿಗೆ ಅತಿರೀಕ ಶಿಸ್ತುಬದ್ಧಗೊಳಿಸಲು ಇಷ್ಟಪಡುವುದಿಲ್ಲ. ಆದರೆ ಕೆಲವೊಮ್ಮೆ ಅಗತ್ಯವಾಗಿರುತ್ತದೆ ಎಂದು ಹೇಳಿದರು. “ನನ್ನ ಪ್ರಕಾರ ಪೋಷಕರಾದವರು ಯಾವಾಗಲೂ ಮಕ್ಕಳಿಂದ ಸರಿಯಾದ ಕೆಲಸವನ್ನು ಮಾಡಲು ಬಯಸುತ್ತಾರೆ. ಆದರೆ ಕೆಲವೊಮ್ಮೆ ಅದು ಅಸಾಧ್ಯʼʼಎಂದರು.
ಇದನ್ನೂ ಓದಿ: Priyanka Chopra : ಬಾಲಿವುಡ್ನ ಪೊಲಿಟಿಕ್ಸ್ಗೆ ಹೆದರಿ ಹಾಲಿವುಡ್ಗೆ ಓಡಿದ್ದೆ ಎಂದ ನಟಿ ಪ್ರಿಯಾಂಕ ಚೋಪ್ರಾ
ರಾಬರ್ಟ್ ಡಿ ನಿರೋಗೆ ಇಬ್ಬರು ಪತ್ನಿಯರು ಹಾಗೂ ಮಾಡೆಲ್ ಜತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದಾರೆ. ಇಬ್ಬರು ಪತ್ನಿಯರಿಗೆ ತಲಾ ಎರಡು ಮಕ್ಕಳು. ಮಾಡೆಲ್ ಜತೆ ಅವಳಿ ಮಕ್ಕಳಿಗೆ ತಂದೆಯಾಗಿದ್ದಾರೆ. ಅಲ್ಲದೇ, ಏಳನೇ ಮಗುವಿನ ತಾಯಿ ಯಾರು ಎನ್ನುವುದನ್ನು ಅವರು ಬಹಿರಂಗ ಪಡಿಸಿಲ್ಲ. ಇಬ್ಬರು ಪತ್ನಿಯರಿಗೆ ವಿಚ್ಚೇದನ ನೀಡಿದ್ದ ಅವರು ಮಾಡೆಲ್ ಜತೆ ಜೀವನ ನಡೆಸುತ್ತಿದ್ದಾರೆ. ಎರಡು ಅಕಾಡೆಮಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.